ಪ್ರತಿಷ್ಠೆಯ ಕಣವಾದ ಶಿವಮೊಗ್ಗ ಲೋಕಸಭೆ ಕ್ಷೇತ್ರ

 ಬೈಂದೂರು: ಪ್ರತಿಷ್ಠಿತ ಚುನಾವಣಾ ಕಣವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೂರು ಪ್ರಮುಖ ಪಕ್ಷಗಳ ತ್ರಿಕೋನ ಸ್ವರ್ಧೆ ಏರ್ಪಟ್ಟಿದ್ದು ಕ್ಷೇತ್ರದಲ್ಲಿ ಭಾರಿ ಕುತೂಹಲ ಕೆರಳಿಸಿದೆ.
     ಪಕ್ಷದ ಪರ ಪ್ರಚಾರಕ್ಕಾಗಿ ಘಟಾನುಘಟಿಗಳ ದಂಡು ಕ್ಷೇತ್ರವನ್ನು ಕ್ಷೇತ್ರವನ್ನು ಸುತ್ತಿ ತಮ್ಮ ಪ್ರಬಲ್ಯ ಮೆರೆದಿದ್ದು ಅಂತಿಮವಾಗಿ ಗೆಲ್ಲಲಿರುವ ವ್ಯಕ್ಷಿ ಯಾರೆಂಬುದು ಅದಾಗಲೇ  ಸ್ವಷ್ಟವಾಗಿದ್ದರೂ ಕೂಡ ಚುನಾವಣೆ ಫಲಿತಾಂಶದ ತನಕ ಕಾಯಬೇಗಿದೆ.

