ಗ್ರಾ.ಪಂ. ಚುನಾವಣೆ: ಯಡ್ತರೆ-ಬೈಂದೂರಿನಲ್ಲಿ ಕಾಂಗ್ರೆಸ್ ಮೆಲುಗೈ, ಗಂಗೊಳ್ಳಿಯಲ್ಲಿ ಬಿಜೆಪಿಗೆ ಜಯ

ಕುಂದಾಪುರ: ತಾಲೂಕಿನ ಯಡ್ತರೆ, ಬೈಂದೂರು ಹಾಗೂ ಗಂಗೊಳ್ಳಿ ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಯಡ್ತರೆ ಹಾಗೂ ಬೈಂದೂರು ಗ್ರಾಮ ಪಂಚಾಯತಿಗಳು ಕಾಂಗ್ರೆಸ್ ತೆಕ್ಕೆಗೆ ಸೇರಿದ್ದರೆ, ಗಂಗೊಳ್ಳಿ ಗ್ರಾಮ ಪಂಚಾಯತ್ ಬಿಜೆಪಿ ಮಡಿಲಿಗೆ ಸೇರಿದೆ.
    ಯಡ್ತರೆ ಗ್ರಾಮ ಪಂಚಾಯಿತಿಯ ಒಟ್ಟು 25 ಸ್ಥಾನಗಳಲ್ಲಿ ಪೈಕಿ 19 ಕಾಂಗ್ರೆಸ್ ಹಾಗೂ 6 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜಯಿಯಾಗಿದ್ದರೆ,  ಬೈಂದೂರು ಗ್ರಾಮ ಪಂಚಾಯತ್ ನಲ್ಲಿ ಒಟ್ಟು 21 ಸ್ಥಾನಗಳ ಪೈಕಿ 11 ಕಾಂಗ್ರೆಸ್, 9  ಬಿಜೆಪಿ ಹಾಗೂ 1 ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದು, ಗಂಗೊಳ್ಳಿ ಗ್ರಾಮ ಪಂಚಾಯತನಲ್ಲಿ ಒಟ್ಟು 33 ಸ್ಥಾನಗಳ ಪೈಕಿ  19 ಬಿಜೆಪಿ ಹಾಗೂ 14 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
   ಯಡ್ತರೆ ಪಂಚಾಯತನ್ ಹಿಂದಿನ ಅವಧಿಯ ಅಧಿಕಾರವನ್ನು ಕಾಂಗ್ರೆಸ್ ಉಳಿಸಿಕೊಂಡಿದ್ದರೆ,  ಬೈಂದೂರು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ತನ್ನ ಅಧಿಕಾರ ಕಳೆದುಕೊಂಡಿದೆ. ಉಳಿದಂತೆ ಗಂಗೊಳ್ಳಿ ಗ್ರಾಮ ಪಂಚಾಯತ್ ನಲ್ಲಿ ಕಳೆದ ಭಾರಿ ಎರಡು ಪಕ್ಷಗಳು ಸಮಮತ ಗಳಿಸಿದ್ದರಿಂದ ಮೀಸಲಾತಿ ನೆಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷ ಪಟ್ಟ ಅಲಂಕರಿಸಿದ್ದರು. ಈ ಭಾರಿ ಬಿಜೆಪಿ ಸ್ವಷ್ಟ ಬಹುಮತ ಗಳಿಸಿರುವುದರಿಂದ ನಿರಾಯಾಸವಾಗಿ ಅಧಿಕಾರ ದಕ್ಕಿಸಿಕೊಳ್ಳಲಿದೆ.
    ಚುನಾವಣಾ ಫಲಿತಾಂಶಕ್ಕಾಗಿ ಬೆಳಿಗ್ಗೆಯಿಂದಲೇ ಮತಏಣಿಕೆ ಕೇಂದ್ರದ ಎದುರು ವಿವಿಧ ರಾಜಕೀಯ ಪಕ್ಷದ ಕಾರ್ಯಕರ್ತರು ಸೇರಿದ್ದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಲೇಜು ಮೈದಾನದಲ್ಲಿ ಘೋಷಣೆಗಳನ್ನು ಕೂಗುತ್ತಾ ಬಿಜೆಪಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಸಂಭ್ರಮವನ್ನು ಹಂಚಿಕೊಂಡರು. ಈ ಸಂದರ್ಭ ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದ ಪಕ್ಷದ ಮುಖಂಡರು, ಹಿರಿಯ ಕಾರ್ಯಕರ್ತರು ಜೋತೆಗಿದ್ದರು.

