ಸೌಜನ್ಯ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆ?

   ಒಂದು ವರ್ಷದ ಹಿಂದೆ ಹತ್ಯೆಗೀಡಾದ ಧರ್ಮಸ್ಥಳದ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಆಕೆಯ ಪೊಷಕರು ಹಾಗೂ ವಿವಿಧ ಸಂಘಟನೆಗಳು ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಿವೆ. 
    ಏತಮಧ್ಯೆ ಪ್ರಕರಣದಲ್ಲಿ ಅನವಶ್ಯಕವಾಗಿ ಕೆಲವರ ತೆಜೋವಧೆ ಮಾಡಲಾಗುತ್ತಿದೆ ಎಂಬ ಕೂಗು ಒಂದೆಡೆ ಕೇಳಿಬರುತ್ತಿದ್ದರೇ, ಇದರಲ್ಲಿ ಪ್ರಭಾವಿಗಳ ಕೈವಾಡವಿದ್ದು ನಿಷ್ಪಕ್ಷಪಾತ ತನಿಕೆಯಾಗಬೇಕಾದರೆ ಸಿಬಿಐ ಮೊರೆ ಹೊಗಲೇಬೇಕು ಎಂಬ ಆಗ್ರಹ ಇನ್ನೊಂದೆಡೆ. ಎಲ್ಲೆಡೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ತಿಳಿಸಿ. ಬಲಭಾಗದಲ್ಲಿರುವ Poll ನಲ್ಲಿ ಓಟ್ ಮಾಡಿ. ಸಾಮಾಜಿಕ ತಾಣದಲ್ಲಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ಒಟ್ಟಿನಲ್ಲಿ ಸೌಜನ್ಯಳಂತಹ ಬದುಕನ್ನು ಕಳೆದುಕೊಂಡ ಅದೆಷ್ಟೋ ಹೆಣ್ಣು ಜೀವಗಳಿಗೆ ನ್ಯಾಯ ಸಿಗುವಂತಾಗಲಿ. ವಿಕೃತ ಪಾತಕಿಗಳಿಗೆ ತಕ್ಕ ಶಾಸ್ತಿಯಾಗಲಿ.

ನಿಮ್ಮ ಅಭಿಪ್ರಾಯ ಬರೆಯಿರಿ - editor@kundapra.com