ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಲಿ: ಎ.ಜಿ ಕೊಡ್ಗಿ


 

ಸಿದ್ದಾಪುರದಲ್ಲಿ 13ನೇ ತಾಲೊಕು ಕನ್ನಡ ಸಾಹಿತ್ಯ ಸಮ್ಮೇಳನ, ದಲಿತ ಸಾಹಿತಿ ಹರಿದಾಸ ಕೆ.ಕೆ ಕಾಳಾವರ್ ಕಾರ್ ಸಮ್ಮೇಳನಾಧ್ಯಕ್ಷ


ಸಿದ್ದಾಪುರ : ಕನ್ನಡದ ಅಭಿಮಾನಿಗಳಿಂದಲೇ ದುರಾಭಿಮಾನ ಬೆಳೆಯುತ್ತಿದೆ. ಕನ್ನಡಿಗರಿಂದ ಜಲ – ನೆಲ ರಕ್ಶಣೆ ಆಗುತ್ತಿಲ್ಲ. ಕನ್ನಡ ಶಾಲೆ ಮುಚ್ಚುವ ಪರಿಸ್ತಿಯಲ್ಲಿದೆ. ಕನ್ನಡ ಉಳಿಯಬೇಕಾದರೆ ಎಲ್ಲಾ ಆಂಗ್ಲಮಾಧ್ಯಮ ಶಾಲೆ ಗಳಲ್ಲಿ ಕನ್ನಡ ಕಡ್ಡಾಯ ಗೊಳಿಸುವ ಕಾನೂನು ಜಾರಿ ಯಾಗಬೇಕು ಎಂದು ಪ್ರಗತಿಪರ ಕ್ರಷಿಕ ಹಾಗೂ ಮಾಜಿ ಶಾಸಕರೂ ಆದ ಎ.ಜಿ ಕೊಡ್ಗಿ ಹೇಳಿದರು .ಅವರು ಡಿ. ೮ ಭಾನುವಾರ ಸಿದ್ದಾಪುರದಲ್ಲಿ , ಕುಂದಾಪುರ ತಾಲೊಕು ೧೩ ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಗಾಟಿಸಿ ಮಾತಾನಾಡಿದರು.
      ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಶ ಕುಂದಾಪುರದ ನಾರಾಯಾಣ ಖಾರ್ವಿಯವರು ಪರಿಷತ್ ದ್ವಜಾರೋಹಣವನ್ನು ನೆರವೇರಿಸಿದರು. ನಂತರ ಸಮ್ಮೇಳನಾಧ್ಯಕ್ಷರಾದ ನಾಟಕಕಾರ, ಚಲನಚಿತ್ರ ಸಾಹಿತಿ, ನಟ, ಕಲಾ ನಿರ್ದೆಶಕ, ಜಾನಪದ ಕಲಾವಿದ ಕೀರ್ತನಕಾರ ,ಪ್ರಸಂಗಕರ್ತ ಹರಿದಾಸ ಕೆ.ಕೆ ಕಾಳಾವರ್ ಕಾರ್ ರವರನ್ನು ಸಿದ್ದಾಪುರ ಪ್ರೌಢಶಾಲೆಯಿಂದ ಮೆರವಣಿಗೆ ಮೂಲಕ ಶ್ರಿ ರಂಗನಾಥ ಸಭಾಭವನದ ದಿ. ಅಮಾಸೆಬೈಲು ಕ್ರಷ್ಣರಾಯ ಕೊಡ್ಗಿ ವೇದಿಕೆಗೆ ಕರೆತರಲಾಯಿತು.


ಚಂಡೆ ಬಾರಿಸುವ ಮೂಲಕ ದಕ್ಕೇರುಬಾಳು ಯಶವಂತ್ ಕುಮಾರ್ ರವರು ಮೆರವಣಿಗೆಗೆ ಚಾಲನೆ ನೀಡಿದ್ದರು .ಮಾಣಿಬೈಲು ಶಿವರಾಮ ಶೆಟ್ಟಿಯವರು ದಿ.ಕಡ್ರಿ ನಾರಾಯಣ ಮಾಷ್ಟರ್ ಮಹಾದ್ವಾರದ ಉದ್ಗಾಟನೆ ಮಾಡಿದರೇ , ಪುಸ್ತಕ ಮಳಿಗೆಯನ್ನು ಬಸ್ರೂರು ಮಹಾಲಿಂಗೆಶ್ವರ ಧರ್ಮದರ್ಶಿ ಗಳೂ ಹಾಗೂ ಮಾಜಿ ಶಾಸಕರು ಗಳಾದ ಬಿ. ಅಪ್ಪಣ್ಣ ಹೆಗ್ಡೆ ಯವರು ಉದ್ಗಾಟಿಸಿದರು.


