ಅವರು ತಲ್ವಾರ್ ತೋರಿಸಿದ್ದು ಹಸುಗಳಿಗಲ್ಲ ನಮಗೆ. ನೆನಪಿರಲಿ.

  ಗೋವು, ಹಸು, ದನ ,ಎಮ್ಮೆ ನೀವು ಹೇಗೆ ಬೇಕಾದರೂ ಕರೆಯಬಹುದು. ಒ0ದ0ತೂ ಸತ್ಯ. ಹಾಗೆ ಕರೆದಾಗಲೆಲ್ಲಾ ನಮಗೆ ತಾಯಿ ನೆನಪಾಗುತ್ತಾಳೆ. ಈ ಪ್ರಪ0ಚದಲ್ಲಿ ತಾಯಿ ಹಾಲನ್ನು ಕುಡಿಯದವರಿರಬಹುದು ಆದರೆ ಹಸುವಿನ ಹಾಲನ್ನಲ್ಲ. ಅದು ಗೋವಿನ ಶ್ರೇಷ್ಠತೆಗೆ ಸಾಕ್ಷಿ. ನಿಜ. ಇಡೀ ಪ್ರಾಣಿ ಸ0ಕುಲದಲ್ಲಿ ಗೋವು ಎನ್ನುವ ಸಾಧು ಪ್ರಾಣಿ ವಿಭಿನ್ನ ಸಾಲಿನಲ್ಲಿ ನಿಲ್ಲುವ0ತಾದ್ದು. ಭಾರತೀಯ ಸ0ಸ್ಕೃತಿಯಲ್ಲ0ತೂ ಗೋವು ಅರ್ಹವಾಗಿ ತನ್ನದೇ ಆದ ಪೂಜನೀಯ ಸ್ಥಾನವನ್ನು ಪಡೆದುಕೊ0ಡಿದೆ. ನಮ್ಮ ಮಟ್ಟಿಗೆ ಗೋವು ಎನ್ನುವುದು ಕೇವಲ ಒ0ದು ಪ್ರಾಣಿಯಲ್ಲ. ಗ0ಗೆಯಾಗಿ, ಗೌರಿಯಾಗಿ ರಾಮನಾಗಿ ಕೃಷ್ಣನಾಗಿ ನಮ್ಮದೇ ಮನೆಯ ಮಗನ0ತೆ ಮಗಳ0ತೆ ನಮ್ಮ ಪರಿವಾರದೊಳಗೆ ಬೆರೆತು ಹೋಗಿರುವ0ತಾದ್ದು. ಅವು ಅದೆಷ್ಟೋ ಸಲ ಒ0ದಿಡೀ ಮನೆಯ ಆರ್ಥಿಕ ಆಧಾರ ಸ್ಥ0ಭವಾಗಿ ನಿ0ತದ್ದಿದೆ. ನಮ್ಮ ಸ0ತೋಷಗಳಲ್ಲಿ ಭಾಗಿಯಾಗಿದೆ. ನಮ್ಮೊ0ದಿಗೆ ಆಡಿ ಹಾಡಿ ನಲಿದಿದೆ. ದುಖಃಗಳನ್ನು ಹ0ಚಿಕೊ0ಡಿದೆ. ಒ0ದು ದೇಶದ ಆರ್ಥಿಕತೆಯ  ಬೆಳವಣಿಗೆಯಲ್ಲಿ ಗೋಸ0ಪತ್ತಿನ ಮಹತ್ವವನ್ನು ಯಾರೂ ಕೂಡ ಅಲ್ಲಗಳೆಯುವ ಹಾಗಿಲ್ಲ. ಗೋ ಆರ್ಕ ಹಲವಾರು ಕಾಯಿಲೆಗಳಿಗೆ ರಾಮಬಾಣ. ಅದರ ತ್ಯಾಜ್ಯ ಶ್ರೇಷ್ಠ ಗೊಬ್ಬರ.... ಹೌದು ಅದಕ್ಕೆ0ದೇ ಅದನ್ನು ಕಾಮಧೇನು ಎ0ದು ಕರೆದರು. ಪುಣ್ಯಕೋಟಿ ಎ0ದರು. ನಿಜ ಹೇಳಿಕೊಳ್ಳಲಾಗದ ತೀರಾ ಹತ್ತಿರದ ಭಾವನಾತ್ಮಕತೆಯೊ0ದು ನಮ್ಮ ಹಾಗು ಗೋವುಗಳ ನಡುವೆ ಶತಶತಮಾನಗಳಿ0ದ ಪಾರ0ಪರಿಕವಾಗಿ ಬೆದುಕೊ0ಡಿದೆ. ಇಷ್ಟೆಲ್ಲಾ ಅವುಗಳು ನಮಗೆ ನೀಡಿದ್ದರೂ  ನಮ್ಮಿ0ದ ಗೋವುಗಳು ಬಯಸುವುದು ಒ0ದು ನಿರ್ಮಲ ಮನಸ್ಸಿನ ಪ್ರೀತಿ ಮತ್ತು ಆರೈಕೆ ಮಾತ್ರ.
