ಸಾಮಾಜಿಕ ತಾಣಿಗರಿಂದ ಕಳೆಗಟ್ಟುವ ಸಮಾಜ ಸೇವೆ

ಕುಂದಾಪುರ: ಫೆಸ್ಬುಕ್, ವಾಟ್ಸಆ್ಯಫ್ ಇವುಗಳ ನಡುವೆಯೇ ಭ್ರಮಾ ಲೋಕದಲ್ಲಿ ಕಳೆದು ಹೋಗುವ ಜನರ ನಡುವೆ ಎಲ್ಲೊ ಒಂದಿಷ್ಟು ಮಂದಿ ಜನಪರವಾದ ಕಾರ್ಯಗಳನ್ನು ಮಾಡುತ್ತಾ ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.
  ಮೊಬೈಲ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಆ್ಯಫ್ ನಲ್ಲಿ ನಮ್ಮ ಕುಂದಾಪುರ ಎಂಬ ಗ್ರೂಫ್ ರಚಿಸಿಕೊಂಡಿರುವ ಕೆಲವು ಕುಂದಾಪುರಿಗರು ಬರೀ ಮೇಸೆಜ್ ವಿನಿಮಯ ಮಾಡಿಕೊಳ್ಳುವುದಕ್ಕೆ ಸೀಮಿತವಾಗಿರದೇ ಅದರಿಂದಾಚೆಗೂ ಒಂದಿಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲು ಹೊರಟು ಮಾದರಿಯಾಗಿದ್ದಾರೆ.
   ಯಾವುದೇ ಪ್ರಚಾರವಿಲ್ಲದೇ ನಮ್ಮ ಕುಂದಾಪುರ ವಾಟ್ಸಆ್ಯಫ್ ಗ್ರೂಫ್ ನ ಮೂಖಾಂತರ ಒಂದಿಷ್ಟು ಹಣ ಸಂಗ್ರಹಿಸಿದ ಗ್ರೂಫ್ ಅಡ್ಮಿನ್ ಕುಂದಾಪುರ ದೃಷ್ಟಿ ಬ್ಯಾನರ್ಸ್ ನ ಸಂತೋಷ್ ಖಾರ್ವಿ, ಗ್ರೂಫ್ ನ ಕೆಲವು ಸದಸ್ಯರಾದ ಶ್ರೀಕಾಂತ್ ಕಾಮತ್, ಪ್ರಸನ್ನ ಶೇಟ್, ಉದಯ ಶೆಟ್ಟಿ ಅವರೊಂದಿಗೆ ಸೇರಿ ಇತ್ತಿಚಿಗೆ ಮರಣ ಹೊಂದಿದ ವಿದ್ಯಾರ್ಥಿನಿ ರತ್ನಾ ಕೊಠಾರಿಯವರ ಕುಟುಂಬ ಹಾಗೂ ಎರಡು ಬಡ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಬಸ್ಸಿನ ವೆಚ್ಚ ಭರಿಸುವುದಕ್ಕಾಗಿ ಧನ ಸಹಾಯ ಮಾಡಿ ಔದಾರ್ಯ ಮೆರೆದಿದ್ದಾರೆ.

  ಕೇವಲ ಗ್ರೂಫ್ ಮಾಡಿಕೊಂಡು ಸಮಯ ಹರಣ ಮಾಡದೇ ಒಂದಿಷ್ಟು ಜನಪರ ಕೆಲಸ ಮಾಡುವುದರಲ್ಲಿಯೇ ನಿಜವಾದ ಖುಷಿ ಅಡಗಿದೆ. ತೋರಿಕೆಗಾಗಿ ಈ ಕೆಲಸ ಮಾಡದೇ ನಿಜವಾದ ಕಾಳಜಿಯಿಂದ ಮಾಡಿದ್ದೇವೆ. ಸಹಕರಿಸಿದ ಗ್ರೂಫ್ ನ ಎಲ್ಲಾ ಸದಸ್ಯರಿಗೂ ಅಭಾರಿಯಾಗಿದ್ದೇನೆ. - ಸಂತೋಷ್ ಖಾರ್ವಿ, ನಮ್ಮ ಕುಂದಾಪುರ ವಾಟ್ಸಆ್ಯಫ್ ಗ್ರೂಫ್ ಅಡ್ಮಿನ್




ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com
Namma Kundapura WhatsApp group friends combinedly donated some amount to Late. Ratna Kotari's family and other 2 poor students