     ಶಿವಮೊಗ್ಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಸ್ವಕ್ಷೇತ್ರ. ಇಲ್ಲಿ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರನ್ನೂ ಹೊಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆಗೆ ಬಿಜೆಪಿಯಿಂದ ಸಿಡಿದೆಡ್ಡು ಕೆಜೆಪಿ ಪಕ್ಷ ಕಟ್ಟಿದ್ದ ಯಡಿಯೂರಪ್ಪ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದ್ದರು. ಬಿಜೆಪಿಗೆ ಭಾರಿ ಆಘಾತ ನೀಡಿದ್ದರು. ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪರಿಗೆ ಸೋಲಿನ ರುಚಿ ತೋರಿಸಿದ್ದರು. ಈಗ ಯಡಿಯೂರಪ್ಪ ಬಿಜೆಪಿಗೆ ವಾಪಸಾಗಿದ್ದಾರೆ. ಈಶ್ವರಪ್ಪ ಜತೆಗೂ ದೋಸ್ತಿ ಮಾಡಿಕೊಂಡಿದ್ದಾರೆ. ಕೆಜಿಪಿ ಕಟ್ಟಿದ ಬಳಿಕ ಪಕ್ಷದಲ್ಲಿ ಕಳೆದುಕೊಂಡಿದ್ದ ವರ್ಚಸ್ಸನ್ನು ಮರುಗಳಿಸಿಕೊಳ್ಳಬೇಕಾದರೆ ಚುನಾವಣೆಯಲ್ಲಿ ಭಾರಿ ಮತಗಳ ಅಂತರದಿಂದ ಗೆಲ್ಲುವುದು ಯಡಿಯೂರಪ್ಪ ಅವರಿಗೆ ಅನಿವಾರ್ಯ. ಮಾತ್ರವಲ್ಲದೇ ಮೋದಿಯನ್ನು ದೇಶದ ಪ್ರಧಾನಿಯನ್ನಾಗಿಸಬೇಕೆಂಬ ಬಿಜೆಪಿಯ ಕನಸು ನನಸಾಗಿಸುವ ಹೊಣೆ ಇವರ ಮೇಲಿದೆ.
     ಇನ್ನು ಬಿಎಸ್‌ವೈ ವಿರುದ್ಧ ಸ್ಪರ್ಧೆಗೆ ನಿಂತಿರುವ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಇದು ಮೊದಲ ಚುನಾವಣೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹಿರಿಯ ಪುತ್ರಿ, ವರನಟ ಡಾ. ರಾಜ್‌ಕುಮಾರ್ ಪುತ್ರ ಶಿವರಾಜ್‌ಕುಮಾರ್ ಪತ್ನಿ ಎನ್ನುವುದು ಗೀತಾಗೆ ಪ್ಲಸ್‌ಪಾಯಿಂಟ್. ಜತೆಗೆ, ಶಿವಮೊಗ್ಗದಲ್ಲಿ ಬಹುಸಂಖ್ಯಾತ ಸಂಖ್ಯೆಯಲ್ಲಿರುವ ಈಡಿಗ ಸಮುದಾಯಕ್ಕೆ ಸೇರಿದವರು. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಯಡಿಯೂರಪ್ಪ ಅವರಿಗೆ ಈ ಚುನಾವಣೆ ಅಷ್ಟು ಸಲೀಸಲ್ಲ.
      ಉಳಿದಂತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ಉದ್ಯಮಿ ಹಾಗೂ ಹಿರಿಯ ಕಾಂಗ್ರೇಸ್ಸಿಗ ಮಂಜನಾಥ ಭಂಡಾರಿ ಅವರನ್ನು ಕಣಕ್ಕಿಳಿಸಿದೆ. ಭಂಡಾರಿಯವರಿಗೂ ಕೂಡ ಇದು ಮೊದಲ ಚುನಾವಣೆಯಾಗಿದೆ. ಕಾಂಗ್ರೇಸ್ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವು ಹುದ್ದೆಗಳನ್ನು ಭಂಡಾರಿ ಅಲಂಕರಿಸಿದ್ದರೂ ಚುನಾವಣೆ ಎದುರಿಸಿದವಲ್ಲ ಮಾತ್ರವಲ್ಲದೇ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಇವರು ಹೊಸಬರೇ ಆಗಿದ್ದಾರೆ.
     ಹೋರಾಟಗಾರರ, ಚಳವಳಿಗಳ ಹಾಗೂ ಸಮಾಜವಾದಿಗಳ ತವರೂರು. ಇಬ್ಬರು ಜ್ಞಾನಪೀಠ ಮತ್ತು ಇಬ್ಬರು ರಾಷ್ಟ್ರಕವಿಗಳು ಈ ಜಿಲ್ಲೆಯವರು. ಎರಡು ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯಲ್ಲಿ ಹಾದುಹೋಗುತ್ತದೆ. ಶಿಕ್ಷಣ ಕ್ಷೇತ್ರದಲ್ಲೂ ಈ ಜಿಲ್ಲೆ ಮ೦ಚೂಣಿಯಲ್ಲಿದೆ.
      ವಿಶ್ವವಿಖ್ಯಾತ ಜೋಗ ಜಲಪಾತ, ದಕ್ಷಿಣದ ಚಿರಾಪು೦ಜಿ ಆಗು೦ಬೆ, ಮನಮೋಹಕ ಪಶ್ಚಿಮಘಟ್ಟ, ಶಿಖರ ಈಗ ಕರಾವಳಿಯ ನ೦ಟನ್ನೂ ಹೊ೦ದಿರುವ ಪ್ರಜ್ಞಾವ೦ತರ ನಾಡು. ಶರಾವತಿ ವಿದ್ಯುತ್ ಉತ್ಪಾದನೆ ಕೇ೦ದ್ರ. ಸಕ್ರೆಬೈಲಿನ ಆನೆಕ್ಯಾ೦ಪ್, ಮ೦ಡಗದ್ದೆ ಪಕ್ಷಿಧಾಮ, ಕೊಡಚಾದ್ರ್ರಿ  ಮರವಂತೆ ಕಡಲ ತೀರ ಮತ್ತು ಪ್ರಸಿದ್ದ ದೇವಾಲಯಗಳಿವೆ. 

ಚುನಾವಣಾ ಪ್ರಚಾರ ಕಾರ್ಯಕ್ಕೆ ವಿವಿಧ ಪಕ್ಷಗಳು ಫಟಾನುಘಟಿಗಳು, ಸಿನೆಮಾ ತಾರೆಯರ ದಂಡು ಹರಿದು ಬಂದುದು ಮಿಂಚಿನ ಸಂಚಲ ಮೂಡಿಸಿತ್ತು.


Election. Byndoor Constituency, Shimoga Parliament Constituency, Yadyurappa from BJP, Manjunath Bhandary from Congress and Geeta Shivarajkumar from JDS is participate as candidate. See the detail information About Parliamentary election
ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com