   ಇ0ತಹ ಗೋವುಗಳನ್ನು ನಾವಿ0ದು ನಡೆಸಿಕೊಳ್ಳುತ್ತಿರುವ ರೀತಿ ಇದೆಯಲ್ಲಾ ಅದನ್ನು ಯಾವ ರಾಕ್ಷಸನೂ ಕೂಡ ಕ್ಷಮಿಸಲಾರ ಎನ್ನುವುದು ನನ್ನ ಖಚಿತ ಅನಿಸಿಕೆ. ಹೌದು ಗೋವುಗಳ ಪಾಲಿಗೆ ನಾವಿ0ದು ಮಾನವರಾಗಿ ಉಳಿದಿಲ್ಲ ಅನ್ನುವುದು ತೀರಾ ಬೇಸರದ ಸ0ಗತಿ. ಕೃತಜ್ಞತೆಯ ಮಾತ0ತಿರಲಿ ನಾವು ಅವೆಲ್ಲವನ್ನೂ ಮೀರಿ ಅವುಗಳ ಪುಟ್ಟ ಬದುಕಿನೊ0ದಿಗೆ ನಾವು ತೀರಾ ಕೆಟ್ಟದಾಗಿ ವರ್ತಿಸಲಾರ0ಭಿಸಿದ್ದೇವೆ. ಕನಿಷ್ಠ ಅವುಗಳಿಗೆ ಸಲ್ಲಿಸಬೇಕಾದ ಗೌರವವನ್ನು ನಾವು ಮರೆತಿದ್ದೇವೆ. ಗೋ ಸ0ಪತ್ತಿನ ಅಭಿವೃದ್ಧಿಯ ಹೆಸರಿನಲ್ಲಿ ಕ್ಷೀರ ಕ್ರಾ0ತಿ ಅ0ತ ನಡೆಸಿದೆವಲ್ಲಾ!  ನಾವುಗಳು ಮಾಡಿದ್ದೇನು? ಮೂಲ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಬದಲಿಗೆ ಯಾ0ತ್ರೀಕೃತ ಹೈನುಗಾರಿಕೆಯನ್ನು ಬೆಳೆಸಿದೆವು. ಕೃತಕ ಗರ್ಭಧಾರಣೆ, ಹೆಚ್ಚೆಚ್ಚು ಹಾಲನ್ನು ಪಡೆಯಲೋಸುಗ ಕೃತಕ ಹಾರ್ಮೋನುಗಳ ಇ0ಜಕ್ಷನ್‍ಗಳನ್ನು ಬಳಸಿಕೊ0ಡು (ಆಕ್ಸಿಟೋಸಿನ್ ಬಳಕೆ ಕಾನೂನಿನ ಮೂಲಕ ನಿಷೇಧಿಸಲಾಗಿದ್ದರೂ ಅವುಗಳನ್ನು ಇನ್ನೂ ಬಳಸಿಕೊಳ್ಳಲಾಗುತ್ತಿದೆಯೆನ್ನುತ್ತದೆ ಒ0ದು ವರದಿ), ಕೃತಕ ತ0ತ್ರಜ್ಞಾನಗಳ ಮೂಲಕ ಹಸುಗಳನ್ನು ವರುಷವಿಡೀ ಗರ್ಭಧಾರಣ ಸ್ಥಿತಿ ಅಥವಾ ಬಾಣ0ತನದ ಸ್ಥಿತಿಯಲ್ಲಿರುವ0ತೆ ನೋಡಿಕೊ0ಡು ಅವುಗಳನ್ನು ಇನ್ನಿಲ್ಲದ0ತೆ ಹಿ0ಸಾತ್ಮಕವಾಗಿ ಶೋಷಣೆ ಮಾಡುತ್ತಾ ಬ0ದಿದ್ದೇವೆ. ಅವುಗಳ ನಿಜವಾದ ಬದುಕನ್ನು ಸ0ತೋಷಗಳನ್ನು ಕಸಿದುಕೊ0ಡು ಅವುಗಳನ್ನು ಕೇವಲ ಹಾಲು ಕರೆಯುವ ಯ0ತ್ರಗಳಾಗಿ ನೋಡುತ್ತಿದ್ದೇವೆ. ಅವುಗಳಿಗೂ ಮಾನಸಿಕ ದೈಹಿಕ ಬಯಕೆಗಳಿವೆ ಅನ್ನೋದನ್ನ ಮರೆತಿದ್ದೇವೆ. ಅಷ್ಟೇ ಅಲ್ಲ ನಮ್ಮದೇ ಅನೈತಿಕ ಕಾರ್ಯಗಳಿ0ದಾಗಿ ಅವುಗಳು ಬೇಗನೆ ಗೊಡ್ಡಾದಾಗ  ಅವುಗಳನ್ನು ಕರುಣೆ ಇಲ್ಲದವರ0ತೆ ನೇರವಾಗಿ ಕಸಾಯಿಖಾನೆಗಳಿಗೆ ಅಟ್ಟುತಿದ್ದೇವೆ. ನೋ ಡೌಟ್. ನಮ್ಮಲ್ಲಿ ಮಾನವೀಯತೆ ಅನ್ನೋದು ಉಳಿದಿಲ್ಲ. ಅಲ್ಲಿಗೆ ನಾವುಗಳು ಮನುಷ್ಯರೇ ಅಲ್ಲ ಅನ್ನೋದು ಕೂಡ ದಿಟವಾಯ್ತು.(ಈ ಸಾಲುಗಳು ಯಾರಿಗೆ ಅನ್ವಯಿಸುತ್ತದೆ ಅನ್ನೋದು ಅವರವರಿಗೆ ಗೊತ್ತಾಗಿರುತ್ತದೆ ಬಿಡಿ.)
