9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಉಡುಪಿ: ಭಾಷೆ ಸೇತುವೆ, ಸೇತುವೆ ಎಂದೂ ಏಕಮುಖವಾಗಲು ಸಾಧ್ಯವಿಲ್ಲ ಅದು ಸದಾ ದ್ವಿಮುಖವೇ ಆಗಿದೆ. ನಾವು ಬೆಳೆಯೋಣ, ಉಳಿದವರನ್ನೂ ಬೆಳೆಸೋಣ. ಸಾಹಿತ್ಯ ಸಮ್ಮೇಳನ ಈ ನಿಟ್ಟಿನಲ್ಲಿ ಯೋಚಿಸಲಿ ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮಿಜಿ ಅವರು ಹೇಳಿದರು.
     ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿಯ ಪೂರ್ಣಪ್ರಜ್ಞ ಸಭಾಗ್ರಹದಲ್ಲಿ ಶುಕ್ರವಾರದಿಂಧ ಆರಂಭವಾದ ಎರಡು ದಿನಗಳ ೯ ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಉದ್ಗಾಟಿಸಿ ಮಾತನಾಡುತ್ತಿದ್ದರು.
     ಪ್ರತಿಯೊಬ್ಬರು ಮತ್ತೊಂದು ಭಾಷೆಯನ್ನು ಗೌರವಿಸ ಬೇಕು.ಮತ್ತೊಬ್ಬರನ್ನು ಮೆಟ್ಟಿ ನಾವು ಬೆಳೆಯುವುದು ಬೇಡ. ಭಾಷೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು ಎಂದು ಅವರು ಅಭಿಪ್ರಾಯ ಪಟ್ಟರು.
      ಪುಸ್ತಕಗಳ ಪ್ರಕಟಣೆಗೆ ಹೆಚ್ಚು ಪ್ರಚಾರ ನೀಡಿ ಎಂದು ಪುಸ್ತಕಗಳನ್ನು ಬಿಡುಗಡೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು,
      ಕವಿಗಳ ಕೃತಿಗಳಿಂದ ಕನ್ನಡ ಕಾವ್ಯ ಪ್ರಪಂಚ ಮಾನವೀಯ ಮೌಲ್ಯಗಳ ಸಿಹಿನೀರಿನ ಸಾಗರವಾಗಿದೆ. ಸಾಗರದಲ್ಲಿ ಎಷ್ಟು ನೀರಿದ್ದರೇನು, ಅದನ್ನು ತುಂಬಿ ಕೊಳ್ಳುವ ಜನ ಎಲ್ಲಿದ್ದಾರೆ. ಕನ್ನಡ ಭಾಷೆ, ಬರಹ, ಕಾಗುಣಿತ, ಉಚ್ಚಾರಣೆಗಳನ್ನು ಕುರಿತು ನಿಜವಾದ ಕಳಕಳಿ ಇರುವವರು ಮಕ್ಕಳಿಗೆ ಏನನ್ನು ಕಲಿಸ ಬೇಕು ಎಂದು ವಿಚಾರ ಮಾಡುವಂತಾದರೆ ಸುಲಬೀಕರಣ ಚಿಂತೆ ಮಾಡದೆ ವಿದ್ಯಾರ್ಥಿಗಳಿಗೆ ಇತ್ಯಾತ್ಮಕವಾದ ಮೌಲ್ಯಗಳನ್ನು ಮನದಟ್ಟು ಮಾಡುವ ಪ್ರಯತ್ನ ಮಾಡಿದರೆ ಅದು ಕನ್ನಡದ ಭಾಗ್ಯದ ಬಾಗಿಲು ತೆರೆದಮತೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ರಾಮದಾಸ್ ಹೇಳಿದರು
      ಮಾಜಿ ಶಾಸಕ ಕೆ.ರಘುಪಪತಿ ಭಟ್, ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್‍ ಕಲ್ಕೂರ, ನಗರ ಸಭಾ ಸದಸ್ಯೆ ಗೀತೆ ಶೇಟ್, ಸದಸ್ಯ ಶ್ಯಾ ಪ್ರಸಾದ್ ಕುಡ್ವ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶೇಖರ್‍  ನಾಗೇಂದ್ರ ಮದ್ಯಸ್ಥ ಅತಿಥಿಗಳಾಗಿದ್ದರು.
      ಪುಸ್ತಕ ಮಳಿಗೆಯನ್ನು ಸುರೇಶ ಶೆಟ್ಟಿ ಮತ್ತು ಚಿತ್ರ ಕಲಾ ಪ್ರದರ್ಶನವನ್ನು ಗೋಪಾಲ ಸಿ ಬಂಗೇರ ಉದ್ಗಾಟಿಸಿದರು.
