ಭಂಡಾರ್ಕಾರ್ಸ್ ಕಾಲೇಜಿನ ಸುವರ್ಣ ಮಹೋತ್ಸವಕ್ಕೆ ಚಾಲನೆ: ಉಕ್ಕಿ ಹರಿದ ಹಳೆ ವಿದ್ಯಾರ್ಥಿಗಳ ಕಾಲೇಜು ಪ್ರೀತಿ









ಕುಂದಾಪುರ: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಮಿಂದೇಳುತ್ತಿರುವ ಕುಂದಾಪುರದ ಪ್ರತಿಷ್ಠಿತ ಭಂಡಾರ್‌ಕಾರ್ಸ್ ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭಗಳಿಗೆ ಹಳೆವಿದ್ಯಾರ್ಥಿಗಳ ಸಮಾವೇಶದ ಮೂಲಕ ಶುಕ್ರವಾರ ಮುನ್ನಡಿ ಬರೆಯಲಾಯಿತು.
ಗುರುವಾರವೇ ಕಾಲೇಜಿನ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳ ಸಮಾವೇಶ ಹಿರಿಯ ಸಾಹಿತಿ ವೈದೇಹಿ ಸಹಿತ ಅನೇಕ ಹೆಮ್ಮೆಯ ಕಾಲೇಜಿನ ಹಳೆ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ ಕಾರ್ಯಕ್ರಮ ಹೃದಯಸ್ಪರ್ಶಿಯಾಗಿ ಮೂಡಿ ಬಂದಿತ್ತು.
ಶುಕ್ರವಾರ ನಡೆದ ಕಾರ್ಯಕ್ರಮಕ್ಕೆ ಕಾಲೇಜಿನ ಮಾಜಿ ಪ್ರಾಚಾರ್ಯ ಮತ್ತು ಆಡಳಿತಾಧಿಕಾರಿ ಎಚ್. ಶಾಂತಾರಾಮ್ ಅವರು ಚಾಲನೆ ನೀಡಿ ಕಾಲೇಜಿನ ಬೆಳವಣಿಗೆಯ ಬಗೆಗೆ ತಮ್ಮ ಮೆಚ್ಚುಗೆಯ ಮಾತುಗಳನ್ನಾಡಿದರು.
ಕಾಲೇಜಿನ ಬೆಳವಣಿಗೆ ಸ್ಥಾವರವಾಗಬಾರದು, ಜಂಗಮವಾಗಬೇಕು. ಕಾಲೇಜಿನ ೨೦೦೦೦ ಕ್ಕಿಂತ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಎಂತಹ ಯೋಜನೆಗಳನ್ನಾದರೂ ಮಾಡಿ ತೋರಿಸ ಬಹುದು ಎಂದರು. ಒಬ್ಬೊಬ್ಬ ಹಳೇ ವಿದ್ಯಾರ್ಥಿಗಳು ಲಕ್ಷ ಗಟ್ಟಳೆ ಕೊಡಬೇಕಾಗಿಲ್ಲ. ಒಬ್ಬರು ತಲಾ ೫೦೦೦ ರೂಪಾಯಿ ನೀಡಿದರೆ ಒಟ್ಟಾಗುವ ಹಣದಲ್ಲಿ ಎಂತಹ ಯೋಜನೆಗಳನ್ನಾದರೂ ಮಾಡಿ ತೋರಿಸ ಬಹುದು ಎಂಧ ಅವರು ಹಳೆ ವಿದ್ಯಾರ್ಥಿಗಳ ಸಹಕಾಎರ ಕೋರಿದರು.
ದೇವದಾಸ ಕಾಮತ್ ಮತ್ತು ಕೆಪಿ ಶೆಟ್ಟಿ ಅವರು ಕಾಲೇಜು ತಮ್ಮನ್ನು ಬೆಳಸಿ ಈ ಮಟ್ಟಕ್ಕೆ ಬರಲು ಮೆಟ್ಟಿಲಾದ ಬಗೆಯನ್ನು ವಿವರಿಸಿ ತಮ್ಮ ಕಾಲೇಜು ಜೀವನವನ್ನು ಮತ್ತು ಪ್ರಭಾವ ಬೀರಿದ ಪ್ರಾಧ್ಯಾಪಕರನ್ನು ನೆನಪಿಸಿಕೊಂಡರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಡಾಮಕ್ಕಿ ಶಶಿಧರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ನಾರಾಯಣ ಶೆಟ್ಟಿ, ಹಳೆವಿದ್ಯಾರ್ಥಿ ಎನ್.ಪಿ.ನವೀನ್ ಕುಮಾರ್, ಉದ್ಯಮಿ ಸೋಲೋಮನ್ ಸೋನ್ಸ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಘವೇಂದ್ರ ಚರಣ್ ನಾವಡ ಕಾರ್ಯಕ್ರಮ ನಿರೂಪಿಸಿದರು. ರಾಜೇಂದ್ರ ಅವರು ವಂದಿಸಿದರು.























ಪೋಟೋ: ಶೇಖರ್ ಅಜೆಕಾರ್

ಕುಂದಾಪ್ರ ಡಾಟ್ ಕಾಂ- editor@kundapra.com