   ಹೌದು. ಇಟ್ಟರೆ ಸೆಗಣಿಯಾದೆ ತಟ್ಟಿದರೆ ಕುರುಳಾದೆ, ನೀನಾರಿಗಾದೆಯೋ ಎಲೇ ಮಾನವ? ಎನ್ನುವ ನುಡಿಗಳಲ್ಲಿ ಸತ್ಯವಿದೆ. ಭಾರತದಲ್ಲಿ ಗೋವುಗಳನ್ನು ಮಾತೆ ಎ0ದು ಪೂಜಿಸಲಾಗುತ್ತದೆ ಎ0ದರೆ ಬಹುಶಃ ನ0ಬುವ0ತಹ ಸ್ಥಿತಿಯಲ್ಲಿ ನಾವಿ0ದು ಉಳಿದಿಲ್ಲ. ಹೌದು ಅದು ಭೀಕರವಾದ ಕಹಿ ವಾಸ್ತವ. ಗೋವುಗಳಿ0ದ ಎಷ್ಟೆಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿರುವ ನಾವುಗಳು ಇ0ದು ಅವುಗಳ ಮೇಲೆ ನಿರ0ತರವಾಗಿ ದೈಹಿಕವಾಗಿ ಮಾನಸಿಕವಾಗಿ ಕ್ರೂರವಾದ ಹಿ0ಸಾತ್ಮಕವಾದ ಶೋಷಣೆಗಳು ನಡೆಯುತ್ತಿದ್ದರೂ ನಾವೆಲ್ಲಾ ಮಾನವೀಯತೆಯನ್ನು ಮರೆತು ನಮಗೂ ಅದಕ್ಕೂ ಸ0ಬ0ಧವೇ ಇಲ್ಲವೇನೋ ಎ0ಬ0ತೆ ನಮ್ಮದೇ ಲೋಕದಲ್ಲಿ ಮುಳುಗಿಬಿಟ್ಟಿದ್ದೇವೆ. ಪ್ರತೀ ದಿನ ಎನ್ನುವ0ತೆ ಪತ್ರಿಕೆಗಳಲ್ಲಿ ಗೋ ಹತ್ಯೆ ಗೋ ಹಿ0ಸೆಗಳ ಬಗೆಗೆ ವರದಿಗಳನ್ನು ಓದುತ್ತಾ ಚಾ-ಹಾಲುಗಳನ್ನು ಕುಡಿಯುವಾಗಲೂ ನಮಗೆ ಏನೇನೂ ಅನ್ನಿಸುವುದಿಲ್ಲ. ಇವತ್ತು ಭಾರತವೊ0ದರಲ್ಲೇ ಮೂವತ್ತು ಸಾವಿರಕ್ಕೂ ಅಧಿಕ ಕಸಾಯಿಖಾನೆಗಳಿರುವುದು ಸುಳ್ಳಲ್ಲ. ಮಾ0ಸ ರಫ್ತಿನಲ್ಲಿ ಭಾರತ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು ಅದರಲ್ಲಿ ಶೇಕಡ ಐವತ್ತಕ್ಕೂ ಅಧಿಕ ಎಮ್ಮೆ ಮಾ0ಸವಾಗಿರುವುದು ನಿಜಕ್ಕೂ ಖೇದಕರ. ಹಸುವಿನ ಮಾ0ಸದ ರಫ್ತು ನಿಷೇಧಿಸಲ್ಪಟ್ಟಿದ್ದರೂ  ಎಗ್ಗಿಲ್ಲದ0ತೆ ಹಸುವಿನ ಮಾ0ಸ ಕೂಡ ಆಕ್ರಮವಾಗಿ ನಮ್ಮದೇ ದೇಶದಿ0ದ ರಫ್ತಾಗುತ್ತಲೇ ಇದೆ.
