ಬೈಂದೂರು: ಕುಂದಾಪ್ರ ಡಾಟ್ ಕಾಂ ಅರ್ಪಿಸುವ ‘ಬೈಂದೂರು ಡೈರೆಕ್ಟರಿ’ ಪುಸ್ತಕ ಬಿಡುಗಡೆ ಸಮಾರಂಭವು ಸೆ.21 ರ ಭಾನುವಾರ ಸಂಜೆ 6 ಗಂಟೆಗೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ.
ತನ್ನದೇ ಆದ ವಿಶೇಷತೆಗಳಿಂದ ತುಂಬಿರುವ ಬೈಂದೂರನ್ನು ಮರು ವ್ಯಾಖ್ಯಾನಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆದಿರುವ, ಬೈಂದೂರಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪ್ರಕಟಿಸಲಾಗಿರುವ ‘ಬೈಂದೂರು ಡೈರೆಕ್ಟರಿ’ಯನ್ನು ನಾಡಿನ ಪ್ರಸಿದ್ಧ ಸಾಹಿತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವಾಧ್ಯಕ್ಷ ನಾ. ಡಿಸೋಜ ಬಿಡುಗಡೆಗೊಳಿಸಲಿದ್ದಾರೆ.
ಹಿರಿಯ ಸಾಹಿತಿ ಚಂದ್ರಶೇಖರ ಹೊಳ್ಳ ಉಪ್ಪುಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ರೋಟರಿ ಶತಾಬ್ಧಿ ಗವರ್ನರ್, ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಆಶಯ ಭಾಷಣ ಮಾಡಲಿದ್ದಾರೆ. ಪತ್ರಕರ್ತರ ವೇದಿಕೆ (ರಿ.) ಬೆಂಗಳೂರು ಇದರ ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು, ಯುಸ್ಕೋರ್ಡ್ ಟ್ರಸ್ಷ್ (ರಿ.) ಬೈಂದೂರಿನ ನಾಗರಾಜ ಪಿ. ಯಡ್ತರೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ಬಳಿಕ ಆಕಾಶವಾಣಿ ಕಲಾವಿದ ಚಂದ್ರ ಕೆ. ಹೆಮ್ಮಾಡಿ ಮತ್ತು ಬಳಗದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಜರುಗಲಿರುವುದು.
ನಿಮ್ಮ ಅಭಿಪ್ರಾಯ ಬರೆಯಿರಿ
ಕುಂದಾಪ್ರ ಡಾಟ್ ಕಾಂ- editor@kundapra.com