ಕೊಳವೆ ಬಾವಿ ದುರಂತ ತಡೆಗೆ ಮುಂದಾಗೋಣ


ತೆರೆದ ಕೊಳವೆ ಬಾವಿಯೊಳಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿರುವವರ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಪ್ರಜ್ಞಾವಂತ ನಾಗರಿಕರು ಎಚ್ಚೆತ್ತುಕೊಳ್ಳಬೇಕಿದೆ. ಸರಕಾರದ ವರದಿಯಂತೆ ರಾಜ್ಯದಲ್ಲಿ ಸುಮಾರು 3400 ನಿರುಪಯಕ್ತ ಕೊಳವೆ ಬಾಯಿಗಳಿದ್ದು ಇವುಗಳಲ್ಲಿ ಹೆಚ್ಚಿನ ಕೊಳವೆ ಬಾವಿಗಳನ್ನು ಮುಚ್ಚದೇ ಬಿಡಲಾಗಿದೆ. ಅಪಾಯಕರ ರೀತಿಯಲ್ಲಿಯಲ್ಲಿರುವ ಈ ಕೊಳವೆ ಬಾವಿಗಳಲ್ಲಿ ಮೃತ್ಯು ಕೂಪಗಳಾಗಿ ಪರಿಣಮಿಸಿವೆ. ಕರ್ನಾಟಕದಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ 2 ಪ್ರಕರಣಗಳು ನಡೆದಿದೆ.
 ಸರಕಾರವನ್ನು ದೂಷಿಸುತ್ತಾ ಕೂರುವ ಬದಲು ಈ ಕೊಳವೆ ಬಾವಿ ದುರಂತಗಳನ್ನು ತಪ್ಪಿಸಲು ಸರಕಾರ ಮತ್ತು ಆಡಳಿತ ಯಂತ್ರದೊಂದಿಗೆ ನಾವೆಲ್ಲರೂ ಕೈಜೋಡಿಸುವ ತುರ್ತು ಇದೀಗ ಒದಗಿ ಬಂದಿದೆ. ನಮ್ಮ ಸುತ್ತಮುತ್ತಲಿನ ಪರಿಸದಲ್ಲಿ ಅಪಾಯಕಾರಿ ಕೊಳವೆ ಬಾವಿಗಳು ಕಂಡುಬಂದಲ್ಲಿ ಈ ಸುಲಭ ವಿಧಾನವನ್ನು ಅನುಸರಿಸಿ ಆಗಬಹುದಾದ ದುರಂತವನ್ನು ತಪ್ಪಿಸಬಹುದಾಗಿದೆ.

ಸಂಘಸಂಸ್ಥೆಗಳು, ಸಮಾಜಸೇವಾ ಸಂಘಟನೆಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡು ಒಂದಷ್ಟು ಜೀವಗಳನ್ನು ಉಳಿಸಬಹುದಾಗಿದೆ.

ನಿರುಪಯುಕ್ತ ಕೊಳವೆ ಬಾವಿಗಳನ್ನು ಮಚ್ಚುವ ಸರಳ ವಿಧಾನ


1. ತೆರೆದ  ಕೊಳವೆ ಬಾವಿಯು ಸುತ್ತ 3 ಅಡಿ ಅಗಲ 3 ಅಡಿ ಆಳದವರೆಗೆ ಮಣ್ಣನ್ನು ಅಗೆಯಿರಿ.
2. ತೆರೆದ ಕೊಳವೆ ಬಾವಿಯನ್ನು ಮುಚ್ಚುವಂತೆ ಅಗಲದ ಚಪ್ಪಡಿಕಲ್ಲು ಅಥವಾ ಕಾಂಕ್ರೀಟಿನ ಸ್ಲ್ಯಾಬ್‌ ಅನ್ನು ಮಣ್ಣು ತೆರೆದ ಹೊಂಡದ ಒಳಗಿಡಿ
3. ನಂತರ ಮುಚ್ಚಿದ ಕಲ್ಲು ಅಥವಾ ಸ್ಲ್ಯಾಬ್‌ ಮೇಲೆ ಸಮತಟ್ಟಿನವರೆಗೆ ಮಣ್ಣು ಮುಚ್ಚಿಬಿಡಿ.

 ಉಪಯುಕ್ತ ಮಾಹಿತಿ 
ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com
How to stop the Borewell fall. Here is the solution. Anybody can follow this simple method