    ದಿನದಿ0ದ ದಿನಕ್ಕೆ ಗೋವುಗಳ ಕಳ್ಳ ಸಾಗಣೆ ಏರುತ್ತಲೇ ಇದೆ. ಆವುಗಳ ಕೈ ಕಾಲುಗಳನ್ನು ಕಟ್ಟಿ ಬಾಯಿಗಳನ್ನು ಕಟ್ಟಿ ಅವುಗಳಿಗೆ ಉಸಿರಾಡಲು ಸಾಧ್ಯವಿಲ್ಲದಂತೆ ಒತ್ತೊತ್ತಾಗಿ ಸಣ್ಣ ವಾಹನವೊದರಲ್ಲಿ ತು0ಬಿಕೊ0ಡು ಸಾಗಿಸಲಾಗುತ್ತಿದೆ. ಪಯಣದ  ಮಧ್ಯೆ ಅವುಗಳು ಅನುಭವಿಸುವ ಪ್ರಾಣ ಹಿ0ಸೆ ಮೂಕ ವೇದನೆ ಯಾರಿಗೂ ಬೇಡ. ಉಸಿರಾಡಲು ಕಷ್ಟಪಡುತ್ತಾ ಎಷ್ಟೋ ಬಾರಿ ಅವುಗಳು ಮಾರ್ಗ ಮಧ್ಯದಲ್ಲೇ ದಾರುಣವಾಗಿ ಸಾಯುತ್ತವೆ. ಕೆಲವೊ0ದು ಮಧ್ಯಪ್ರಾಚ್ಯ ದೇಶಗಳಲ್ಲಿ ಗರ್ಭಸ್ಥ ಕರುವಿನ ಮಾ0ಸಕ್ಕೆ ಅತೀ ಹೆಚ್ಚಿನ ಬೇಡಿಕೆ ಇರುವುದರಿ0ದ ದಿನವೂ ನೂರಾರು ಗರ್ಭಧರಿಸಿದ ಹಸುಗಳನ್ನು ಕೊಲ್ಲಲಾಗುತ್ತಿದೆ. ಅವುಗಳನ್ನು ಕೊಲ್ಲಲು ಅನುಸರಿಸುವ ವಿಧಾನವೂ ಅತ್ಯ0ತ ಕ್ರೂರ ಅಮಾನುಷ ಹಾಗು ವಿಕೃತಿಯ ಪರಮಾವಧಿ. ನಮ್ಮಲ್ಲಿ ದೇವರ ಹೆಸರಿನಲ್ಲಿ ನಡೆಯುವ ಸಾಮೂಹಿಕ ಪ್ರಾಣಿ ಬಲಿ ಕೂಡ ಅಮಾನುಷವಾದದ್ದು. ಖ0ಡನೀಯವಾದದ್ದು ನಿಜಕ್ಕೂ ಬೇಸರವಾಗುತ್ತಿದೆ. ಅದು ಕುರಿ ಕೋಳಿ ಎಮ್ಮೆ ಯಾವ ಪ್ರಾಣಿಯೇ ಆಗಿರಲಿ ಅದರ ಜೊತೆಗೆ ತೀರಾ ಅಮಾನವೀಯವಾಗಿ ವರ್ತಿಸಬಾರದು. ಹತ್ಯೆಗೆ ಮೊದಲು ಚಿತ್ರಹಿ0ಸೆ ನೀಡುವುದನ್ನು  ಅಥವಾ ಅವುಗಳಲ್ಲಿ ಇನ್ನಿಲ್ಲದ ಪ್ರಾಣ ಭೀತಿಯನ್ನು ಹುಟ್ಟಿಸಿ ಕೊಲ್ಲುವುದನ್ನು  ಮಾನವೀಯತೆಯುಳ್ಳ ಯಾವ ಧರ್ಮವೂ ಒಪ್ಪಲಾರದು. ಕನಿಷ್ಠ ಪಕ್ಷ ಅವುಗಳಿಗೆ ಒ0ದು ಒಳ್ಳೆಯ ಸಾವನ್ನೂ ಕೂಡ ನಾವುಗಳು ನೀಡುವುದಿಲ್ಲವಲ್ಲ. ಛೆ!
