ತಗ್ಗರ್ಸೆ: ನವೀಕೃತ ಗರ್ಭಗುಡಿ ಸಮರ್ಪಣೆ

ಬೈಂದೂರು: ಇಲ್ಲಿನ ತಗ್ಗರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನವೀಕೃತ ಗರ್ಭಗುಡಿ ಸಮರ್ಪಣೆ, ಬಿಂಬ ಪ್ರತಿಷ್ಠಾಪನೆ, ಬ್ರಹ್ಮಕಲಸ, ಪುಣ್ಯೋತ್ಸವ ಕಾರ್ಯಕ್ರಮ ಮೇ. 18 ರಿಂದ 22 ರ ವರೆಗೆ ನಡೆಯಲಿದೆ. 
       ಐತಿಹಾಸಿಕ ಹಿನ್ನೆಲೆಯ ಹಾಗೂ ಪ್ರಸಿದ್ಧ ಕಾರಣೀಕ ಸ್ಥಳವಾಗಿರುವ ಈ ದೇವಸ್ಥಾನದ ನವೀಕೃತ ಗರ್ಭಗುಡಿ ಸಂಪೂರ್ಣ ಶಿಲಾಮಯವಾಗಿದೆ. ತಾಮ್ರದ ಮೇಲ್ ಹೊದಿಕೆ ಹೊಂದಿದೆ. ಅಂದಾಜು ಒಂದು ಕೋಟಿ ರೂಗಳಿಗೂ ಅಧಿಕ ವೆಚ್ಚದಲ್ಲಿ ಜೋರ್ಣೋದ್ದಾರ ಹೊಂದಿದೆ. ಮೇ.18 ರಿಂದ ಧಾರ್ಮಿಕ ಕಾರ್ಯಕ್ರಮ, 19ರಂದು ಪುಣ್ಯಾಹ ವಾಚನ, ಗಣಯಾಗ, ಮಹಾಲಿಗೇಶ್ವರ ದೇವರ ಪುನ:ಪ್ರತಿಷ್ಠೆ, ಜೀವ ಕುಂಭಾಬಿಶೇಕ, ಮಹಾಪೂಜೆ, ಅನ್ನಸಂತರ್ಪಣೆ, ಮೇ. 20 ರಂದು ನವಗ್ರಹ ಯಾಗ, ಸಹಸ್ರಕಲಸ ಸಹಿತ ಪ್ರತಿಷ್ಠೆ ಅಧಿವಾಸ ಹೋಮ, ಮೇ. 21ರಂದು ಬ್ರಹ್ಮಕಲಸ ಪೂಜೆ, ಕಲಶಾಭಿಷೇಕ, ಮಹಾ ಅನ್ನಸಂತರ್ಪಣೆ, ಮೇ.22ರಂದು ಮಹಾಮತ್ರಾಕ್ಷತೆ ಸಂಪ್ರೋಕ್ಷಣೆ ನಡೆಯಲಿದೆ.
      ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿದ್ಯಾವಾಚಸ್ಫತಿ ಡಾ. ವಿಶ್ವ ಸಂತೋಷಿ ಭಾರತಿ ಶ್ರೀಪಾದರು ಆಶಿರ್ವಚನ ನೀಡಲಿದ್ದಾರೆ. ಸಂಸದ ಬಿ. ವೈ. ರಾಘವೇಂದ್ರ, ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಭಾಗವಹಿಸಲಿದ್ದಾರೆ. ನೃತ್ಯ ಸಿಂಚನ, ನೃತ್ಯ ವೈಭವ, ಭ್ರಮಾಲೋಕ, ಸಂಗೀತ ವೈವಿಧ್ಯ, ಯಕ್ಷಗಾನ ಮುಂತಾದ ಕಾರ್ಯಕ್ರಮ ನಡೆಯಲಿದೆ ಎಂದು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಹಾಗೂ ಆಡಳಿತ ಮೊಕ್ತೇಸರ ತಗ್ಗರ್ಸೆ ನಾರಾಯಣ ಹೆಗ್ಡೆ ತಿಳಿಸಿದ್ದಾರೆ.


Byndoor: Thaggarse Shree Mahalingeshwara Temple 

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com