ಪತ್ರಕರ್ತರ ಹೊಸ ಸ್ವರೂಪಕ್ಕೆ ಕಾರ್ಯಕ್ರಮ ಪ್ರೇರಣೆಯಾಗಲಿ: ಸಚಿವ ಸೊರಕೆ

ಉಡುಪಿ:   ಮಾಧ್ಯಮ ಲೋಕಕ್ಕೆ ವಿದ್ಯುತ್ ಸಂಚಾರವನ್ನು ತರುವ ಕಾರ್ಯಕ್ರಮ ಇದಾಗಬೇಕು. ಪತ್ರಕರ್ತ ಮಿತ್ರರ ಆಲೋಚನೆಗಳಿಗೆ ಹೊಸ ಸ್ಥೈರ್ಯವನ್ನು ಪಡೆಯುಲು ಈ ಕಾರ್ಯಕ್ರಮ ಪ್ರೇರಣೆಯಾಗಲಿ ಎಂದು ಮಾನ್ಯ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
     ಅವರು  ಕರ್ನಾಟಕ ಮಾಧ್ಯಮ ಅಕಾಡೆಮಿ, ಉಡುಪಿ ಜಿಲ್ಲಾ ವಾರ್ತಾ ಇಲಾಖೆ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಿದ 'ಆಧುನಿಕ ಮಾಧ್ಯಮ ಇಂದಿನ ನೋಟ ಹಾಗೂ ಮುಂದಿನ ಸವಾಲು' ವಿಚಾರ ಸಂಕಿರಣ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
   ಮಾಧ್ಯಮ ಅಕಾಡೆಮಿಯ ಸದಸ್ಯೆ ಯು. ಬಿ. ರಾಜಲಕ್ಷ್ಮೀಯವರು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು
     ಡಾ. ಸಂಧ್ಯಾ ಪೈ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಇಂದಿನ ಪತ್ರಿಕೋದ್ಯಮ ಹೊಸ ಸವಾಲುಗಳೊಂದಿಗೆ ನಾಳೆಗೆ ಸಿದ್ಧವಾಗಬೇಕಿದೆ ಎಂದರು.
       ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಜಿಲ್ಲೆಗಳಿಗೆ  ಈ ರೀತಿಯ ಕಾರ್ಯಕ್ರಮಗಳು ರಾಜ್ಯ ಮಟ್ಟದಿಂದ ಬರುತ್ತಿರುವುದು ವೃತ್ತಿ ಕುಶಲತೆಯ ಅಭಿವೃದ್ಧಿಯ ದೃಷ್ಠಿಯಿಂದ ಮಹತ್ವ ಪಡೆದಿದೆ ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ. ಎ. ಪೊನ್ನಪ್ಪ, ಕಾರ್ಯದರ್ಶಿ ಎಸ್. ಶಂಕರಪ್ಪ, ಜಿಲ್ಲಾ ವಾರ್ತಾಧಿಕಾರಿ ಕೆ. ರೋಹಿಣಿ ಉಪಸ್ಥಿತರಿದ್ದರು.
    ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ್ ಸುವರ್ಣ ಸ್ವಾಗತಿಸಿ, ಕಾರ್ಯದರ್ಶಿ ಗಣೇಶ ಪ್ರಸಾದ್ ಪಾಂಡೇಲು ವಂದಿಸಿದರು. ಟಿವಿ ಪತ್ರಕರ್ತ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಪೋಟೋಗಳು:
* ಶೇಖರ ಅಜೆಕಾರು, ಹಿರಿಯ ಪತ್ರಕರ್ತರು


ನಿಮ್ಮ ಅಭಿಪ್ರಾಯ ಬರೆಯಿರಿ
ಕುಂದಾಪ್ರ ಡಾಟ್ ಕಾಂ- editor@kundapra.com