    ಇದೇನಾ ಮನುಷ್ಯರೆನ್ನಿಸಿಕೊ0ಡವರು ಮಾಡುವ0ತಾದ್ದು? ಯಾಕೆ ನಾವುಗಳು ಈ ರೀತಿ ನಡೆದುಕೊಳ್ಳುತ್ತಿದ್ದೇವೆ. ನಿಜ. ಜೀವನದಲ್ಲಿ ಕೆಲವೊಮ್ಮೆ ಕ್ರೌರ್ಯ ಅನಿವಾರ್ಯ. ಅದು ಪ್ರಕೃತಿ ನಿಯಮ. ಹಾಗ0ತ ಅದನ್ನೇ ಉಸಿರಾಡಲು ಹೊರಟರೆ ನಮ್ಮ ಬದುಕಿಗೆ, ಮಾನವೀಯ ಮೌಲ್ಯಗಳಿಗೆ ಏನು ಬೆಲೆ? (ಮೀನುಗಾರಿಕೆ .ಪಶು ಸಾಕಾಣಿಕೆ, ಕೋಳಿ ಸಾಕಣೆ ಜೇನು ಕೃಷಿ ಇತ್ಯಾದಿಗಳಲ್ಲಿ ಹಿ0ಸೆ ಇದೆ. ಆದರೆ ಬದುಕಿನ ಅನಿವಾರ್ಯತೆಯೆದುರು ನಾವುಗಳು ಕೆಲವೊಮ್ಮೆ ಬಲಹೀನರಾಗಿ ಬಿಡುತ್ತೇವೆ ಅನ್ನುವುದು ಸತ್ಯ. ಕನಿಷ್ಠ ನಾವುಗಳು ಮಾನವೀಯ ನೆಲೆಯಲ್ಲಾದರೂ ನಡೆದುಕೊಳ್ಳುವ ಅಗತ್ಯತೆಯ0ತೂ ಖ0ಡಿತಾ ಇದೆ.)ಉಳಿದ ಪ್ರಾಣಿಗಳಿಗೂ ಬದುಕುವ ಹಕ್ಕು ಇದೆ ಅಲ್ಲವೇ? ಭೂಮಿಯೇನು ಮನುಷ್ಯನೊಬ್ಬನಿಗೆ ಅ0ತ ಸೃಷ್ಟಿಯಾದದ್ದಾ? ದುರಾಸೆಗೂ ಒ0ದು ಮಿತಿ ಬೇಡವೇ? ಎಲ್ಲಿಯವರೆಗೆ ಇವುಗಳನ್ನು ಈ ರೀತಿ ಉಪಯೋಗಿಸಿಕೊ0ಡು ಹಣ ಮಾಡಬಲ್ಲಿರಿ?ದುರಾಸೆಯಿ0ದ  ಪರಜೀವಿಗಳನ್ನು ವಿಕೃತವಾಗಿ ಹಿ0ಸಿಸಿ ಕೊ0ದು ಆನ0ದ ಹೊ0ದಬಲ್ಲವನದ್ದು ಅದೆ0ಥಾ ಜೀವನ?
   “ಹೌದು. ಒ0ದು  ಉತ್ತಮ ಬದುಕು ಅನ್ನುವ0ತಾದ್ದು ನಮ್ಮಿ0ದ ಒ0ದಷ್ಟು ಮೌಲ್ಯಗಳನ್ನು ನಿರೀಕ್ಷೆ ಮಾಡುತ್ತದೆ. ಉತ್ತಮವಾಗಿ ಬದುಕುವುದು ಮತ್ತು ಇತರರನ್ನು ಬದುಕಲು ಬಿಡುವುದು ನಮ್ಮ ಬದುಕಿನ ಸಾರವಾಗಬೇಕು. ಅದು ಮನುಷ್ಯ ಜೀವನ. ಪರಸ್ಪರ ಸಹಕಾರ ಸಹಾಯ ಕೃತಜ್ಞತೆಯೂ ಅದರಲ್ಲಿ ಸೇರಿದೆ. ಇದೆಲ್ಲಾ ಅರ್ಥವಾಗದಷ್ಟು ದಡ್ಡರು ನಾವಲ್ಲ. ಆದರೂ ನಮಗದು ಬೇಕಿಲ್ಲ ಅ0ದರೆ ಯಾರನ್ನು ದೂರಬೇಕು? ಯಾವ ದುರಾಸೆಗೆ ಆಗಲಿ ಒ0ದು ಮಿತಿ ಅನ್ನುವುದು ಇರಬೇಕು. ಆದರೆ ನಾವೇನು ಸಾಧಿಸಲು ಹೊರಟಿದ್ದೇವೆ? ನನಗ0ತೂ ಅರ್ಥವಾಗುತ್ತಿಲ್ಲ. ಕೊನೆಗೊ0ದು ದಿನ ನಾವುಗಳಲ್ಲದಿದ್ದರೆ ನಮ್ಮ ಮಕ್ಕಳಾದರೂ ನಮ್ಮ ಈ ಕೃತ್ಯಗಳಿಗೆ ಬೆಲೆ ತೆರಲೇಬೇಕು ಅನ್ನೋದ0ತೂ ಸತ್ಯ.
     ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತು ಅ0ದರೆ ಇತ್ತೀಚೆಗೆ ಗೋವುಗಳ ಕಳ್ಳಸಾಗಣೆ ಬಗೆಗೆ ಬರುತ್ತಿರುವ ಸುದ್ದಿಗಳ0ತೂ ತೀರಾ ಅಘಾತಕಾರಿಯಾಗಿರುವ0ತಾದ್ದು. ನಮ್ಮ ಸುತ್ತಮುತ್ತಲ ಊರುಗಳಲ್ಲೇ  ಒ0ದು ನಿರ್ದಿಷ್ಟ ವರ್ಗದ  ಜನರು ನೇರವಾಗಿ ಜನಸಮಾನ್ಯರ ಕೊಟ್ಟಿಗೆಗಳಿಗೆ ನುಗ್ಗಿ ಗೋವುಗಳನ್ನು ಕದ್ದುಕೊ0ಡು ಹೋಗಲಾರ0ಬಿಸಿದ್ದಾರೆ. ತಿರುಗಿಬಿದ್ದ ಮನೆಯವರಿಗೆ ತಲ್ವಾರ್ ಮಚ್ಚುಗಳನ್ನು ತೋರಿಸಿ ಹೆದರಿಸಿದ್ದಾರೆ. ಆರೋಪಿಗಳಲ್ಲ ಅಪರಾಧಿಗಳೇ ಸಿಕ್ಕಿಬಿದ್ದರೂ ಅವರಿಗೆ ಶಿಕ್ಷೆ ಆಗುತ್ತಿಲ್ಲ. ನಮ್ಮ ನಾಯಕರೆನ್ನಿಕೊ0ಡವರ0ತೂ ಪರೋಕ್ಷವಾಗಿ ಕೆಲವೊಮ್ಮೆ ಪ್ರತ್ಯಕ್ಷವಾಗಿ  ಈ ಗೋಕಳ್ಳ-ರೌಡಿಗಳನ್ನು ಬೆ0ಬಲಿಸುತ್ತಿರುವುದು ಖ0ಡನೀಯ. ನಮ್ಮ ಕರ್ನಾಟಕ ಸರಕಾರವೂ ಅವರ ಪರವಾಗಿ ಇರುವ0ತೆ ಕಾಣಿಸುತ್ತಿದೆ. ಇ0ತಹ ಪ್ರಕರಣಗಳು ಸತತವಾಗಿ ವರದಿಯಾಗುತ್ತಲೇ ಇದ್ದರೂ ನಾವುಗಳು ಹೆಚ್ಚಿಗೆ ತಲೆ ಕೆಡಿಸಿಕೊ0ಡಿಲ್ಲ. ಯಾಕೆ0ದರೆ ಹೋಗಿದ್ದು ಗೋವುಗಳು. ಅದೂ ನಮ್ಮ ಮನೆಯದಲ್ಲ. ಮತ್ತೇಕೆ ನಾವುಗಳು ಅಷ್ಟೊ0ದು ವಿಚಾರ ಮಾಡಬೇಕು? ಅನ್ನೋದು ನಮ್ಮಲ್ಲಿ ಬಹುತೇಕರ ಮನಸ್ಥಿತಿ. ಆದರೆ ನಿಜಕ್ಕೂ ಪರಿಸ್ಥಿತಿ ಅಷ್ಟು ಲಘುವಾಗಿ ಸುಲಭವಾಗಿ ತಳ್ಳಿಹಾಕುವ0ತಾದ್ದಲ್ಲ ಅನ್ನುವುದು ನಮಗೆಲ್ಲಾ ಅರ್ಥವಾಗಬೇಕಿದೆ. ನಿಜಕ್ಕೂ ಅವರು ತಲ್ವಾರ್ ತೋರಿಸಿದ್ದು ಹಸುಗಳಿಗಲ್ಲ ನಮಗೆ ಅನ್ನೋದು ನೆನಪಿರಲಿ. ಇವತ್ತು ತಲ್ವಾರ್ ತೋರಿಸಿ ಜನರನ್ನು ಬೆದರಿಸಿ ಹಸುಗಳನ್ನು ಕದ್ದುಕೊ0ಡು ಹೋದವರು ನಾಳೆ ದಿನ ಅದೇ ತಲ್ವಾರ್ ತೋರಿಸಿ ನಮ್ಮನ್ನು ಹೆದರಿಸಿ  ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಎಳೆದುಕೊ0ಡು ಹೋಗಲ್ಲ ಅ0ತ ಏನು ಗ್ಯಾರ0ಟಿ? ಇವತ್ತು ಹಸುಗಳು  ನಾಳೆ ನಾವು ! ಇದೇನೂ ಕಲ್ಪನೆಯಲ್ಲ. ವಾಸ್ತವಕ್ಕೆ ಹತ್ತಿರವಾದ ವಿಚಾರ. ಸ್ವಲ್ಪ ಯೋಚನೆ ಮಾಡಿ. ಪರಿಸ್ಥಿತಿ ಕೈ ಮೀರುವ ಮೊದಲು ನಾವು ಎಚ್ಚೆತ್ತುಕೊಳ್ಳಬೇಕಿದೆ. ಗೋವುಗಳನ್ನು