ಮೂರ್ತಿ ರಚನೆಯಲ್ಲಿ ಆರು ದಶಕ ಕಳೆದ ಕಲಾವಿದ

ತರತರಹದ ಗಣೇಶನ ವಿಗ್ರಹಗಳನ್ನು ರಚಿಸಿ ಕಲ್ಪನೆಯಲ್ಲಿರುವ ದೇವರಿಗೆ ಮೂರ್ತರೂಪ ಕೊಡುವ ಈ ಅಪರೂಪದ ಕಲಾವಿದನ ಬದುಕಿನ ಸುತ್ತ ಈ ವಿಶೇಷ ಲೇಖನ.

   ಬೈಂದೂರಿನ ಬಂಕೇಶ್ವರದಲ್ಲಿರುವ ಶಿಲ್ಪಿ ವೆಂಕಟರಮಣ ಆಚಾರ್, ಮೂರ್ತಿ ರಚನೆಯಲ್ಲಿ ಆರು ದಶಕಗಳಿಂದ ತೊಡಗಿಸಿಕೊಂಡು ತಮ್ಮ ಕೈಚಳಕ ತೋರುತ್ತಿದ್ದಾರೆ. ಕುಟುಂಬದ ಹಿರಿಯರಿಂದ ಬಂದ ಕಲೆಯನ್ನು ಮುಂದುವರಿಸಿ ಇಂದಿನ ಯುವಕರಿಗೆ ಮಾರ್ಗದರ್ಶಕರಾಗಿ ನಿಂತಿದ್ದಾರೆ. 
   ಬಂಕೇಶ್ವರದ ನಾಗಪ್ಪ ಆಚಾರ್ಯ ಹಾಗೂ ಸೀತಮ್ಮ ದಂಪತಿಗಳ ಪುತ್ರರಾದ ವೆಂಕಟರಮಣ ಆಚಾರ್ಯ ತಂದೆಯಿಂದ ಶಿಲ್ಪಕಲೆಯ ದೀಕ್ಷೆ ಪಡೆದು ತನ್ನ ೧೬ನೇ ವಯಸ್ಸಿನಲ್ಲಿ ಮಣ್ಣು ಮತ್ತು ಕೃಷ್ಣ ಶಿಲ್ಪದಿಂದ ಮೂರ್ತಿ ರಚನೆಯಲ್ಲಿ ತೊಡಗಿಕೊಂಡರು. ಪ್ರತಿವರ್ಷ ಗಣೇಶೋತ್ಸವಕ್ಕೆ ಗಣೇಶ ವಿಗ್ರಹ, ಶಾರದೋತ್ಸಕ್ಕೆ ಶಾರದಾ ವಿಗ್ರಹ ಹಾಗೂ ದೇವಾಲಗಳಿಗೆ ಮೂರ್ತಿಯನ್ನು ಕಶ್ಯಪ ಶಿಲ್ಪಶಾಸ್ತ್ರ ಪ್ರಕಾರದಲ್ಲಿ ರಚಿಸಿ ಪರಂಪರಾಗತವಾಗಿ ಬಂದಿರುವ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ.
ವೆಂಕಟರಮಣ ಆಚಾರ್ಯ
    ಆರಂಭದ ದಿನಗಳಲ್ಲಿ ಹತ್ತು ಗಣೇಶನ ವಿಗ್ರಹಗಳಿಗಷ್ಟೇ ಬೇಡಿಕೆ ಇದ್ದರೇ, ಈಗ ೭೦ ರಿಂದ ೭೫ ಮೂರ್ತಿಗಳಿಗೆ ಬೇಡಿಕೆ ಇದೆ. ಬೈಂದೂರಿನಲ್ಲಿ ಸಾಂಪ್ರದಾಯಿಕವಾಗಿ ಗಣಪತಿ ಮತ್ತು ಶಾರದೆಯ ವಿಗ್ರಹಗಳನ್ನು ರಚಿಸುವವರು ಇವರು ಮಾತ್ರವೇ ಇದ್ದು ಮೊದಲು ಕೊಲ್ಲೂರು ನಿಟ್ಟೂರಿನ ತನಕ ಈ ವಿಗ್ರಗಳಿಗೆ ಬೇಡಿಕೆ ಇತ್ತು. ಸದ್ಯ ಬೈಂದೂರು ಆಸುಪಾಸಿನ ಪರಿಸರದಲ್ಲಿ ಬೇಡಿಕೆ ಇದೆ.
     ಲಕ್ಷಾಂತರ ರೂಪಾಯಿ ಖರ್ಚುಮಾಡಿ ಉತ್ಸವ ನಡೆಸುವವರು ಮೂರ್ತಿ ರಚಿಸಿದವರಿಗೆ ಕಿಂಚಿತ್ತು ಸಂಭಾವನೆ ಕೊಡಲು  ಹಿಂದುಮುಂದು ನೋಡುವವರ ನಡುವೆ ಇವರ ಕುಟುಂಬ ನೂರು ವರ್ಷಕ್ಕೂ ಹೆಚ್ಚುಕಾಲ ಮೂರ್ತಿ ರಚನೆಂiiಲ್ಲಿ ತೊಡಗಿಸಿಕೊಂಡದ್ದರೇ, ವೆಂಕಟರಮಣ ಆಚಾರ್ಯರು ೬೩ ವರ್ಷಗಳಿಂದ ಮೂರ್ತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ವಯಸ್ಸಾಗಿರುವುದರಿಂದ ಇವರ ಮಕ್ಕಳಾದ ನಾಗರಾಜ, ಗಂಗಾಧರ ಮತ್ತು ಗಣೇಶ ಮೂರ್ತಿ ರಚನೆಯಲ್ಲಿ ಸಹಕರಿಸುತ್ತಾರೆ. ಮೂರ್ತಿಯನ್ನು ಪರಿಪೂರ್ಣಗೊಳಿಸಿಸುವುದರಿಂದಲೇ ಆತ್ಮತೃಷ್ತಿ ಹೊಂದುವ ಇವರಿಗೇ ಈ ಪೌವೃತ್ತಿ ಬದುಕನ್ನು ನೀಡಿಲ್ಲ ಎಂಬದೂ ಕೂಡ ಸತ್ಯ. 
    ಉತ್ತಮ ಯಕ್ಷಗಾನ ಕಲಾವಿದರೂ ಆಗಿರುವ ಆಚಾರ್ಯರು ಕಳವಾಡಿ ಹವ್ಯಾಸಿ ಯಕ್ಷಗಾನ ಮೇಳದಲ್ಲಿ ಕಲಾವಿದರಾಗಿದ್ದರು. ವೆಂಕಟರಮಣ ಆಚಾರ್ಯರ ಸಾಧನೆಯನ್ನು ಗಮನಿಸಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ. ಆದರೆ ಈ ಅಪ್ರತಿಮ ಕಲಾವಿದನಿಗೆ ಈತನಕ ಸರಕಾರದಿಂದ ಯಾವುದೇ ಗೌರವ ದೊರೆಯದಿರುವುದು ವಿಷಾದದ ಸಂಗತಿ.


ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com