ಹನಿ ಮಳೆಯ ಪುಳಕದ ಲೀಲೆ...

ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು ...
ತುಂಬಾ ಕುತೂಹಲ .... ನನಗೆ ತುಂಬಾ ಕುತೂಹಲ ...
       ದೇನೋ ಮಳೆರಾಯ ನಿನ್ನ ಲೀಲೆ ... ನೀನು ಇಳೆಗೆ ಜಾರಿದೊಡನೆ ಆಗುವ ಬದಲಾವಣೆಗೆ ತಂಪು ಹನಿಗಳ ಪುಳಕದಲೀಲೆ ಎಂದು ಕರೆಯಲೇನಾ! ಇರಬಹುದು ಮಳೆರಾಯ, ಅದೇಷ್ಟೊ ಕವಿಗಳ ಪದಪುಂಜ ನೀನು, ಕೋಟ್ಯಾನು ಕೋಟಿ ಸಸ್ಯ ಸಂಕುಲದ ಉಸಿರು ನೀನು, ಭೂಮಿ ತಾಯಿಯ ಬನದ ಮಕ್ಕಳಾದ ನಮಗೆ ಸಂತಸ ದು:ಖ ನೀಡುವ ತಣ್ಣನೆಯ ಭಿತ್ತಿ ನೀನು, ನನ್ನ ಕೌತಕದ ಕೇಂದ್ರಕ್ಕೆ ಬಿಂದು ನೀನು, ನಿನ್ನೊಡನೆ ಬೆರೆಯಲು, ಜೊತೆ ನೆನೆಯಲು, ಹಾಡಿ ಕುಣಿದಾಡಲು ನನಂಗತೂ ತುಂಬಾ ಕುತೂಹಲ ಕಣೋ, ಹೇ ನಿನ್ನಲ್ಲಿ ಅದೇನು ಶಕ್ತಿ ಇದೆಯೋ ಗೊತ್ತಿಲ್ಲಾ. ಭೂಮಂಡಲದ ಎಲ್ಲಾ ಜೀವಿಗಳ ಹ್ಲದಯ ಕಮಲದಲ್ಲಿ ಪ್ರೀತಿಯೊಡೆದು ಪರಿಮಳವ ಸೂಸುತ, ಬೆಚ್ಚಗೆನೆಯ ಪ್ರೀತಿಯ ಮಬ್ಬಲಿ ಅಚ್ಚರಿಯ ಕನಸುಗಳು ಮೂಡುವಂತೆ ಮಾಡುವ ಸೊಗಸುಗಾರ ಕಣೋ ನೀನು. ಜರಿ-ಜರಿ ಮಳೆಯಹನಿ ಗೆಳೆಯನೇ ಯಾಕೆ ಪರಿ ಪರಿಯಲಿ ಕಾಡುತ್ತಿರುವೆ.., ಕನಸುಗಳು ಚಿಗುರೊಡೆಯುತ್ತಿವೆ, ನೊಂದ ಕುಟುಂಬಗಳ ಮನದ ಚಪ್ಪರದ ಚಳಿ ನೀರಿನ ಸೋರುವಿಕೆಗೆ ಕನಸುಗಳು ಮುದ್ದೆಯಾಗಿ ನಡುಗುತ್ತಿವೆ.
      ನೀನು ಹನಿಯಾಗಿ ತವಕದಿಂದ ಭೂಮಿಗೆ ಬಿದ್ದೊಡನೆ ಅದೆಷ್ಟೂ ಸಂತಸ ಆಗುತ್ತದೆ ಗೊತ್ತಾ?..! ಜಡಿ ಮಳೆಯಲ್ಲಿ ಕೊಡೆ ಇಲ್ಲದೆ ಮರದಡಿಯಲ್ಲಿ ನಿಂತು ಒದ್ದೆಯಾಗಿದ್ದು, ಸಣ್ಣವನಿದ್ದಾಗ ಶಾಲೆಗೆ ಒಬ್ಬಂಟಿಗನಾಗಿ, ರಸ್ತೆಯಂಚಲಿ ಚಲಿಸುತ್ತಿರುವಾಗ ಆ ಉದ್ದನೆಯ ಕೊಡೆಯು ಹಾರಿ ಹೋದದ್ದನ್ನು ಕಾಲೇಜು ಜೀವನದ ಅಂಚಿನಲ್ಲಿ ಬಿಡದೇ ಸುರಿಯುತ್ತಿರುವ ಮಳೆಗೆ ಹೆದರದೇ ಆ ಮಬ್ಬಿನಂಚಲೇ ಹುಡುಗಿಯರನು ನೋಡುತ್ತಾ, ಗಲಾಟೆ ಮೋಜು-ಮಸ್ತಿಗಳನ್ನು ಮಾಡುತ್ತಾ ಕಳೆದ ಆ ಕ್ಷಣವು ಇಂದಿಗೂ ಕಣ್ಣಿಗೆ ಸವಿಯೂಟವ ನೀಡುತ್ತವೆ.
ನಿನ್ನ ಒಂದೊಂದು ಹನಿಯು ನನ್ನ ಮೇಲೆ ಬಿದ್ದೊಡನೆ ಮನದ ಮುಗಿಲಿನ ಸಾಲಲ್ಲಿ ವಿಷಯಗಳ ಪುಂಜಗಳು ಹನಿಯಂತೆ ಉದುರಿ, ಕವನಗಳು ಸ್ವರ ಪಡೆದು ಹಾಡಾಗುತ್ತವೆ ಕಣೋ ಗೆಳೆಯ.
ನಿನ್ನ ನಾ ಹೇಗೆ ವಣರ್ಿಸಲಿ ಗೆಳೆಯ... ಗೊತ್ತಿಲ್ಲ ಮಳೆರಾಯ... ಆದರೆ ತುಂಬಾ ಇಷ್ಟ ನೀ ಎನಗೆ..., ನಲ್ಮೆಯೂರಿನ ಕನಸಿನ ಲೋಕದ ದಾರಿಯಲ್ಲಿ, ಸಿಕ್ಕ ಗೆಳೆಯ ನೀ ನನಗೆ... ನನ್ನಿ ಬರಹದ ಪದ ನೀ..., ನಾ ಹಾಡುವ ಹಾಡಿನ ಸ್ವರ ನೀ.....
ಲೇಖಕರು - ಸಂದೀಪ್  ಶೆಟ್ಟಿ ಹೆಗ್ಗದ್ದೆ 
ಸಂಪರ್ಕ - ಫೇಸ್ಬುಕ್               

ಕುಂದಾಪ್ರ ಡಾಟ್ ಕಾಂ 
ನಿಮ್ಮ ಅಭಿಪ್ರಾಯ ಬರೆಯಿರಿ