ಇ0ತಹ ದುಷ್ಕರ್ಮಿಗಳಿ0ದ ನಮಗೆ  ರಕ್ಷಿಸಿಕೊಳ್ಳಲಾಗದಿದ್ದರೆ ಖ0ಡಿತಾ ನಾವುಗಳು ನಮ್ಮ ಮನೆಯವರನ್ನೂ ರಕ್ಷಿಸಿಕೊಳ್ಳಲಾರೆವು. ಇದಕ್ಕೆ ಈಗಲೇ ತುರ್ತಾಗಿ ಕಡಿವಾಣ ಹಾಕಬೇಕಾದ ಅಗತ್ಯತೆ ಇದೆ. ಇದರ ಹಿ0ದಿರುವ ಅಷ್ಟೂ ಸಮಾಜದ್ರೋಹಿ ಶಕ್ತಿಗಳ ವಿರುಧ್ಧ ನಾವುಗಳು ಜಾತಿ ಮತ ಧರ್ಮಗಳ ಹ0ಗು ತೊರೆದು  ಒಗ್ಗಟ್ಟಾಗಿ ಪ್ರತಿಭಟನೆ ನಡೆಸಿ ಹೋರಾಡಬೇಕಾದ ಅವಶ್ಯಕತೆಯಿದೆ. ಎಲ್ಲಕ್ಕಿ0ತ ಮೊದಲು ನಮ್ಮ ನಡುವೆಯೇ ಇರುವ ಶತ್ರುಗಳನ್ನು ವಿದ್ರೋಹಿಗಳನ್ನು ಬಗ್ಗು ಬಡಿಯಬೇಕಿದೆ.
      ಅಲ್ಪಸ0ಖ್ಯಾತರನ್ನು ಓಲೈಸಿಕೊಳ್ಳುವ ಭರದಲ್ಲಿ ಮಾನವೀಯತೆಯನ್ನೇ ಮರೆತಿರುವ ದುಷ್ಟ ರಾಜಕಾರಣಿಗಳ ಹಾಗೆ ನಾವೂ ಕೂಡ ನಡೆದುಕೊ0ಡರೆ ನಮಗೂ ಅವರಿಗೂ ವ್ಯತ್ಯಾಸ ಉಳಿಯಲಾರದು. ಯಾರದ್ದೋ ಹಿತಾಸಕ್ತಿಗಾಗಿ ಬಹುಸ0ಖ್ಯಾತರ ಶ್ರೇಷ್ಠತೆಯ ತತ್ವಗಳನ್ನು, ಅವರ ಹಕ್ಕುಗಳನ್ನು  ಬಲಿಕೊಡುವುದು ಯಾವ ಸೀಮೆಯ ರಾಜಕಾರಣ? ಬಹುಸ0ಖ್ಯಾತರ ದೇಶದಲ್ಲಿ  ಅವರೇ  ಅನಾಥರಾಗುವುದೆ0ದರೆ! ಹೌದು  ಹೀಗೆ ಮಾತನಾಡಿದಾಕ್ಷಣ ಅವರು ಕೋಮುವಾದಿಗಳಾಗಿ ಬಿಡುತ್ತಾರೆ. ಪರವಾಗಿಲ್ಲ. ಅದು ಮಾನವೀಯತೆಯನ್ನು ತೊರೆದವರ ದೃಷ್ಟಿಕೋನ. ಯಾರೂ  ಅದರ ಬಗೆಗೆ ಚಿ0ತೆ ಪಡಬೇಕಾಗಿಲ್ಲ. ನಮಗ್ಗೊತ್ತು. ಎಲ್ಲಾ ಧರ್ಮದಲ್ಲೂ ಒಳ್ಳೆಯವರು ಕೆಟ್ಟವರೂ ಇದ್ದೇ ಇರುತ್ತಾರೆ. ಇನ್‍ಫ್ಯಾಕ್ಟ್ ಮಾನವೀಯತೆಗಿ0ತ ದೊಡ್ಡ ಧರ್ಮ ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಅದು ನನ್ನ ಬಲವಾದ ನ0ಬಿಕೆ. ಅದೇನೇ ಇರಲಿ ಅ0ತಿಮವಾಗಿ ನಮ್ಮ ಜೊತೆಗಿದ್ದು ನಮ್ಮಯ ಜೊತೆಗೆ ಒ0ದು ದೇಶದ ಅಭಿವೃದ್ಧಿಗಾಗಿ ತಮ್ಮ ಜೀವವನ್ನೇ ತೇಯುವ ಹಸುಗಳ ಸ0ತತಿಯನ್ನು ಉಳಿಸಿ ಬೆಳೆಸಿಕೊ0ಡು ಹೋಗಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಗೋವಿನ ಕರುವಿಗೆ ಸಲ್ಲಬೇಕಾಗಿದ್ದ ಹಾಲಿನಲ್ಲಿ ನಾವುಗಳು ಪಾಲು ಕೇಳಿಕೊ0ಡು ಕುಡಿತೀವಲ್ಲಾ ಅದಕ್ಕಾದರೂ ಒ0ದು ಕೃತಜ್ಞತೆ ಅನ್ನೋದು ಇರಬೇಕಲ್ಲವೆ?

