ಮತದಾನೋತ್ತರ ಸಮೀಕ್ಷೆ: ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ

ಬೆಂಗಳೂರು: ವಿವಿಧ ವಾಹಿನಿಗಳು  ಮತದಾನೋತ್ತರ ನಡೆಸಿದ ಸಮೀಕ್ಷೆಯಲ್ಲಿ ದೇಶದ ಮತದಾರರು ಹೊಸ ಸರಕಾರ ರಚನೆಯ ಜವಾಬ್ದಾರಿಯನ್ನು ಎನ್‌ಡಿಎ ಮೈತ್ರಿಕೂಟದ ಕೈಗೆ ಒಪ್ಪಿಸಿರುವುದು ವ್ಯಕ್ತವಾಗುತ್ತಿದೆ.. 

ಸಿ ಓಟರ್‌ ನಡೆಸಿರುವ ಸಮೀಕ್ಷೆಯ ಪ್ರಕಾರ ಎನ್‌ಡಿಎ ಮೈತ್ರಿ ಕೂಟಕ್ಕೆ 289 ಸ್ಥಾನ ಲಭಿಸಲಿದೆ. ಸರಕಾರ ರಚಿಸಲು  272  ಸ್ಥಾನಗಳ ಅಗತ್ಯವಿದ್ದು ಎನ್‌ಡಿಎ ಮೈತ್ರಿಕೂಟಕ್ಕೆ ನಿಚ್ಚಳ ಬಹುಮತದ ಭರವಸೆ ಮೂಡಿದೆ.

ಈ ಬಾರಿ ಕಾಂಗ್ರೆಸ್‌ಗೆ 101 ಸ್ಥಾನ ಲಭಿಸಲಿದೆ ಎಂಬುದು ಸಿ ಓಟರ್‌ ಸಮೀಕ್ಷೆ ಯಲ್ಲಿ ಬಹಿರಂಗವಾಗಿರುವ ಇನ್ನೊಂದು ಪ್ರಮುಖ ಅಂಶ. ಕಾಂಗ್ರೆಸ್‌ಗೆ ಎರಡಂಕೆಯ ಸ್ಥಾನಗಳು ಕೂಡ ಈ ಬಾರಿ ಲಭಿಸುವುದಿಲ್ಲ ಎಂಬ ಅಭಿಪ್ರಾಯವನ್ನು ಈ ಸಮೀಕ್ಷೆ ಹುಸಿ ಗೊಳಿಸಿದೆ. ತೃತೀಯ ರಂಗ ಈ ಬಾರಿ 153 ಸ್ಥಾನಗಳು ಸಿಗಬಹುದೆಂದು ಸಮೀಕ್ಷೆ ತಿಳಿಸಿದೆ.

