ಹೊಸ ಮತದಾರರು: ಒಟ್ಟು 13.91 ಲಕ್ಷಕ್ಕೇರಿಕೆ

ಉಡುಪಿ : ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಹೊಸ ಮತದಾರರು ಹೆಚ್ಚಳವಾಗಿದ್ದಾರೆ.

ಉಡುಪಿ ಜಿಲ್ಲೆ: ಕುಂದಾಪುರ ಕ್ಷೇತ್ರ- ಅರ್ಜಿ 4,913- ಅನುಮೋದನೆ 4,796, ಉಡುಪಿ- 5,516-5,341, ಕಾಪು- 4,215-4,212, ಕಾರ್ಕಳ- 3,643-3,603, ಒಟ್ಟು - 18,287-17,952.

ಚಿಕ್ಕಮಗಳೂರು ಜಿಲ್ಲೆ: ಶೃಂಗೇರಿ- 5,296-5,275, ಮೂಡಿಗೆರೆ- 5,515-5,480, ಚಿಕ್ಕಮಗಳೂರು- 6,154-6,151, ತರಿಕೆರೆ- 5,113- 4,999, ಒಟ್ಟು 22,078- 21,905.

ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 40,365 ಅರ್ಜಿ ಸ್ವೀಕರಿಸಿದ್ದು 39,857 ಮಂದಿಗೆ ಅನುಮೋದನೆ ನೀಡಲಾಗಿದೆ.

ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಲ್ಲಿ 5,517 ಅರ್ಜಿ ಸ್ವೀಕರಿಸಿದ್ದು 5,377 ಅರ್ಜಿಗಳಿಗೆ ಅನುಮೋದನೆಯಾಗಿದೆ. ಬೈಂದೂರು ಕ್ಷೇತ್ರ ಸೇರಿದಂತೆ ಒಟ್ಟು 45,882 ಅರ್ಜಿ ಸ್ವೀಕರಿಸಲಾಗಿದ್ದು 45,234 ಅರ್ಜಿಗಳನ್ನು ಅನುಮೋದಿಸಲಾಗಿದೆ. ಎರಡು ಜಿಲ್ಲೆಗಳ ಹೊಸ ಮತದಾರರನ್ನು ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಹೊಸ ಮತದಾರರ ಸಂಖ್ಯೆ ಹೆಚ್ಚಿದೆ.

ಈಗಾಗಲೇ ಲೋಕಸಭಾ ಕ್ಷೇತ್ರದಲ್ಲಿ 13,51,245 ಮತದಾರರು ಇದ್ದು ಈಗ ಇದು 13,91,102ಕ್ಕೆ ಏರಿದೆ. 2012ರ ಉಪಚುನಾವಣೆಯಲ್ಲಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 12,52,390 ಮತದಾರರಿದ್ದರು. ಎರಡೇ ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು (1,38,712) ಹೊಸ ಮತದಾರರ ಸೇರ್ಪಡೆಯಾಗಿದೆ.