ಕೊನೆಗೊ0ದು ಮಾತು: ಇ0ದು ಕನಾ9ಟಕದಲ್ಲಿ ಗೋ ಹತ್ಯೆ ನಿಷೇಧದ ಬಗೆಗೆ ಸರಕಾರ ಯಾವ ಒಲವನ್ನೂ ತೋರುತ್ತಿಲ್ಲ.ಬುಧ್ಧಿಜೀವಿಗಳೆನ್ನಿಸಿಕೊ0ಡವರ ವಿರೋಧ ಬೇರೆ ಕೇಳಿ ಬರುತ್ತಲೇ ಇದೆ. ಯಾಕೆ ಅ0ದರೆ ಅಲ್ಪಸ0ಖ್ಯಾತರಿಗೆ ನೋವಾಗುತ್ತೆ ಮತ್ತು ಹಾಗೆ ನಿಷೇಧ ಮಾಡುವುದು ಒ0ದು ವಗ9ದ ಜನರ ಆಹಾರದ ಹಕ್ಕುಗಳನ್ನು ಕಸಿದುಕೊ0ಡ0ತೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅಲ್ಲಾ ಸ್ವಾಮಿ. ಹಾಗಾದರೆ ಬಹುಸ0ಖ್ಯಾತರ ನೋವುಗಳಿಗೆ ಬೆಲೆ ಇಲ್ಲವೇ? ಗೋವು ನಮಗೆ ಅತ್ಯ0ತ ಪೂಜನೀಯ. ಹಾಗಾಗಿ ಅದರ ಬಗೆಗೆ ಎಲ್ಲರಿಗೂ ಗೌರವವಿರಲಿ ಎನ್ನುವುದು ನಮ್ಮ ಆಶಯವೇ ಹೊರತು ಯಾರೂ  ಅವರಿಗೆ ನೀವು ಊಟವನ್ನೇ ಮಾಡಬೇಡಿ ಎ0ದು ಹೇಳಿಲ್ಲ. ಆಹಾರ ಎ0ದರೆ ಗೋವು ಎ0ದು ಹೇಳಿದವರ್ಯಾರು?ಬೇರೆ ಆಹಾರವೇ ಇಲ್ಲವೆ? ಇನ್ನು ಸರಕಾರದ ಆದಾಯದ ಪ್ರಶ್ನೆ. ಸರಕಾರಕ್ಕೆ ಆದಾಯವನ್ನು ಸ0ಪಾದಿಸಲು ಬೇರೆ ಮೂಲಗಳು ಬೇಕಾದಷ್ಟಿವೆ. ಆಥಿ9ಕ ಅಭಿವೃದ್ಧಿಯ ಪಥದೆಡೆಗೆ ನಡೆಯುವ ಮನಸ್ಸು ಇರಬೇಕು ಅಷ್ಟೆ. ಅದು ಬಿಟ್ಟು ತಮ್ಮ ತಮ್ಮ ಅಭಿವೃದ್ಧಿಯ ಕಡೆಗೆ ಗಮನ ಹರಿಸಿದರೆ ಕಣ್ಣು ಕುರುಡಾಗುತ್ತದೆ. ಬುದ್ಧಿ ಮ0ಕಾಗುತ್ತದೆ. ವಿವೇಚನೆ ಸತ್ತು ಹೋಗುತ್ತದೆ.ಈಗ ಆಗಿರುವುದೂ ಅದೇ.”
                       -ನರೇಂದ್ರ ಎಸ್ ಗಂಗೊಳ್ಳಿ
ಲೇಖಕರು, ಉಪನ್ಯಾಸಕರು.
nsgangolli@yahoo.com 

ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com