ಯಾವ ಯಾವ ರಾಜ್ಯದಲ್ಲಿ ಯಾವ ಪಕ್ಷಗಳಿಗೆ ಎಷ್ಟೆಷ್ಟು ಮತ ಎಂಬ ವಿವರ ಕೆಳಕಂಡಂತಿದೆ.
ಒಟ್ಟಾರೆಯಾಗಿ ಬಿಜೆಪಿ-289, ಯುಪಿಎ-101, ಇತರೆ-153
ಆಂಧ್ರಪ್ರದೇಶ-[ಸೀಮಾಂಧ್ರ-25]: ಕಾಂಗ್ರೆಸ್ 02, ಟಿಡಿಪಿ-08, ಟಿಆರ್’ಎಸ್-0, ವೈಎಸ್ಆರ್’ಸಿ-14, ಇತರೆ-01
ಆಂಧ್ರಪ್ರದೇಶ-[ತೆಲಂಗಾಣ-17]: ಕಾಂಗ್ರೆಸ್ 05, ಟಿಡಿಪಿ-01, ಟಿಆರ್’ಎಸ್-08, ಬಿಜೆಪಿ-02, ಇತರೆ-01
ಅರುಣಾಚಲ ಪ್ರದೇಶ [02]: ಕಾಂಗ್ರೆಸ್-00, ಬಿಜೆಪಿ-02, ಇತರೆ-00
ಅಸ್ಸಾಂ [14]: ಕಾಂಗ್ರೆಸ್-05, ಬಿಜೆಪಿ-06, ಎಯುಡಿಎಫ್-02, ಇತರೆ-01
ಬಿಹಾರ [40]: ಬಿಜೆಪಿ-28, ಆರ್’ಜೆಡಿ-10, ಜೆಡಿಯು-02
ಛತ್ತೀಸ್’ಗಢ [11]: ಬಿಜೆಪಿ-08, ಕಾಂಗ್ರೆಸ್-03
ಗೋವಾ [02]: ಬಿಜೆಪಿ-02, ಕಾಂಗ್ರೆಸ್-00
ಗುಜರಾತ್ [26]: ಬಿಜೆಪಿ-22, ಕಾಂಗ್ರೆಸ್-04
ಹರ್ಯಾಣ [10]: ಬಿಜೆಪಿ-06, ಕಾಂಗ್ರೆಸ್-02, ಹೆಚ್’ಜೆಸಿ-02
ಹಿಮಾಚಲ ಪ್ರದೇಶ [04]: ಬಿಜೆಪಿ-03, ಕಾಂಗ್ರೆಸ್-01
ಜಮ್ಮು ಮತ್ತು ಕಾಶ್ಮೀರ [06]: ಬಿಜೆಪಿ-03, ಎನ್’ಸಿ-02, ಪಿಡಿಪಿ-01
ಜಾರ್ಖಂಡ್ [14]: ಬಿಜೆಪಿ-09, ಕಾಂಗ್ರೆಸ್-01, ಜೆಎಂಎಂ-02, ಜೆವಿಎಂ-01, ಇತರೆ-01
ಕೇರಳ [20]: ಕಾಂಗ್ರೆಸ್-08, ಎಲ್’ಡಿಎಫ್-09, ಬಿಜೆಪಿ-00, ಐಯುಎಂಎಲ್-02, ಇತರೆ-01
ಮಧ್ಯಪ್ರದೇಶ [29]: ಬಿಜೆಪಿ-26, ಕಾಂಗ್ರೆಸ್-03
ಮಹಾರಾಷ್ಟ್ರ [48]: ಬಿಜೆಪಿ-17, ಶಿವಸೇನಾ-14, ಕಾಂಗ್ರೆಸ್-09. ಎನ್’ಸಿಪಿ-05, ಇತರೆ-03
ಮಣಿಪುರ [02]: ಕಾಂಗ್ರೆಸ್-01, ಇತರೆ-01
ಮೆಘಾಲಯ [02]: ಕಾಂಗ್ರೆಸ್-01, ಇತರೆ-01
ಮಿಜೋರಾಂ [01]: ಕಾಂಗ್ರೆಸ್-01, ಯುಡಿಎಫ್-00
ನಾಗಾಲ್ಯಾಂಡ್ [01]: ಎನ್’ಪಿಎಫ್-01, ಕಾಂಗ್ರೆಸ್-00
ಒಡಿಶಾ [21]: ಬಿಜೆಡಿ-11, ಕಾಂಗ್ರೆಸ್-04, ಬಿಜೆಪಿ-06
ಪಂಜಾಬ್ [13]: ಕಾಂಗ್ರೆಸ್-04, ಅಕಾಲಿದಳ-04, ಬಿಜೆಪಿ-02, ಎಎಪಿ-03
ರಾಜಸ್ಥಾನ [25]: ಬಿಜೆಪಿ-22, ಕಾಂಗ್ರೆಸ್-02, ಇತರೆ-01
ಸಿಕ್ಕಿಂ [01]: ಎಸ್’ಡಿಎಫ್-01, ಕಾಂಗ್ರೆಸ್-00
ತಮಿಳುನಾಡು [39]: ಡಿಎಂಕೆ-06, ಎಐಎಡಿಎಂಕೆ-27, ಕಾಂಗ್ರೆಸ್-01, ಬಿಜೆಪಿ-02, ಇತರೆ-03
ತ್ರಿಪುರಾ [02]: ಸಿಪಿಐಎಂ-02, ಕಾಂಗ್ರೆಸ್-00
ಉತ್ತರಪ್ರದೇಶ [80]: ಬಿಜೆಪಿ-54, ಎಸ್’ಪಿ-11, ಕಾಂಗ್ರೆಸ್-06, ಬಿಎಸ್’ಪಿ-08, ಇತರೆ-01
ಉತ್ತರಾಖಂಡ [05]: ಬಿಜೆಪಿ-04, ಕಾಂಗ್ರೆಸ್-01
ಪಶ್ಚಿಮ ಬಂಗಾಳ [42]: ಟಿಎಂಸಿ-27, ಎಡರಂಗ-09, ಕಾಂಗ್ರೆಸ್-04, ಬಿಜೆಪಿ-02
ದೆಹಲಿ[07]: ಬಿಜೆಪಿ-07, ಕಾಂಗ್ರೆಸ್-00, ಎಎಪಿ-00
ಕೇಂದ್ರಾಡಳಿತ ಪ್ರದೇಶಗಳು [06]: ಬಿಜೆಪಿ-02, ಕಾಂಗ್ರೆಸ್-02, ಇತರೆ-02

ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ ಎನ್‌ಡಿಎ ಮೈತ್ರಿಕೂಟಕ್ಕೆ 272 ಸ್ಥಾನ, ಯುಪಿಎಗೆ 115 ಮತ್ತು ಇತರರಿಗೆ 156 ಸ್ಥಾನ ಸಿಗುವ ನಿರೀಕ್ಷೆ ಇದೆ.

ಆಜ್‌ ತಕ್‌ ಸಮೀಕ್ಷೆ: ಎನ್‌ಡಿಎ 272ರಿಂದ 283, ಯುಪಿಎ 110ರಿಂದ 120. (ದಿಲ್ಲಿಯಲ್ಲಿ ಬಿಜೆಪಿಗೆ ಆರು ಸ್ಥಾನ ಸಿಗಲಿದೆ)

ಎಬಿಪಿ ನ್ಯೂಸ್‌/ಎಸಿ ನೀಲ್ಸನ್‌ ಸಮೀಕ್ಷೆ: ಬಿಜೆಪಿಗೆ ಉತ್ತರ ಪ್ರದೇಶದಲ್ಲಿ 46, ಕಾಂಗ್ರೆಸ್‌ಗೆ 8, ಸಮಾಜವಾದಿ ಪಕ್ಷಕ್ಕೆ 12, ಬಿಎಸ್‌ಪಿಗೆ 13.

2009ರ ಲೋಕಸಭಾ ಚುನಾವಣೆಯಲ್ಲಿ : ಕಾಂಗ್ರೆಸ್‌ ನೇತೃತ್ವದ ಯುಪಿಎಗೆ 262, ಬಿಜೆಪಿ ನೇತೃತ್ವದ ಎನ್‌ಡಿಎಗೆ 159. ಆಗ ಆಡ್ವಾಣಿ ಬಿಜೆಪಿ ಪ್ರಧಾನಿ ಹುದ್ದೆ ಅಭ್ಯರ್ಥಿಯಾಗಿದ್ದರು. ಮನಮೋಹನ್‌ ಸಿಂಗ್‌ ಎರಡನೇ ಅವಧಿಗೆ ಪ್ರಧಾನಿಯಾದರು !

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com

C-Voter conducted a post-poll survey clearly indicating that NDA will win 289 parliamentary seats