ಪತ್ರಕರ್ತರ ಮೇಲೆ ಹಲ್ಲೆ: ಕುಂದಾಪುರ ತಾ. ಕಾ. ಪತ್ರಕರ್ತರ ಸಂಘ ಖಂಡನೆ.

ಕುಂದಾಪುರ: ವಿಟ್ಲದ 'ಕರಾವಳಿ ಅಲೆ' ಪತ್ರಿಕೆ ವರದಿಗಾರ ವಿ.ಟಿ. ಪ್ರಸಾದ್ ಅವರ ಮೇಲೆ ಮುಸ್ಲಿಮ್ ಸಂಘಟನೆಯೊಂದರ ಕಾರ್ಯಕರ್ತರು ಬರ್ಬರವಾಗಿ ಹಲ್ಲೆ ಮಾಡಿದ್ದನ್ನು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ತೀವ್ರವಾಗಿ ಖಂಡಿಸಿದೆ. ಇಂತಹ ಹಲ್ಲೆಗಳು ಅತ್ಯಂತ ನಿಂದನಿಯವೂ, ಹೇಯವೂ ಆಗಿದ್ದು ಸಮಾಜದ ಸ್ವಾಸ್ಥ್ಯ ಕೆಡಿಸುವ ಹುನ್ನಾರವೂ ಇದರಲ್ಲಿ ಅಡಗಿದಂತೆ ಕಾಣಿಸುತ್ತದೆ. ಪೊಲೀಸ್ ಇಲಾಖೆ ಕೂಡಲೇ ದಾಳಿಕೋರರನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು ಮತ್ತು ಹಲ್ಲೆಗೊಳಗಾದ ಪತ್ರಕರ್ತರಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ಸಂಘವು ಆಗ್ರಹಿಸಿದೆ. ಇಂತಹ ಕೃತ್ಯಗಳು ಇನ್ನು ಮುಂದೆ ನಡೆಯದಂತೆ ತಡೆಯಲು ಹಲ್ಲೆಕೋರರ ಸಂಘಟನೆಯ ಮೇಲೂ ನಿಗಾ ಇಡಬೇಕು ಮತ್ತು ಕಠಿಣಕ್ರಮ ಕೈಗೊಳ್ಳಬೇಕು ಹಾಗೂ ಮಾರಣಾಂತಿಕವಾಗಿ ಹಲ್ಲೆಗೊಳಲ್ಗಾಗಿರುವ ಪತ್ರಕರ್ತ ವಿ.ಟಿ. ಪ್ರಸಾದರ ಚಿಕಿತ್ಸಾ ವೆಚ್ಚವನ್ನೂ ಸಹ ಸರಕಾರವೇ ಭರಿಸಬೇಕು ಎಂದು ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮತ್ತು ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com