ಉಡುಪಿ ಜಿಲ್ಲಾ ಕನ್ನಡ ಪರಿಷತ್ ನ ಅಧ್ಯಕ್ಶರಾದ ನೀಲಾವರ ಸುರೇಂದ್ರ ಹೆಗ್ಡೆಯವರು ನೂತನ ಪುಸ್ತಕಗಳನ್ನು ಬಿಡುಗಡೆ ಗೊಳಿಸಿದರು. ವೇದಿಕೆಯಲ್ಲಿ ಪ್ರತಿಭಾ ಪುರಸ್ಕಾರ , ವಿವಿಧ ಗೊಷ್ಟಿಗಳು, ಯಕ್ಗಗಾನ ವೈವಿಧ್ಯ, ವಿವಿಧ ಕ್ಸೆತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ, ಬಹಿರಂಗ ಅಧಿವೇಶನ,ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.

ಮುಖ್ಯ ಅತಿಥಿಗಳಾಗಿ , ತಾ,ಪಂ ಅಧ್ಯಕ್ಶರಾದ ಶ್ರೀಮತಿ ದೀಪಿಕಾ ಶೆಟ್ಟಿ, ಜಿ.ಪಂ ಉಪಾಧ್ಯಕ್ಶರಾದ ಶ್ರೀಮತಿ ಮಮತಾ ಆರ್. ಶೆಟ್ಟಿ, ಸಿದ್ದಾಪುರ ಗ್ರಾ.ಪಂ ಅಧ್ಯಕ್ರಾದ ಸದಾನಂದ ಭಂಡಾರಿ , ಮತ್ತಿತರರು ಉಪಸ್ತಿತರಿದ್ದರು.


ಶ್ರೀಮತಿ ಸುಜಾತ ಆರ್ .ರಾವ್ ಮತ್ತು ಬಳಗದವ ಕನ್ನಡ ನಾಡ ಗೀತೆಯಿಂದ ಕಾರ್ಯಕ್ರಮ ಪ್ರಾರಂಬವಾಯಿತು. ಡಿ. ಗೋಪಾಲ್ ಕ್ರಷ್ಣ ಕಾಮತ್ ರವರು ಸ್ವಾಗತ ಭಾಷಣವನ್ನು ಮಾಡಿದರೇ , ಜಗದೀಶ ಹೆಗ್ಡೆಯವರು ವಂದನಾರ್ಪಣೆಯನ್ನು ನೆರವೇರಿಸಿದರು .


ಊಟೋಪಚಾರ : ಬೆಳಿಗ್ಗೆ ೧೦ ಗಂಟೆಗೆ ಲಘು ಉಪಹಾರ , ಹಾಗೂ ೧೧ ಗಂಟೆಗೆ ತಂಪುಪಾನೀಯ, ಮಧ್ಯಾಹ್ನ ಭರ್ಜರಿ ಭೋಜನ ಕೂಟ ಹಾಗೂ ೩ ಗಂಟೆಗೆ ಚಾ, ಕಾಫಿ ಮತ್ತು ಸಂಜೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು, ನೆರೆದ ಸಾಹಿತಿಗಳು , ಸಾಹಿತ್ಯಾಸಕ್ತರು,ವಿಧ್ಯಾರ್ಥಿಗಳು ಇದರ ಸದುಪಯೊಗವನ್ನು ಪಡೆದು ಕೊಂಡರು.