ಅರಿವಿನ ಆಳಕ್ಕೆ ಇಳಿದು ಮುತ್ತುಗಳನ್ನು ಹೆಕ್ಕಿ ತೆಗೆಯ ಬೇಕು. ನಾಲ್ಕು ಅಕ್ಷರ ಬರೆದ ಕೂಡಲೇ ಸಾಧನೆ ಎಂದು ತಿಳಿಯ ಬಾರದು.ಸಮ್ಮೇಳನಗಳ ಒಡೆದ ಹೃದಯಗಳನ್ನು ಒಂದು ಗೂಡಿಸಲು ಸಹಾಯವಾಗ ಬೇಕು ಎಂದು ೮ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಅಂಬಾತನಯ ಮುದ್ರಾಡಿ ಹೇಳಿದರು.ಸಾಹಿತ್ಯ ನಮ್ಮನ್ನು ಒಟ್ಟು ಗೂಡಿಸಲು ಶಕ್ತಿ ತುಂಬಲು ಸಹಾಯವಾಗಲಿ ಎಂದು ಹಾರೈಸಿದರು.
    ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅವರು ಆಶಯ ಮಾತುಗಳನ್ನಾಡಿದರು.
       ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ತಲ್ಲೂರು ಶೀವರಾಮ ಶೆಟ್ಟಿ ಅವರು ಸ್ವಾಗತಿಸಿದರು.
ವೇದಿಕೆಯಲ್ಲಿ ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಉಪೇಂದ್ರ ಸೋಮಯಾಜಿ , ಕಾರ್ಕಳ ಘಟಕದ ಅಧ್ಯಕ್ಷ ಬಿ.ಸಿ ರಾವ್ ಶಿವಪುರ, ಕುಂದಾಪುರ ಘಟಕದ ಅಧ್ಯಕ್ಷ ಕೆ.ನಾರಾಯಣ ಖಾರ್ವಿ, ಸಮಿತಿಯ ಸಂಚಾಲಕ ಮುರಳಿ ಕಡೆಕಾರ್‍, ಪ್ರಧಾನ ಕಾರ್ಯದರ್ಶಿ ವಿ.ರಂಗಪ್ಪಯ್ಯ ಹೊಳ್ಳ, ಕೋಶಾಧಿಕಾರಿ ಸುಬ್ರಮಣ್ಯ ಬಾಸ್ರಿ ಕೆ.ಎಸ್ ಮೊದಲಾದವರು ಉಪಸ್ಥಿರಿದ್ದರು.
ಸ್ವಾಗತ ಸಮತಿಯ ಸಂಚಾಲಕ  ಮುರಳಿ ಕಡೆಕಾರ್‍ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ವಿ.ರಂಗಪ್ಪಯ್ಯ ಹೊಳ್ಳ ವಂದಿಸಿದರು.

ಸಮ್ಮೇಳನ ವಿಷೇಶಗಳು
# ಮಳೆಗಾಲದ ಸಮ್ಮೇಳನವಾದರೂ ಪುಸ್ತಕದಂಗಡಿಗಳ ಜನರ ಉತ್ಸಾಹ ಕಡಿಮೆ ಆಗಿರಲಿಲ್ಲ.
# ಉದ್ಗಾಟನೆಯ ಹೊತ್ತಿಗೆ ಚಂದ್ರಶೇಖರ ಕೆದ್ಲಾಯ ಅವರು ಹಚ್ಚೇವು ಕನ್ನಡದ ದೀಪ ಹಾಡಿದರು
# ಸಮ್ಮೇಳನ ಮೆರವಣಿಗೆ ಪಿಪಿಸಿ ಕಾಲೇಜಿನಿಂದ ಆರಂಭವಾಗುವಾಗ ಅಲ್ಲಿ ಸಾಹಿತಿ ಮುರಳಿಧರ ಉಪಾಧ್ಯ ಪಾಠ ಮಾಡುತ್ತಿದ್ದರು.
# ನೂರು ವರ್ಷದ ಕನ್ನಡ ಸಾಹಿತ್ಯ ಪರಿಷತ್‌ನ ಸಂಭ್ರಮದ ಮೊದಲ ಜಿಲ್ಲಾ ಸಾಹಿತ್ಯ ಸಮ್ಮೇಳನ ಉಡುಪಿಯಲ್ಲಿ ನಡೆಯಿತು.
# "ಆತ್ಮದ ಆಹುತಿ" ಅಲ್ತಾರು ರಾಮ ಮೊಗೇರರ ಕಾದಂಬರಿ, ಬ್ರಹ್ನಾನಾದ ಸ್ಪಂದನ  ವಿಠಲ ಪೂಜಾರಿ ಅವರ ಕೃತಿ ಮತ್ತು ವಾರವಾರ ಸೋಮನವಾರ ಮಕ್ಕಳ ಕೃತಿ ಸಾವಿತ್ರಿ ಮನೋಹರ್‍  ಕೃತಿ ಬಿಡುಗಡೆಗೊಂಡಿತು.
 # ೨೦ ಕಿರು ಕೃತಿಗಳು, ಅಧ್ಯಕ್ಷರ ನಾಟಕ ಕೃತಿಗಳನ್ನು ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು.

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com