ಅಧ್ಯಕ್ಷರಾಗಿ ಎಂ. ಎನ್. ರಾಜೇಂದ್ರಕುಮಾರ್ ಆಯ್ಕೆಯಾಗಿದ್ದರೇ, ಉಪಾಧ್ಯಕ್ಷರಾಗಿ ವಿನಯ್ ಕುಮಾರ್ ಸೂರಿಂಜೆ ಆಯ್ಕೆಯಾಗಿದ್ದಾರೆ.
ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚುನಾವಣಾಧಿಕಾರಿ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಆಯ್ಕೆಯನ್ನು ದೃಢೀಕರಿಸಿದರು.
ಸತತ ಐದನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ:
ಈ ಭಾರಿಯೂ ಪುನರಾಯ್ಕೆಯಾಗುವುದರ ಮೂಲಕ ರಾಜೇಂದ್ರ ಕುಮಾರ್ ಸತತ ಐದನೇ ಬಾರಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದಂತಾಗಿದೆ. 1987ರಲ್ಲಿ ಬ್ಯಾಂಕ್‌ನ ನಿರ್ದೇಶಕರಾದ ಅವರು 1994ರಲ್ಲಿ ಮೊದಲ ಬಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಬಳಿಕ 1999ರಲ್ಲಿ, 2004ರಲ್ಲಿ ಹಾಗೂ 2009ರಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಬ್ಯಾಂಕ್‌ನ ನಿರ್ದೇಶಕರಾಗುವುದಕ್ಕೆ ಮುನ್ನ ಆರು ವರ್ಷ ಇದೇ ಬ್ಯಾಂಕ್‌ನಲ್ಲಿ ಸಿಬ್ಬಂದಿಯಾಗಿದ್ದರು. ಬ್ಯಾಂಕ್ ಅಧ್ಯಕ್ಷರಾಗಿ 20 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು.

ಶತಮಾನೋತ್ಸವ:
1994ರಲ್ಲಿ ಡಿಸಿಸಿ ಬ್ಯಾಂಕ್ ರೂ. 64 ಕೋಟಿ ಠೇವಣಿ ಹೊಂದಿದ್ದು, ₨ 44 ಕೋಟಿ ಸಾಲ ನೀಡಿತ್ತು. ಇಂದು ರೂ. 2012 ಕೋಟಿ ಠೇವಣಿ ಹೊಂದಿದ್ದು, ರೂ. 1700 ಕೋಟಿ ಸಾಲ ನೀಡಿದ್ದು ದೇಶದ ಶ್ರೇಷ್ಠ ಸಹಕಾರಿ ಬ್ಯಾಂಕ್‌ಗಳಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಒಂದಾಗಿದೆ.
ಎಸ್‌ಸಿಡಿಸಿಸಿ ಬ್ಯಾಂಕ್ ಈ ವರ್ಷ ಶತಮಾನೋತ್ಸವ ಆಚರಿಸುತ್ತಿದ್ದು, ಜೂ.16ರ ಒಳಗೆ 11 ಹೊಸ ಶಾಖೆಗಳನ್ನು ಆರಂಭಿಸುವ ಉದ್ದೇಶವಿದೆ. ಈ ಮೂಲಕ ಮುಂದಿನ ನವೆಂಬರ್ ವೇಳೆಗೆ ಶಾಖೆಗಳ ಸಂಖ್ಯೆಯನ್ನು 100ಕ್ಕೆ ಏರಿಸುವ ಗುರಿ ಇದೆ. ಅಲ್ಲದೆ ಶತಮಾನೋತ್ಸವ ಸಂಭ್ರಮಕ್ಕೆ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು, ಕೆಲಸ ಕಾರ್ಯಗಳು ಅಂತಿಮ ಹಂತದಲ್ಲಿದೆ ಎಂದು ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ನಿರ್ದೇಶಕರುಗಳು:
ಎಂ.ಎನ್. ರಾಜೇಂದ್ರ ಕುಮಾರ್ ಮತ್ತು ವಿನಯ ಕುಮಾರ್ ಸೂರಿಂಜೆ (ಮಂಗಳೂರು),
ಎಸ್. ರಾಜು ಪೂಜಾರಿ ಮತ್ತು ಬಿ. ರಘುರಾಮ ಶೆಟ್ಟಿ (ಕುಂದಾಪುರ),
ಕಿಶನ್ ಹೆಗ್ಡೆ ಕೊಳ್ಕೆಬೈಲ್ ಮತ್ತು ರಾಜೇಶ್ ರಾವ್ (ಉಡುಪಿ),
ಬಿ. ನಿರಂಜನ್ (ಬೆಳ್ತಂಗಡಿ),
ಶಶಿ ಕುಮಾರ್ ರೈ ಬಿ. (ಪುತ್ತೂರು),
ಕೆ. ಎಸ್. ದೇವರಾಜ್ (ಸುಳ್ಯ),
ಎಂ. ವಾದಿರಾಜ ಶೆಟ್ಟಿ (ಕಾರ್ಕಳ),
ಭಾಸ್ಕರ ಎಸ್. ಕೋಟ್ಯಾನ್ (ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘ),
ಸದಾಶಿವ ಉಳ್ಳಾಲ್ (ಪಟ್ಟಣ ಸಹಕಾರಿ ಬ್ಯಾಂಕ್‌ಗಳು, ಕೃಷಿಯೇತರ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರ),
ಎಸ್.ಬಿ. ಜಯರಾಮ ರೈ (ಇತರ ಎಲ್ಲಾ ಸಹಕಾರ ಸಂಘಗಳ ಕ್ಷೇತ್ರ).
M.N. Rajendrakumar 5th time reelected as President of SCDCC Bank
ನಿಮ್ಮ ಅಭಿಪ್ರಾಯ ಬರೆಯಿರಿ
ಕುಂದಾಪ್ರ ಡಾಟ್ ಕಾಂ- editor@kundapra.com