ಬಾರದ ಜನಪ್ರತಿನಿಧಿಗಳು, ಪಾಲ್ಗೊಳ್ಳದ ದಲಿತ ಸಾಹಿತಿಗಳು/ ಸಾಹಿತ್ಯಾಸಕ್ತರುಗಳು: ವಿವಿಧ ವಿಭಾಗಗಳ ಉದ್ಗಾಟನೆಗೆ ಕೆಲವು ಜನಪ್ರತಿನಿಧಿಗಳ ಹೆಸರುಗಳು ಪ್ರಕಟಿ ಗೊಂಡಿತ್ತಾದರೂ ,ಕೇವಲ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಬಿಟ್ಟರೇ ಬೇರಾವ ಜನಪ್ರತಿನಿಧಿಗಳು ಬಾಗವಹಿಸದಿರುವುದು ಜನರ ಆಕ್ರೋಶಕ್ಕೆ ಗುರಿಯಾದರೇ, ಇನ್ನು ತಾಲೊಕಿನ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ದಲಿತ ಸಾಹಿತಿಯೊಬ್ಬರು ಸಮ್ಮೇಳನದ ಅಧ್ಯಕ್ಶರಾಗಿರುವುದು ದಲಿತ ಸಾಹಿತಿಗಳಿಗೆ ಹೊಸ ಉತ್ತೇಜನ ನೀಡುತ್ತದೆ ಎಂದು ಭಾವಿಸಲಾಗಿತ್ತಾದರೂ ,ಯಾರೊಬ್ಬರು ಹಾಜರಾಗದೇ ನಿರಾಸೆ ಮೂಡಿಸಿತ್ತು ಈ ಬಗ್ಗೆ ಪ್ರೊ. ಕ್ರಷ್ಣಪ್ಪ ಸ್ಥಾಪಿತ ದಲಿತ ಸಂಘಟನೆಯ ಜಿಲ್ಲಾ ಸಂಚಾಲಕರನ್ನು ಕೇಳಿದರೆ, ” ನಮಗೆ ಯಾವುದೇ ಕರೆಯೊಲೆ ಬರಲಿಲ್ಲ.. ಆಮಂತ್ರಣ ವಿಲ್ಲದೇ ಭಾಗವಹಿಸುವುದು ಹೇಗೆ ಎಂದು ನುಡಿಯುತ್ತಾರೆ. 


