ದೇಹದಾರ್ಢ್ಯ ಸ್ವರ್ಧೆ: ಲಕ್ಷ್ಮಣ ಖಾರ್ವಿ ರಾಜ್ಯ ಮಟ್ಟಕ್ಕೆ ಆಯ್ಕೆ

ಬೈಂದೂರು: ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ವತಿಯಿಂದ ಇತ್ತಿಚಿಗೆ ಉಡುಪಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ವರ್ಧೆ, ‘ಮಿಸ್ಟರ್ ಉಡುಪಿ-2014’ರ 65 ಕೆ.ಜಿ. ವಿಭಾಗದಲ್ಲಿ ಉಪ್ಪುಂದ ತಾರಾಪತಿ ಅಳಿವೆಕೋಡಿಯ ಲಕ್ಷ್ಮಣ ಖಾರ್ವಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿರುವುದಲ್ಲದೇ ಮಾ.2 ರಂದು ಮಲ್ಪೆಬೀಚ್‍ನಲ್ಲಿ ನಡೆಯಲಿರುವ ರಾಜ್ಯಮಟ್ಟದ  ಸ್ವರ್ಧೆ ‘ಮಿಸ್ಟರ್ ಕರ್ನಾಟಕ-2014’ಕ್ಕೆ ಆಯ್ಕೆಯಾಗಿರುತ್ತಾರೆ.
    ಉಪ್ಪುಂದ ಮಡಿಕಲ್‍ನ ಗೋವಿಂದರಾಜು ಅವರ ಮಾರ್ಗದರ್ಶನದಲ್ಲಿ ಕಲಿತು ದೇಹದಾರ್ಢ್ಯ ಪಟುವೆನಿಸಿಕೊಂಡಿರುವ ಲಕ್ಷ್ಮಣ ಖಾರ್ವಿ ಹಲವಾರು ರಾಜ್ಯ ಪ್ರಶಸ್ತಿಗಳಿಗೆ ಭಾಜನರಾಗಿದ್ದು ಪ್ರಸ್ತುತ ಯಡ್ತರೆಯ ಲಕ್ಕಿ ಜಿಮ್‍ನ ವ್ಯವಸ್ಥಾಪಕರಾಗಿದ್ದಾರೆ.  ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com