ಮತ್ತೆ ಬಂದಿದೆ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ
* ಸತತವಾಗಿ 5ನೇ ವರ್ಷ ಆಯೋಜಿಸುತ್ತಿರುವ ಉದ್ಯೋಗ ಮೇಳ *
* ನೂರಾರು ರಾಷ್ಟ್ರೀಯ, ಬಹುರಾಷ್ಟ್ರೀಯ ಕಂಪೆನಿಗಳು ಭಾಗಿ *
* ಪದವಿಧರರಿಗೆ ವಿಪುಲ ಅವಕಾಶಗಳು *
* ಆಳ್ವಾಸ್ ಪ್ರಗತಿ 2014 *

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ  ಸತತವಾಗಿ 5ನೇ ಬಾರಿಗೆ ಆಯೋಜಿಸುತ್ತಿರುವ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ 2014 - ಕಾರ್ಪರೇಟ್ ಗೇಟ್ ವೇ' ಜೂನ್ 14 ಮತ್ತು 15ರಂದು ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ ಪದವಿ ಕ್ಯಾಂಪಸ್ ನಲ್ಲಿ ಜರುಗಲಿದ್ದು ನೂರಾರು ರಾಷ್ಟ್ರೀಯ, ಅಂತರಾಷ್ಟ್ರೀಯ ಕಂಪೆನಿಗಳು ಭಾಗವಹಿಸುತ್ತಿರುವುದಲ್ಲಿದೇ ಸಾವಿರಾರು ಉದ್ಯೋಗಾಕಾಂಕ್ಷಿಗಳು ಇದಕ್ಕೆ ಸಾಕ್ಷಿಯಾಗಲಿದ್ದಾರೆ.

   ಈ ಭಾರಿ ಸುಮಾರು 200ಕ್ಕೂ ಹೆಚ್ಚಿನ ಕಂಪೆನಿಗಳು ವಿವಿಧ ಕ್ಷೇತ್ರಗಳಾದ ಐಟಿ, ಹಾಸ್ಪಿಟಾಲಿಟಿ, ಉತ್ಪಾದನೆ, ಆಟೋಮೊಬೈಲ್, ಹೆಲ್ತ್ ಕೇರ್, ಮಾಧ್ಯಮ, ಸೇಲ್ಸ್ ಮತ್ತು ರಿಟೇಲ್, ಎನ್.ಜಿ.ಓ. ಮತ್ತು ಶಿಕ್ಷಣ, ಬಿಪಿಓ, ಕೆಪಿಓ, ಹೆಚ್.ಆರ್.,  ಮತ್ತು ಡಿಫೆನ್ಸ್  ಗಳಿಂದ  ಭಾಗವಹಿಸುವ ನಿರೀಕ್ಷೆ ಇದೆ.

   ಪ್ರತಿಷ್ಟಿತ ಕಂಪೆನಿಗಳಾದ  ಟೈಟಾನ್, ವಿಡಿಯೋಕಾನ್, ಒರ್ಯಾಕಲ್, ಇ&ವೈ, ಐಬಿಎಂ, ಯುಎ ಎಕ್ಸ್ಚೆಂಜ್, ಎನ್.ಎಮ್.ಸಿ, ನಾರಾಯಣ ಹೃದಯಾಲಯ, ಬಯೋಕಾನ್, ಆದಿತ್ಯ ಬಿರ್ಲಾ ಗ್ರೂಫ್, ಟೆಕ್ ಮಹೇಂದ್ರ, ಗೋದ್ರೆಜ್, ಐಟಿಸಿ, ಕಿಲೋಸ್ಕರ್ ಇಲೆಟ್ರೀಕ್, ಎಲ್&ಟಿ, ತಾಜ್ ಗ್ರೂಫ್, ಐಸಿಐಸಿಐ ಬ್ಯಾಂಕ್, ವಿಪ್ರೋ, ಟಿವಿಎಸ್, ಆಲಕಾರ್ಗೊ, ಎಕ್ಸಚೆಂಜಿಂಗ್, ಕ್ಯಾಪಜೆಮಿನಿ. ಮಂತಾದವುಗಳು ಭಾಗವಹಿಸುತ್ತಿವೆ.

