ಬೈಂದೂರು ಡೈರೆಕ್ಟರಿ”ಗೆ ನಿಮ್ಮ ಸಂಪರ್ಕ ಸಂಖ್ಯೆ ಸೇರಿಸಿ

ಬೈಂದೂರು: ಕುಂದಾಪುರ ತಾಲೂಕಿನ ನೆಲ, ಜಲ, ಭಾಷೆ, ಕಲೆ, ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಕುಂದಾಪ್ರ ಡಾಟ್ ಕಾಂ ಮೂರನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹೊತ್ತಿನಲ್ಲಿ ತಾಲೂಕಿನ ಸಂಪೂರ್ಣ ಮಾಹಿತಿಯುಳ್ಳ ಡೈರೆಕ್ಟರಿಯನ್ನು ಹೊರತರಲು ನಿರ್ಧರಿಸಿದ್ದು ಅದರ ಮೊದಲ ಭಾಗವಾಗಿ ‘ಬೈಂದೂರು ಡೈರೆಕ್ಟರಿ’ ಮೇ.25ರಂದು ಬಿಡುಗಡೆಗೊಳ್ಳಲಿದೆ.
        ಬೈಂದೂರಿನ ಸಂಪೂರ್ಣ ಮಾಹಿತಿಯನ್ನೊಳಗೊಳ್ಳಲಿರುವ ‘ಬೈಂದೂರು ಡೈರೆಕ್ಟರಿ’ಗೆ ಶಿರೂರಿನಿಂದ ನಾಗೂರು, ಅರೆಶಿರೂರು ವರೆಗಿನ ನಾಗರೀಕರು ಹಾಗೂ ಪರವೂರಿನಲ್ಲಿ ನೆಲೆಸಿರುವವರು ತಮ್ಮ ಇಲ್ಲವೇ ತಮ್ಮ ಸಂಸ್ಥೆ-ಉದ್ಯಮ/ ಸೇವೆಗಳ ಕುರಿತು ಮಾಹಿತಿಯನ್ನು ಸೇರಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕುಂದಾಪ್ರ ಡಾಟ್ ಕಾಂ ನ ಸಂಪಾದಕ ಸುನಿಲ್ ಬೈಂದೂರು (9738877358, editor@kundapra.com) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com