೯ ನೇ ಉಡುಪಿ ಜಿಲ್ಲಾ ಸಾಹಿತ್ತ ಸಮ್ಮೇಳನ ಸಮಾರೋಪ

ಸಾಧಕರಿಗೆ ಸನ್ಮಾನ, ಅಧ್ಯಕ್ಷರಿಗೆ ತುಲಾಭಾರ ಸನ್ಮಾನ

ಉಡುಪಿ: ೯ ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ರಾಮದಾಸ ಅವರನ್ನು ಪುಸ್ತಕದ ತುಲಾಭಾರ ಮಾಡಿ ಗೌರವಿಸುವ ವಿಶಿಷ್ಟ ಕಾರ್ಯಕ್ರಮ ಎರಡನೇ ದಿನ ಸಂಭ್ರಮದಿಂದ ನಡೆಯುವುದರೊಂದಿಗೆ ಸಮ್ಮೇಳನ ಸಮಾಪನ ಗೊಂಡಿತು.
      ಸಾಧಕರಿಗೆ ಸನ್ಮಾನ, ಸಂಘಟಕ ಸಾಧಕರಿಗೆ ಗೌರವ , ಕನ್ನಡ ವಿಷಯದಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ೧೦೦ ಶೇಕಡಾ ಫಲಿತಾಂದ ಪಡೆದ ೨೩ ಮಕ್ಕಳಿಗೆ ನಗದು ಸಹಿತ ಗೌರವ ಸೇರಿದಂತೆ ಅನೇಕ ವಿಚಾರಗಳಿಂದ ಸಮಾರೋಪ ಸಭಾರಂಭ ಸಮಾಪನಗೊಂಡಿತು.
      ರಾಮದಾಸರು ಒಳ್ಲೇಯ ಕಾದಂಬರಿಕಾರಿ, ಚಿತ್ರ ಕಲಾವಿದರು, ವಿಮರ್ಶಕರು ಆಗಿರುವ ಪ್ರತಿಭಾನ್ವಿತರು, ಆದರೆ ಅವರು ಅವುಗಳಲ್ಲಿ ಸರಿಯಾಗಿ ತೊಡಗಿಕೊಂಡು ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಖ್ಯಾತ ಸಾಹಿತಿ ಡಾ.ನಾ.ಮೊಗಸಾಲೆ ಅವರು ಹೇಳಿದರು.
       ಅವರು ಸಮ್ಮೇಳನದ ಸಮಾರೋಪ ಭಾಷಣ ಮಾಡಿ ಸಾಹಿತಿಗಳು ರಾಜಕೀಯದವರನ್ನು ಪ್ರಶ್ನಿಸುವ ನೈತಿಕ ಹಕ್ಕನ್ನು ಎಷ್ಟರ ಮಟ್ಟಿಗೆ ಉಳಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.ಸಂಘಟನೆಯಲ್ಲಿ ಸೃಜನ ಶೀಲತೆ ಏನು ಎಂಬುದನ್ನು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಂದ್ರ ನೀಲಾವರ ಅಡಿಗರು ತೋರಿಸಿಕೊಟ್ಟಿದ್ದಾರೆ ಎಂದು ಅವರು ಕನ್ನಡದ ಅಕ್ಷರಗಳ ಸಂಖ್ಯೆ ಮತ್ತು ಅವುಗಳ ಬಳಸುವ ಕುರಿತು ಶಂಕರ ಭಟ್ಟ ಮತ್ತು ಪ್ರೊ. ರಾಮದಾಸ ಅವರು ಎತ್ತಿದ ಪ್ರಶ್ನೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಲುವು ಏನು ಎಂಬುದನ್ನು ಸ್ಪಷ್ಟ ಪಡಿಸ ಬೇಕಾದ ಅಗತ್ಯ ಇದೆ ಎಂದು ಅವರು ಆಗ್ರಹಿಸಿದರು. ಅಧ್ಯಕ್ಷರನ್ನು ಪುಸ್ತಕ ತುಲಾಭಾರ ಗೌರವಿಸಲಾಯಿತು.


ನಮ್ಮ ಜಿಲ್ಲೆಯಲ್ಲಿ ಅನೇಕ ಪ್ರತಿಭಾನ್ವಿತರು ಇದ್ದಾರೆ ನಿಜ, ಆದರೆ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಲ್ಲೆಯಲ್ಲಿ ಕನ್ನಡಾಭಿಮಾನದ ಕೊರತೆ ಎದ್ದು ಕಾಣುತ್ತದೆ ಎಂದು ಶಾಸಕ ಪ್ರಮೋದ್ ಮಧ್ವರಾಜ್ ಅಭಿಪ್ರಾಯ ಪಟ್ಟರು.

ನೂರರ ಸಂಭ್ರಮದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ವಂತ ಕಟ್ಟಡ ಹೊಂದುವಂತಾಗಲು ಸರ್ವರೀತಿಯ ಸಹಕಾರ ಮಾಡುವುದಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್‍ ಸೊರಕೆ ಭರವಸೆ ನೀಡಿದರು.