ವಿಜಯಿಗಳ ವಿವರ:

ಯಡ್ತರೆ ಗ್ರಾಮ ಪಂಚಾಯಿತ್
1 ನೇ ಮತ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ದೋಯ್ ಸಿ.ಜೆ ಕುಳ್ಳಂಕಿ, ಲಲಿತಾ ನಾಗಪ್ಪ ಮರಾಠಿ, ನಯನ ಉದೂರು, ಉದಯ್ ಪೂಜಾರಿ ಆಲಂದೂರು.
2ನೇ ಮತ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ನಾಗರಾಜ ಶೆಟ್ಟಿ, ಬುಡ್ಡಿ ನಾಗಯ್ಯ ಗೊಂಡ.
3ನೇ ಮತ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ವೆರೋನಿಕಾ, ಬಿಜೆಪಿ ಬೆಂಬಲಿತ ಆಶಾ ಕಿಶೋರ್, ಚಂದ್ರ ದೇವಾಡಿಗ.
4ನೇ ಮತ ಕ್ಷೇತ್ರದಿಂದ ಬೆಂಬಲಿತ ಕೃಷ್ಣ ದೇವಾಡಿಗ, ಸುಶೀಲ ಯಾನೆ ಮಣಿಯಮ್ಮ, ಬಿಜೆಪಿ ಬೆಂಬಲಿತ ಲೀಲಾವತಿ.
 5ನೇ ಮತ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಕಲಾವತಿ ನಾಗರಾಜ ಗಾಣಿಗ, ಕೃಷ್ಣಯ್ಯ ಶೆಟ್ಟಿ, ರಾಧಾ ದೇವಾಡಿಗ, ಬಿಜೆಪಿ ಬೆಂಬಲಿತ ಶಂಕರ ದೇವಾಡಿಗ ಬಂಕೇಶ್ವರ.
6ನೇ ಮತ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಡಿ.ಅಬ್ದುಲ್ ಖಾದರ್ ಬಾಪು ಸಾಹೇಬ್, ಶಾಂತಿ ವಿಜಯ ಪಿರೇರಾ, ಸರೋಜ.
7ನೇ ಮತ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಮಾರ್ಟಿನ್ ಎವರೆಸ್ಟ್ ಡಯಾಸ್, ಸುಧಾಕರ ದೇವಾಡಿಗ, ಹಸೀನಾ ಬೇಬಿ.
8ನೇ ಮತ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಮೀನಾಕ್ಷಿ ಪೂಜಾರಿ, ಬಿಜೆಪಿ ಬೆಂಬಲಿತ ರಾಧಾ ಪೂಜಾರಿ ಹಾಗೂ ಹೆರಿಯ ದೇವಾಡಿಗ ವಿಜಯ ಗಳಿಸಿದ್ದಾರೆ.