“ವಿದ್ಯ ಅರ್ಥ ವ್ಯಾಪ್ತಿ ಸಾಗರದಂತೆ, ಎಷ್ಟು ವಿಶಾಲವಾಗಿದೆಯೋ ಸಾಹಿತ್ಯದ ಅರ್ಥವ್ಯಾಪ್ತಿ ಅಷ್ಟೇ ವಿಶಾಲವಾಗಿದೆ. ಸಾಗರದಲ್ಲಿ ಭಿನ್ನ -ಭಿನ್ನವಾದ ಜಲಚರಗಳು ತುಂಬಿ ಕೊಂಡಿರುವಂತೆ, ವಿದ್ಯೆಯ ವ್ಯಾಪ್ತಿಯಲ್ಲಿ ಅನೇಕ ಅಂಗಗಳು ಸೇರಿಕೊಂಡಿದೆ. ಲಲಿತಕಲೆ, ಚಿತ್ರಕಲೆ, ಸಂಗೀತ ಕಲೆ, ನ್ರತ್ಯಕಲೆ, ಇವೆಲ್ಲವೂ ವಿದ್ಯೆಯ ಅಂಗಗಳು. ಹಾಗೆಯೇ ಸಾಹಿತ್ಯ ಕೂಡ ಒಂದು ಕಲೆ. ಶಿಕ್ಶಣ ಸಾಹಿತ್ಯಕ್ಕೆ ಭದ್ರ ಬುನಾದಿಯಾಗಿರುವುತ್ತದೆ. ದೇಶವು ನಮ್ಮ ಮೆಲೆ ಹೊರಸಿದ್ದ ಜವಾಬ್ದಾರಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದೇಶಾಭಿಮಾನ ,ಧರ್ಮಾಭಿಮಾನ ,ಪರೋಪಕಾರವೇ ಮೊದಲಾದ ಸದ್ಗುಣಗಳನ್ನು ಮೈಗೂಡಿಸಿ ಕೊಳ್ಳಲು ಮಕ್ಕಳಿಗೆ ಸೂಕ್ತವಾದ ಶಿಕ್ಶಣ ನೀಡಿ ಸತ್ಪ್ರಜೆ ಗಳನ್ನಾಗಿ ದೇಶಕ್ಕ್ಕೆ ಅರ್ಪಿಸುವುದಕ್ಕಿಂತ, ಮಿಗಿಲಾದ ಪೂಜೆ ಇನ್ನೊಂದಿಲ್ಲ. ಶಿಕ್ಶಣದ ಅವಧಿಯಲ್ಲಿ ಯೇ ಮಕ್ಕಳಿಗೆ ಸಾಹಿತ್ಯ ಮತ್ತು ಲಲಿತ ಕಲೆಗಳ ಬಗ್ಗೆ ಅರುವು ಮೂಡಿಸಬೇಕು . ಹೀಗಿದ್ದರೆ ಮಾತ್ರ ಮಕ್ಕಳ ಸ್ವಾಭಾವಿಕ ಗುಣಗಳನ್ನು ಸ್ಥಿರವಾಗಿ ಉಳಿಸಿ ಕೊಳ್ಳಲು ಅವರಿಗೆ ಸಹಕಾರಿಯಾಗುತ್ತದೆ. ಕಲಿಕೆಯ ಒತ್ತಡ ಅವರನ್ನು ಬಾಧಿಸಬಾರದು. ಸಾಹಿತ್ಯದಂತಹ ಕಲೆಯ ಹವ್ಯಾಸವನ್ನು ಶ್ರಮಿಸಿಕೊಳ್ಳಲು ಅವರಿಂದ ಸಾಧ್ಯವಾಗುತ್ತದೆ. ಮಕ್ಕಳು ಮಾತ್ರಭಾಷೆ ಅರ್ಥಾತ್ ,ಪ್ರಾದೇಶಿಕ ಭಾಷೆಯನ್ನು ಕಲಿಯುವುದಕ್ಕೆ ಮೊದಲೇ ಆಂಗ್ಲ ಮಾಧ್ಯಮ ಶಾಲೆಗಳಿಗೆ ಹೋಗುತ್ತಿದ್ದಾರೆ ಎಂದ ಮೇಲೆ ಅವರು ಮಾತ್ರಭಾಷೆ ಯನ್ನು ಹೇಗೆ ತಾನೆ ಕಲಿತು ಕೊಂಡಾರು ? ಮುಂದೆ ಅವರು ಸಾಹಿತಿ ಗಳಾಗುವ ಬಗೆಯಾದರೂ ಹೇಗೆ ? ಈ ಎಲ್ಲಾ ಗೊಂದಲಗಳನ್ನು ನಿವಾರಿಸಿಕೊಳ್ಳಬೇಕಾದರೇ ಎಲ್ಲಾ ಮಕ್ಕಳು ಕನಿಷ್ಟ ಐದನೇ ತರಗತಿವರೆಗೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಡ್ಡಾಯವಾಗಿ ಶಿಕ್ಶಣ ಪಡೆಯಬೇಕು. ಮತ್ತು ಐದನೇ ತರಗತಿವರೆಗೆ ಪ್ರಾಥಮಿಕ ಶಿಕ್ಶಣ ಮತ್ತು ಪೂರ್ವ ಪ್ರಾಥಮಿಕ ಶಿಕ್ಶಣಕ್ಕಾಗಿ ತರಗತಿಗಳನ್ನು ತೆರೆಯಲು ಆಂಗ್ಲ ಮಾಧ್ಯಮ ಶಾಲೆಗಳಿಗೆ ಪರವಾನಿಗೆ ನೀಡುವುದನ್ನು ರದ್ದುಗೊಳಿಸಬೇಕು. ಈ ನಿಟ್ಟಿನಲ್ಲಿ ಹೆತ್ತವರು, ಮತ್ತು ಪೋಷಕರು ಸರ್ಕಾರದೊಂದಿಗೆ ಕೈ ಜೋಡಿಸಬೇಕಾಗಿದೆ. ಯಾವುದೇ ಉದ್ವೆಗಕ್ಕೂ ಒಳಗಾಗದೇ ಸ್ತಿತ ಪ್ರಜ್ನೆಯನ್ನು ಉಳಿಸಿ ಕೊಳ್ಳಲು ನಾವೆಲ್ಲರೂ ಕಲೆ ಸಾಹಿತ್ಯದ ಕಡೆಗೆ ಗಮನ ಹರಿಸೋಣ “-ಹರಿದಾಸ ಕೆ.ಕೆ ಕಾಳಾವರ್ ಕಾರ್(ಸಮ್ಮೇಳನಾಧ್ಯಕ್ಷ)
ಚಿತ್ರ ವರದಿ: ಶಿವಕುಮಾರ್ ಹೊಸಂಗಡಿ

ಕುಂದಾಪ್ರ ಡಾಟ್ ಕಾಂ- editor@kundapra.com