ಕನ್ನಡದ ಗಡಿಯನ್ನು ಮತ್ತು ಮಹತ್ವವನ್ನು ಜಾನಪದ ವಿಚಾರವನ್ನು ಸರಿಯಾದ ರೀತಿಯಲ್ಲಿ ಗ್ರಹಿಸುವ ಅಗತ್ಯ ಎಂದು ಸಾಧಕರನ್ನು ಗೌರವಿಸಿದ ಮುಂಬಯಿಯ ಉದ್ಯಮಿ ಬಾಬು ಶಿವ ಪೂಜಾರಿ ಅವರು ಅಭಿಇಪ್ರಾಯ ಒಟ್ಟರು.

ಸಾಧಕರನ್ನು ಅಂಬಲಪಾಡಿಯ ಡಾ,ನಿ.ಭೀ ಬಲ್ಲಾಳರು ಗೌರವಿಸಿದರು. ಕನ್ನಡ ವಿಷಯದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಉಡುಪಿ ನಗರ ಸಭೆಯ ಅಧ್ಯಕ್ಷ ಯುವರಾಜ್ ಅವರು ಶಾಲು, ಸ್ಮರಣಿಕೆ, ನಗದು, ಪ್ರಶಸ್ತಿ ಪತ್ರ ಸಹಿತ ಗೌರವಿಸಿದರು. 

ಸಮ್ಮೇಳನಾಧ್ಯಕ್ಷ ರಾಮದಾಸ ಅವರು ಮತನಾಡಿ ನನ್ನ ಬಗ್ಗೆ ಯಾರಾದರೂ ಹೊಗಳಿದರೆ ಅಥವಾ ತೆಗಳಿದರೆ ನಾನು ವಿಚಲಿತನಾಗುವ ಅಗತ್ಯವಿಲ್ಲ ಎಂದು ತಮ್ಮ ಭಾಷಣದಲ್ಲಿ ಹೇಳಿದೆಉ.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಂಘಟನೆಗೆ ಸಹಕರಿಸಿದವನ್ನು ಸ್ಮರಿಸಿಕೊಂಡರು.

ಕಾಪು ವಿದ್ಯಾ ನಿಕೇತನ ಸಂಸ್ಥೆಯ ಮೂಖ್ಯಸ್ಥ ಕೆ.ಪಿ ಆಚಾರ್ಯ, ಕಾಸರಗೋಡು ಜಿಲ್ಲಾ ಕಸಾಪ ಅದ್ಯಕ್ಷ ಸುಬ್ರಮಣ್ಯ ಭಟ್ . ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕನ್ನಡ ಮತ್ತು ಸಂಶ್ಕೃತಿ ಇಲಾಖೆಯ ನಿರ್ದೇಶಕ ಅಂಕುಶ್ ಮೊದಲಾದವರು ಉಪಸ್ಥೀತರಿದ್ದರು.

ತಿಮ್ಮಪ್ಪ ಶೆಟ್ಟಿ ಆರೂರು ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಮುರಳಿ ಕಡೆಕಾರ್‍ ಅವರು ವಂದಿಸಿದರು.


ಸಾಧಕರಿಗೆ ಸನ್ಮಾನ

ಕನ್ನಡ ನಾಡು ನೀಡಿಗೆ ಕೊಡುಗೆ ನೀಡಿದ ಡಾ.ಕೆ.ಪಿ.ರಾವ್ ( ಸಂಶೋಧನೆ), ಆರ್‍.ಎಲ್.ಡಯಾಸ್ ( ಸಮಾಜ ಸೇವೆ),ಪ್ರೊ.ಶ್ರೀಪತಿ ತಂತ್ರಿ ( ಸಾಹಿತ್ಯ), ಗುರುವ ನಲ್ಕೆ( ಜಾನಪದ),  ಪಿ.ಎಸ್ ಆಚಾರ್ಯ ( ಕಲಾವಿದ), ವಿದುಷಿ ಲಕ್ಷ್ಮಿ ಗುರುರಾಜ್ ( ಭರತ ನಾಟ್ಯ), ವೈಕುಂಠ ಹೆಬ್ಬಾರ್‍ ( ಣಾಟಕ), ವೆಲೇರಿಯನ್ ಸಲ್ದಾನಾ ( ಜ್ಯೋತಿಷ ಶಾಸ್ತ್ರ)  ಡಾ.ನಿ.ಬಿ ವಿಜಯ ಬಲ್ಲಾಳ್ ಅವರು ಸನ್ಮಾನಿಸಿದರು.


ಎಚ್.ವಿ ನರಸಿಂಹಮೂರ್ತಿ, ಬೈಕಾಡಿ ಶ್ರೀನಿವಾಸ ರಾವ್, ವಿ. ರಂಗಪ್ಪಯ್ಯ ಹೊಳ್ಳ, ಗಣೇಶ ಪ್ರಸನ್ನ ಮಯ್ಯ, ಸುಬ್ರಮಣ್ಯ ಬಾಸ್ರಿ ಕೆ.ಎಸ್ ,ಪದ್ಮನಾಭ ಭಟ್, ಪದ್ಮನಾಭ ಕೇಕುಣ್ಣಾಯ, ಭುವನ ಪ್ರಸಾದ ಹೆಗ್ಡೆ, ಪಿ.ವಾಸುದೇವ ರಾವ್, ಕೆ. ನಾಗೇಶ ಭಟ್ ಮೊದಲಾದವರು ಸಾಹಿತ್ಯ ಪರಿಷತ್ತಿನ ಗೌರವಾರ್ಪಣೆ ಸ್ವೀಕರಿಸಿದರು.

ವರದಿ: ಶೇಖರ ಅಜೆಕಾರು









































































ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com