.jpg)
ಡಿಸೆಂಬರ 19ರಂದು ಸಂಜೆ ಕರ್ನಾಟಕದ ಸಮಗ್ರ ಜಾನಪದ ವೈಶಿಷ್ಟ್ಯವನ್ನು ಪ್ರತಿನಿಧಿಸುವ ಬೃಹತ್ ಮೆರವಣಿಗೆ ಹಾಗೂ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ಈ ಸಮಾರಂಭದಲ್ಲಿ ಉದ್ಘಾಟನೆ, ಸಮ್ಮೇಳನಾಧ್ಯಕ್ಷರ ಆಶಯ ಭಾಷಣ, ಹಾಗೂ ಈ ಹಿಂದಿನ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷರಿಗೆ ಸನ್ಮಾನ ಸಮಾರಂಭ ನಡೆಯಲಿದೆ.
ಸಮ್ಮೇಳನದಲ್ಲಿ ಪ್ರತಿದಿನ ಎರಡು ಲಕ್ಷಕ್ಕೂ ಅಧಿಕ ಸಾಹಿತ್ಯಾಸಕ್ತರು ಭಾಗವಹಿಸಲಿದ್ದು ನಾಲ್ಕೂ ದಿನಗಳಲ್ಲಿ ಒಟ್ಟು ಹತ್ತು ಲಕ್ಷಕ್ಕೂ ಹೆಚ್ಚಿನ ಸಜ್ಜನರು ಭಾಗವಹಿಸುವ ನಿರೀಕ್ಷೆಯಿದೆ. ನಾಲ್ಕು ವೇದಿಕೆಗಳಲ್ಲಿ ಕ್ರಮವಾಗಿ ಸಾಹಿತ್ಯ, ಜಾನಪದ, ವಿದ್ಯಾರ್ಥಿ ಮತ್ತು ಕೃಷಿ ಸಮ್ಮೇಳನಗಳು ನಡೆಯಲಿದ್ದು ಸಂಜೆ ಹತ್ತು ವೇದಿಕೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಡಾ.ಬಿ.ಎ.ವಿವೇಕ್ ರೈ ಪರಿಚಯ

ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ ಇವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರು. ಫಿನ್ಲೇಂಡಿನ ಫೋಕ್ಲೋರ್ ಫೋಲೋಸ್, ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ, ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ ಮಂಗಳೂರಿನ ಪಿಲಿಕುಳ ನಿಸರ್ಗಧಾಮ ಟ್ರಸ್ಟ್ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳ ಸದಸ್ಯತ್ವಕ್ಕೆ ಪಾತ್ರರಾಗಿರುವ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ, ಸಂದೇಶ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಂಸ್ಕøತಿ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ದೇಸಿ ಸಮ್ಮೇಳನದ ಅಧ್ಯಕ್ಷತೆ, ಕುವೈಟ್‍ನ ವಿಶ್ವ ತುಳು ಸಮ್ಮೇಳನದ ಅಧ್ಯಕ್ಷತೆ ಮೊದಲಾದ ಗೌರವಗಳು ಸಂದಿವೆ. ತುಳು ಗಾದೆಗಳು, ತುಳು ಒಗಟುಗಳು, ತೌಳವ ಸಂಸ್ಕøತಿ, ತುಳು ಜನಪದ ಸಾಹಿತ್ಯ, ಆನ್ವಯಿಕ ಜಾನಪದ, ಭಾರತೀಯ ಪರಂಪರೆ ಮತ್ತು ಸಾಹಿತ್ಯದಲ್ಲಿ ಒಗಟು, ಗಿಳಿಸೂವೆ, ಇರುಳ ಕಣ್ಣು, ಹಿಂದಣ ಹೆಜ್ಜೆ, ರಂಗದೊಳಗಣ ಬಹಿರಂಗ, ಬ್ಲಾಗಿಲನು ತೆರೆದು, ಜರ್ಮನಿಯ ಒಳಗಿನಿಂದ, ಕನ್ನಡ ನುಡಿ ನಡೆಯ ಬರಹಗಳು, ನೆತ್ತರ ಮದುª,É Siಡಿi ಇಠಿiಛಿ ಚಿs ಠಿeಡಿಜಿoಡಿmeಜ bಥಿ ಉoಠಿಚಿಟಚಿ ಓಚಿiಞಚಿ ಮೊದಲಾದ ಕೃತಿಗಳನ್ನಲ್ಲದೆ 15ಕ್ಕೂ ಅಧಿಕ ಕೃತಿಗಳನ್ನೂ ಸಂಪಾದಿಸಿದ್ದಾರೆ. ತುಳು ಸಾಹಿತ್ಯ ಚರಿತ್ರೆ ಮತ್ತು ಸಮಗ್ರ ಕನ್ನಡ ಜೈನ ಸಂಪುಟಗಳ ಪ್ರಧಾನ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಜರ್ಮನಿ, ಫಿನ್‍ಲ್ಯಾಂಡ್, ಸ್ವಿಜರ್ಲ್ಯಾಂಡ್, ಜಪಾನ್, ಅಮೆರಿಕ, ಇಂಗ್ಲೆಂಡ್, ಆಸ್ಟ್ರಿಯ, ಫ್ರಾನ್ಸ್, ದುಬೈ, ಅಬುದಾಬಿ, ಶಾರ್ಜಾ ಮೊದಲಾದ ದೇಶಗಳಲ್ಲಿ ಸಂಶೋಧನೆ ಅಧ್ಯಯನ ಕೈಗೊಂಡಿರುವ ಇವರು 16 ಮಂದಿ ಪಿಎಚ್.ಡಿ ಸಂಶೋಧಕರು ಮತ್ತು ಎಂಫಿಲ್ ಪದವಿಯ 10 ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಪ್ರಸ್ತುತ ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಸಂಸ್ಕøತಿ ಗ್ರಾಮದ ನಿರ್ಮಾಣ ಮತ್ತು ನಿರ್ವಹಣೆ ಹಾಗೂ ಕನ್ನಡ ಸಾಹಿತ್ಯದ ಜರ್ಮನ್ ಅನುವಾದದಲ್ಲಿ ತೊಡಗಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಅಭಿಪ್ರಾಯ ಬರೆಯಿರಿ
ಕುಂದಾಪ್ರ ಡಾಟ್ ಕಾಂ- editor@kundapra.com