    ಕಳೆದ ಭಾರಿ ನಡೆದ ‘ಆಳ್ವಾಸ್ ಪ್ರಗತಿ 2013’ ಉದ್ಯೋಗ ಮೇಳದಲ್ಲಿ 179 ಕಂಪೆನಿಗಳು, 400ಕ್ಕೂ ಹೆಚ್ಚು ಕಾಲೇಜುಗಳಿಂದ 15000 ಕ್ಕೂ ಮಿಕ್ಕಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಮಾತ್ರವಲ್ಲದೇ ಆಳ್ವಾಸ್ ಪ್ರತಿಷ್ಠಾನವು ಕಳೆದ 3 ವರ್ಷಗಳಿಂದ ಚಿಕ್ಕಬಳ್ಳಾಪುರ ಉದ್ಯೋಗ ಮೇಳವನ್ನು ಆಯೋಜಿಸುತ್ತಿದ್ದು ಕಳೆದ ಭಾರಿ 14 ಕ್ಸೇತ್ರಗಳಲ್ಲಿ  277 ಕಂಪೆನಿಗಳು ಭಾಗವಹಿಸಿದ್ದವು.  

     ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕಳೆದ 6 ವರ್ಷಗಳಿಂದ ಉದ್ಯೋಗಾಕಾಂಕ್ಷಿಗಳಿಗೆ ಸರಿಯಾದ ಉದ್ಯೋಗಗಳನ್ನು ಹುಡುಕಲು ಸಹಾಯಕವಾಗಲು ವಿವಿಧ ಕ್ಯಾಂಪಸ್ ಡ್ರೈವ್, ತರಬೇತಿಗಳನ್ನು ಆಯೋಜಿಸುತ್ತಿದೆ. ಕೇವಲ ಉದ್ಯೋಗಗಳನ್ನು ದೊರಕಿಸಿಕೊಡುವುದು ಮಾತ್ರವಲ್ಲದೇ ಗ್ರಾಮೀಣ ಯುವಜನತೆಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳ ಬಗ್ಗೆ  ಮಾಹಿತಿ ನೀಡುವುದು ಕೂಡಾ ಇದೆ ಪ್ರತಿಷ್ಠಾನದ ಉದ್ದೇಶವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
     
ಆಳ್ವಾಸ್ ಪ್ರಗತಿ -2014 ವಿಶೇಷತೆಗಳು
1. ಉದ್ದಿಮಗಳಿಗೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಉಚಿತ ನೋಂದಣಿ ಮಾಡುವ ಅವಕಾಶವಿದೆ. ನೋಂದಣಿ ಮತ್ತು ಯಾವುದೇ ಹಂತದಲ್ಲಿಯೂ ಕೂಡ ಯಾವುದೇ ಶುಲ್ಕವಿರುವುದಿಲ್ಲ.

2.  ಉದ್ಯೋಗಾಕಾಂಕ್ಷಿಗಳು ಸಂದರ್ಶನಕ್ಕೂ ಮೊದಲೇ ಆನಲೈನ್ ನೋಂದಣಿ ಮಾಡಲು ಅವಕಾಶವಿದೆ

3. ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗೆ ತಮ್ಮ ವಿದ್ಯಾರ್ಹತೆ ತಕ್ಕ ಉದ್ಯೋಗ ದೊರಕಲು ಸಹಾಯವಾಗಿವಂತೆ  ಕಲರ್ ಕಾರ್ಡ್ ನೀಡಲಾಗುತ್ತದೆ. 

4. ಕ್ಯಾಂಪಸ್ ನಲ್ಲಿ ಎಂಪ್ಲಾಯೇಬಿಲಿಟಿ ಎನ್ಹಾನ್ಸ್ಮೆಂಟ್ ಸೆಂಟರ್ ಇದ್ದು ಇಲ್ಲಿ ೧೦೦ ಕ್ಕೂ ಮಿಕ್ಕಿ ಸಲಹೆಗಾರರು ಉದ್ಯೋಗಾಕಾಂಕ್ಷಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ವಿಶೇಷವಾಗಿ ಮೀಸಲಿದ್ದಾರೆ.

5. ಆಳ್ವಾಸ್ ಪ್ರಗತಿ 2014ರಲ್ಲಿ  ಲಭ್ಯವಿರುವ ಎಲ್ಲಾ ಹುದ್ದೆಗಳ ಬಗ್ಗೆ ಇಲ್ಲಿ ಪೂರ್ಣ ಮಾಹಿತಿಯನ್ನು ಕ್ಲ್ಯಾರಿಟಿ  ವಾಲ್ ಪ್ರದರ್ಶಿಸಲಾಗುತ್ತದೆ. 

