ಇಂಜೀನಿಯರಿಂಗ್ ಓದುವ ಕನಸಿಗೆ ಬೇಕಿದೆ ಆರ್ಥಿಕ ಪೋಷಣೆ

ಕೋಟೇಶ್ವರ:  ಮನೆಯಲ್ಲಿ ಬಡತನವಿದ್ದರೇನು... ಈ ಹೆಣ್ಣುಮಗಳ ಓದಿಗೆ ಅದು ಈ ತನಕ ಅಡ್ಡಿಯಾಗಿಲ್ಲ. ಆದರೆ ಉನ್ನತ ಶಿಕ್ಷಣದ ಕನಸು ಕಾಣುತ್ತಿರುವ ಮಗಳಿಗೆ ಓದಿಸುವುದು ಮಾತ್ರ ಕುಟುಂಬಕ್ಕೆ ಕಷ್ಟವಾಗುತ್ತಿದೆ. ಇಲ್ಲಿನ ಕುಂಬ್ರಿಯ ಜಯಲಕ್ಷ್ಮಿ ಹಾಗೂ ಗೋಪಾಲ ಮೊಗವೀರ ದಂಪತಿಗಳ ಹಿರಿಯ ಮಗಳು ಸುಮಾ ಪಿಯುಸಿಯಲ್ಲಿ ಶೇ.83 ಅಂಕಗಳನ್ನು ಪಡೆದು ಉತ್ತೀರ್ಣಳಾಗಿ ಮುಂದೆ ಇಂಜಿನಿಯರಿಂಗ್‌ ಓದಬೇಕು ಎನ್ನುವ ಹಂಬಲವನ್ನಿಟ್ಟು ಅದಕ್ಕೆ ಪೂರ್ವಭಾವಿಯಾಗಿ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದಾಳೆ. ಸಿಇಟಿಯಲ್ಲಿ 28,000 ರ್ಯಾಂಕ್ ಪಡೆದು ಇಂಜೀನಿಯರಿಂಗ್ ಓದಲು ಅರ್ಹಳಾಗಿದ್ದರೂ, ಮಗಳ ಆಸೆಯಂತೆ ಆಕೆಗೆ  ಓದಿಸುವುದು  ಪೋಷಕರಿಗೆ ದೂರದ ಮಾತಾಗಿದೆ.
       ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಸುಮಾ ಎಸ್‌.ಎಸ್‌.ಎಲ್‌.ಸಿಯಲ್ಲಿ ಶೇ.86 ಅಂಕಗಳೊಂದಿಗೆ ಉತ್ತಿರ್ಣಳಾಗಿ, ಸೈಂಟ್‌ ಮೇರಿಸ್‌ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಪಡೆದು ಈಗ ಶೇ.83 ಅಂಕ ಗಳಿಸಿ ತೇರ್ಗಡೆಯಾಗಿದ್ದಾಳೆ.
    ಮೀನುಗಾರಿಕೆಯನ್ನೇ ಕಸುಬಾಗಿಸಿಕೊಂಡಿರುವ ಕೋಟೇಶ್ವರದ ಕುಂಬ್ರಿ ಗೋಪಾಲ ಮೊಗವೀರರ ಸಂಪಾದನೆ ಎರಡೊತ್ತಿನ ಉಟಕ್ಕೆ ಸಾಲುತ್ತಿದ್ದರೇ, ಮಡದಿ ಜಯಲಕ್ಷ್ಮಿ ಸಣ್ಣಪುಟ್ಟ ಕೂಲಿ ಮಾಡಿ ಕೊಂಡು ಕುಟುಂಬ ನಿರ್ವಹಣೆಗೆ ಸಹಕರಿಸುತ್ತಿದ್ದಾರೆ. ಬಡತನವಿದ್ದರೂ ತಮ್ಮ ಎರಡು ಹೆಣ್ಣು ಮಕ್ಕಳಿಗೆ ಈ ತನಕ ಉತ್ತಮ ಶಿಕ್ಷಣವನ್ನೇ ನೀಡುತ್ತಾ ಬಂದಿರುವ ಈ ದಂಪತಿಗಳ ಪುತ್ರಿ ಸುಮ ಈ ಬಾರಿ ಪಿಯುಸಿಯಲ್ಲಿ ಶೇ.83 ಅಂಕಗಳನ್ನು ಪಡೆದು ಸಿಇಟಿ ಬರೆದು ಮೊದಲ ಸುತ್ತಿನ ಕೌನ್ಸಿಲಿಂಗ್ ನಲ್ಲಿ ಕಾಲೇಜು ದಕ್ಕಿಸಿಕೊಂಡರೂ ಆರ್ಥಿಕ ಅಡಚಣೆಯಿಂದ ಎರಡನೇ ಸುತ್ತಿನಲ್ಲಿ ಬೇರೆ ಕಾಲೇಜನ್ನು ಹುಡುಕುತ್ತಿದ್ದಾರೆ. ಸರ್ಕಾರಿ ಕೋಟಾದಡಿಯಲ್ಲಿಯೇ ಕಾಲೇಜು ದೊರೆತರೂ ಕೂಡ ಇನ್ನುಳಿದ ಫೀಸು, ಉಟ, ವಸತಿ ಸೌಲಭ್ಯಗಳನ್ನು ಹೊಂದಿಸುವುದು ಈ ಕುಟುಂಬಕ್ಕೆ ಕಷ್ಟಸಾಧ್ಯವಾಗಿದೆ.
       ಬಡತನದ ನಡುವೆಯೂ ಮುಂದೆ ಇಂಜಿಯರ್‌ ಆಗಬೇಕು ಎನ್ನುವ ಕನಸನ್ನು ಹೊತ್ತಿರುವ ಈಕೆಯ ಸಹೃದಯಿಗಳ ಆರ್ಥಿಕ ಶಕ್ತಿಯ ಅಗತ್ಯವಿದೆ..
     