ಬೈಂದೂರಿನ ಗ್ರಾಮ ಪಂಚಾಯತ್
 1ನೇ ಮತ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ  ಸುಶೀಲಾ ವಿದ್ಯಾನಗರ,  ಮಹಾಬಲ ವಿದ್ಯಾನಗರ, ಮಹಾದೇವಿ ಬಾಡಾ, ಜನಾರ್ಧನ್ ಬಾಡಾ.
2ನೇ ಮತ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಬಾಣನ ಮನೆ ರಾಘವೇಂದ್ರ ಹಾಗೂ ಬಿಜೆಪಿ ಬೆಂಬಲಿತ ಸರೋಜ ಶೆಟ್ಟಿ ಸೂರ್ಕಂದ.
3ನೇ ಮತ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ವೆಂಕ್ಟ ಪೂಜಾರಿ, ಭಾಗೀರಥಿ, ಸೀತು ಮೊಗವೀರ, ಭಾಸ್ಕರ್ ನಾಯಕ್ ಮಯ್ಯಾಡಿ.
4ನೇ ಮತ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಸರೋಜಾ ಗೋಳಿಬೇರು, ಷರ್ಲಿ ಫಿಲಿಪ್, ಪಕ್ಷೇತರ ಕೆ.ಭಾಸ್ಕರ ಕೊಠಾರಿ, ತಗ್ಗರ್ಸೆ ಮತ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಲಕ್ಷೀ ಗುಡ್ಡೆ‌ಅಂಗಡಿ, ಭವಾನಿ ಗಾಣಿಗ, ನಾಗರತ್ನ ಚಂದನ, ಕೆ.ಬಾಲಕೃಷ್ಣ ಹೆಗ್ಡೆ ಕಂಠದಮನೆ,.
ತಗ್ಗರ್ಸೆ 2ನೇ ಮತಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಚಂದು ಸಿಂಧಿ ಮನೆ, ಲಕ್ಷ್ಮೀ ಪೂಜಾರ್‍ತಿ ತಗ್ಗರ್ಸೆ, ನಾಗಾರಾಜ ಗಾಣಿಗ ಹಾಲಂಬೇರು ಹಾಗೂ ರಾಜು ಪೂಜಾರಿ ಹೆಮ್ಮಾನಹಿತ್ಲು ವಿಜಯಿಗಳಾಗಿದ್ದಾರೆ.

ಗಂಗೊಳ್ಳಿ ಗ್ರಾಮ ಪಂಚಾಯತ್
1ನೇ ಮತ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ  ಸರೋಜಿನಿ ಕೋಡಿಕಾರ್, ಬಿಜೆಪಿ ಬೆಂಬಲಿತ ಜೆ.ಟಿ ಜಯಂತಿ, ನಾಗರಾಜ್ ಖಾರ್ವಿ, ರೇಷ್ಮಾ ಖಾರ್ವಿ, ಎಡ್ವರ್ಡ್ ಕಾರ್ಡಿನ್.
2ನೇ ಮತ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಸಾಯಿರಾ ಬಾನು, ಸುಶೀಲ ಶೇರಿಗಾರ್, ಕೆ.ಯೂನೂಸ್ ಸಾಹೇಬ್, ಅಬ್ದುಲ್ ಹಾದಿ.
3ನೇ ಮತ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಗೀತಾ, ಗೋಪಾಲ ಕಾರ್ವಿ, ರಾಜಾ, ಲಕ್ಷ್ಮೀ ಗಾಣಿಗ.
4ನೇ ಮತ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಬಿ.ಗಣೇಶ ಶೆಣೈ, ನಾಗಿಣಿ, ಲಕ್ಷ್ಮೀ ಪೂಜಾರಿ, ಜಿ.ಸುಧಾಕರ ಖಾರ್ವಿ.
5ನೇ ಮತ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ರೋಜಿ ಫೆರ್ನಾಂಡಿಸ್, ಸುರೇಂದ್ರ ಡಿ ಖಾರ್ವಿ, ಬಿಜೆಪಿ ಬೆಂಬಲಿತ ಮಹೇಶ್ ರಾಜ್ ಪೂಜಾರಿ, ಲಲಿತಾ ಖಾರ್ವಿ.
6ನೇ ಮತ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಜಯಂತಿ ಖಾರ್ವಿ, ಮುಜಾಹಿದ್ ಅಲಿ ನಾಖುದಾ, ಮಂಜುಳಾ ಎಸ್ ದೇವಾಡಿಗ, ಬಿಜೆಪಿ ಬೆಂಬಲಿತ ಪದ್ಮ, ಬಿ.ಲಕ್ಷ್ಮೀಕಾಂತ ಮಡಿವಾಳ.
7ನೇ ಮತಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಕಮಲ, ಸುರೇಖಾ ಕಾನೋಜಿ, ಸಂತೋಷ.
8ನೇ ಮತ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಜಿ.ಕೇಶವ್ ಖಾರ್ವಿ, ಜಿ.ಚಂದು, ಶಾರದ ಹಾಗೂ ಶ್ರೀನಿವಾಸ ಖಾರ್ವಿ ವಿಜಯ ಗಳಿಸಿದ್ದಾರೆ.



ಕುಂದಾಪ್ರ ಡಾಟ್ ಕಾಂ -editor@kundapra.com