ಗರ್‍ಗರ್‍ಮಂಡ್ಲ: ಕುಂದಾಪ್ರ ಕನ್ನಡದ ಸಿನೆಮಾ ಇಂದು ತೆರೆಗೆ

ಕುಂದಾಪುರ: ಕುಂದಾಪುರ ಕನ್ನಡದ ಮೊಟ್ಟ ಮೊದಲ ಕಮರ್ಶಿಯಲ್ ಚಲನಚಿತ್ರ ಗರ್‍ಗರ್‍ಮಂಡ್ಲ ಇಂದು (ಜೂನ್ 13, ಶುಕ್ರವಾರ) ಕುಂದಾಪುರದ ವಿನಾಯಕ ಚಿತ್ರಮಂದಿರ ಹಾಗೂ ಬೈಂದೂರಿನ ಶಂಕರ ಚಿತ್ರಮಂದಿರದಲ್ಲಿ ತೆರೆಕಾಣಲಿದೆ. 
ಕುಂದಾಪುರ ಕನ್ನಡದ ಹಾಡುಗಳ ಮೂಲಕ ಮನೆಮಾತಾಗಿರುವ ಪಣ್ಕ್ ಮಕ್ಕಳ್ ತಂಡದಿಂದ, ಪ್ರತಿಭಾವಂತ ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಸಂಪೂರ್ಣ ಕುಂದಾಪುರ ಕನ್ನಡದಲ್ಲಿಯೇ ನಿರ್ಮಾಣವಾಗಿದೆ. ಕುಂದಾಪುರ ಪರಿಸರದಲ್ಲಿಯೇ ಚಿತ್ರಿಕರಣಗೊಂಡಿರುವುದಲ್ಲದೇ ಚಿತ್ರದುದ್ದಕ್ಕೂ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ.
   ದಿನಕಳೆದಂತೆ ಮೆರೆಯಾಗುತ್ತಿರುವ ಭಾಷಾಭಿಮಾನವನ್ನು ಮತ್ತೆ ನೆನಪಿಸುವ, ಚಂದದ ಊರು ಎನ್ನುವ ಭಾವುಕ ಮನಸ್ಸಿಗೆ ಕಾಣದ ಊರಿನ ವಾಸ್ತವತೆಯನ್ನು ತೋರಿಸುವ ಕೆಲಸವನ್ನು ತೆರೆಯ ಮೇಲೆ ಮಾಡಲಾಗಿದೆ.

ಸುಮಾರು 52 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಚಿತ್ರ ಕುಂದಾಪುರ ಕನ್ನಡಾಭಿಮಾನಿಗಳಲ್ಲಿ ಬಾರಿ ನಿರೀಕ್ಷೆ ಹುಟ್ಟುಹಾಕಿದೆ. ಆದರೆ ಸದ್ಯಕ್ಕೆ ಎರಡೇ ಚಿತ್ರಮಂದಿರಗಳಲ್ಲಿ ಸಿನೆಮಾ ಬಿಡುಗಡೆಗೊಳ್ಳುತ್ತಿದ್ದು ಪ್ರೇಕ್ಷಕರುಗಳು ಸಿನೆಮಾ ಗೆಲ್ಲಿಸಿದರೇ ಮಂದಿನ ದಿನಗಳಲ್ಲಿ ಬೆಂಗಳೂರು, ಮಂಬೈ, ದುಬೈಯಲ್ಲಿ ಚಿತ್ರ ಪ್ರದರ್ಶಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಯಾವುದೇ ಲಾಭದ ನಿರೀಕ್ಷೆ ಇಲ್ಲದೇ ಭಾಷಾಭಿಮಾನದಿಂದಲೇ ಸಿನೆಮಾ ಮಾಡಿದ್ದು ಕುಂದನಾಡಿನ ಪ್ರೇಕ್ಷಕರು ಸಾಥ್ ನೀಡಬೇಕಾಗಿ ನಿರ್ದೇಶಕ ರವಿ ಬಸ್ರೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. Gar Gar Mandla Kundapura kannada commercial film releasing today (13th June friday) at Kundapura Vinayaka Talkies and Byndoor Shankar Talkies. Expecting more audience from Kundapura taluk. 
kundapra.com is the Official Media Parter of Gar Gar Mandla Movie
ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com