6. ಬಿಬಿಎಂ, ಬಿಕಾಂ, ಬಿಸಿಎ, ಬಿಎಸ್ಸಿ, ಬಿಎಚಎಂ, ಬಿಎಸಡ್ಬ್ಲೂ ಆಯ್ದುಕೊಂಡ ಪದವಿಧರರಿಗೆ ಬಹಳಷ್ಟು ಕಂಪೆನಿಗಳಲ್ಲಿ ಅವಕಾಶವಿದೆ. ಪ್ರಮುಖ ವಿದೇಶಿ ಬ್ಯಾಂಕುಗಳು , ಔಷಧಿ ಕಂಪೆನಿಗಳು, ಮತ್ತು ಉತ್ಪಾದನ ಕಂಪೆನಿಗಳು ಸೇರಿದಂತೆ ಹತ್ತಾರು ಕಂಪೆನಿಗಳು ಪದವಿಧರರಿಗಾಗಿ ಕಾಯುತ್ತಿದೆ.

7. ನರ್ಸಿಂಗ್ ಪದವಿಧರರಿಗೆ ಉತ್ತಮ ಅವಕಾಶಗಳಿದ್ದು, ಎನ್.ಎಂ.ಸಿ, ನಾರಾಯಣ ಹೃದಯಾಲಯ, ಇಫಾನ್ ಗ್ಲೂಬಲ್, Wockhardt ನಂತಹ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ನರ್ಸಿಂಗ್ ಪದವಿಧರರಿಗೆ ಉತ್ತಮ ಅವಕಾಶಗಳಿವೆ. ವಿದೇಶದಲ್ಲಿ 
ನರ್ಸಿಂಗ್ ಹುದ್ದೆಗಳಿಗೆ ಪದವಿಯ ನಂತರ ಕನಿಷ್ಠ ೨ ವರ್ಷದ ಅನುಭವ ಇರಬೇಕು.

8. ವಿದೇಶೀ ಕಂಪೆನಿಗಳು ಭಾಗವಹಿಸುತ್ತಿವೆ ಎನ್.ಎಂ.ಸಿ, ಯುಎ ಎಕ್ಸಚೆಂಜ್ ಕಂಪೆನಿಗಳು ವಿದೇಶೀ ಉದ್ಯೋಗ ಅವಕಾಶಗಳು ಗಲ್ಫ್ ರಾಷ್ಟ್ರಗಳಲ್ಲಿ ದೊರಕುತ್ತವೆ.

9. ಐಟಿಐ, ಡಿಪ್ಲೊಮೋ ಆದ ವಿದ್ಯಾರ್ಥಿಗಳಿಗೂ ಉತ್ತಮ ಅವಕಾಶಗಳಿದ್ದು  ಇಟಾನ್, ಐಟಿಸಿ, ವಿಡಿಯೋಕಾನ್, ಬಯೋಕಾನ್, ಲಕ್ಷ್ಮೀ ಮಿಶಿನ್ ವರ್ಕ್ಸ್ ಮಂತಾದ ಕಂಪೆನಿಗಳ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶವಿದೆ.

ನೋಂದಣಿ ಪ್ರಕ್ರಿಯೆ:

ಆನ್ಲೈನ್ ನೊಂದಣಿ ಮಾಡಿ: http://www.alvaspragati.com/register.php.   

ಉದ್ಯೋಗ ಮೇಳ ದಲ್ಲಿ ಭಾಗವಹಿಸುವಾಗ ಇವುಗಳು ನಿಮ್ಮ ಜೋತೆಗಿರಲಿ:
1. ಪಾಸಪೋರ್ಟ್ ಗಾತ್ರದ ಭಾವಚಿತ್ರ ಮತ್ತು ಬಯೋ- ಡೇಟಾ (5 ರಿಂದ 10 ಪ್ರತಿಗಳು)
2. ಎಲ್ಲಾ ಅಂಕ ಪಟ್ಟಿಗಳ ಪ್ರತಿಗಳು (ಜೆರಾಕ್ಸ್ ಮಾತ್ರ)
3. ಆನಲೈನ್ ನೋಂದಣಿ ಮಾಡಿದ ಸಂಖ್ಯೆ
ಸಂದರ್ಶನದ ದಿನ 8:30ಕ್ಕೆ ಮಂಚೆ ಮೂಡುಬಿದಿರೆಯ ವಿದ್ಯಾಗಿರಿಯ ಆಳ್ವಾಸ್ ಪದವಿ ಕ್ಯಾಂಪಸ್ ನಲ್ಲಿ ಹಾಜರಾಗಬೇಕು.

ಹೆಚ್ಚಿನ ಮಾಹಿತಿ ಸಂಪರ್ಕಿಸಬಹುದು:
* 9611686148  *  9008907716   *  9844667337  *    9902625932    * 08258-262716 
ಇ-ಮೇಲ್: alvaspragati10@gmail.com           *  info@alvaspragati.com. 


‘Alva’s Pragati-2014’ is an annual MASS JOB MELA by Alva’s Education Foundation, Moodbidri and is scheduled for the 14th and 15th of June 2014. This event is being hosted for the FIFTH time at the Vidyagiri campus.