 ಸಾವಿರ ರೂಪಾಯಿಯನ್ನೇ ಭರಿಸುವುದು ಕಷ್ಟವಾಗಿರುವ ನಮಗೆ ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸುವುದು ಕಷ್ಟವಾಗಿದೆ  ಸಹೃದಯಿ ವಿದ್ಯಾಭಿಮಾನಿಗಳು ಆರ್ಥಿಕವಾಗಿ ಸಹಕಾರ ನೀಡಿದರೆ ಮಗಳ ಇಂಜಿನಿಯರಿಂಗ್‌ ಕನಸು ನನಸಾಗುತ್ತದೆ.
- ಜಯಲಕ್ಷ್ಮಿ, ಸುಮಾಳ ತಾಯಿ

   ಸಹಕರಿಸುವ ಇಚ್ಚೆ ಇರುವ ವಿದ್ಯಾಭಿಮಾನಿಗಳು 
ಸಿಂಡಿಕೇಟ್‌ ಬ್ಯಾಂಕ್‌ ಕೋಟೇಶ್ವರ ಶಾಖೆಯಲ್ಲಿನ ವಿದ್ಯಾರ್ಥಿನಿ ಸುಮ ಅವರ ಬ್ಯಾಂಕ್‌ ಖಾತೆ ಸಂಖ್ಯೆ 01492200075026 (IFSC code: SYNB0000149)ಕ್ಕೆ ಸಲ್ಲಿಸಬಹುದಾಗಿದೆ.

ವಿಳಾಸ: ಸುಮಾ d/o ಗೋಪಾಲ,
ಹೂವಿನಕೆರೆ,
ಕುಂಬ್ರಿ-ಕೋಟೇಶ್ವರ.

*ಹೆಚ್ಚಿನ ಮಾಹಿತಿಗೆ 9740904316 ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ನಿಮ್ಮ ಅಭಿಪ್ರಾಯ ಬರೆಯಿರಿ
ಕುಂದಾಪ್ರ ಡಾಟ್ ಕಾಂ- editor@kundapra.com