ಶ್ರೀ ರಾಮನ ತಂದೆ ದಶರಥ ಮಹಾರಾಜನು ತನ್ನ ಮೂರನೇ ಹೆಂಡತಿ ಕೈಕೇಯಿಗೆ ಏನು ಬೇಕಾದರೂ ಕೇಳಿಕೋ ಎಂದು ವರ ನೀಡಿರುತ್ತಾನೆ. ಈ ವರದ ಫಲವಾಗಿ ಕೈಕೇಯಿಯು ರಾಮನು ಹದಿನಾಲ್ಕು ವರ್ಷ ಕಾಡಿಗೆ ಹೋಗಬೇಕು ಮತ್ತು ತನ್ನ ಮಗ ಭರತನು ರಾಜನಾಗಬೇಕು ಎಂದು ಕೇಳೀಕೊಳ್ಳುತ್ತಾಳೆ.
ಶ್ರೀರಾಮನು ತನ್ನ ತಂದೆಯ ಮಾತನ್ನು ಉಳಿಸಬೇಕೆಂದು ಹದಿನಾಲ್ಕು ವರ್ಷ ಕಾಡಿಗೆ ಹೋಗುತ್ತಾನೆ. ರಾಮನು ವನವಾಸದಲ್ಲಿದ್ದಾಗ ರಾಮನ ತಮ್ಮ ಭರತನು ತನ್ನ ಅಣ್ಣನ ಪ್ರತಿನಿಧಿಯಂತೆ ರಾಜ್ಯವನ್ನು ಆಳುತ್ತಿರುತ್ತಾನೆ. ಹದಿನಾಲ್ಕು ವರ್ಷ ವನವಾಸ ಮುಗಿಸಿ ರಾಮನು ಅಯೋಧ್ಯೆಗೆ ಬರುತ್ತಾನೆ. ರಾಮನು ಕಾಡಿನಲ್ಲಿದ್ದಾಗ ರಾಜ್ಯದವರೆಲ್ಲರೂ ರಾಮನ ನೆನಪಿನಲ್ಲಿ ದುಃಖಿಸುತ್ತಿರುತ್ತಾರೆ. ರಾಮನಿಲ್ಲದೆ ಜನರಲ್ಲಿ ಉತ್ಸಾಹ, ಆನಂದವೇ ಇರಲಿಲ್ಲ. ರಾಮನು ರಾಕ್ಷಸ ರಾವಣನನ್ನು ವಧಿಸಿ ಅಯೋಧ್ಯೆಗೆ ಹಿಂತುರಿಗಿದ ದಿನ ಎಲ್ಲಾ ಜನರು ಆನಂದದಿಂದ ಮೈಮರೆತರು. ಜನರು ತಮ್ಮ ಮನೆಗಳನ್ನು ಸಡಗರದಿಂದ ಹೂಮಾಲೆ, ತಳಿರು ತೋರಣಗಳಿಂದ ಅಲಂಕರಿಸಿದರು. ಜನರೆಲ್ಲರೂ ಆನಂದದಲ್ಲಿ ಮನೆಯ ಒಳಗೆ ಹೊರಗೆ ದೀಪಗಳನ್ನು ಇಟ್ಟು ರಾಮನನ್ನು ಸ್ವಾಗತಿಸಿದರು. ಈ ದಿನವನ್ನೇ ದೀಪಾವಳಿ ಎಂದು ಬಾರತದೆಲ್ಲೆಡೆ ಆಚರಿಸುತ್ತಾರೆ.
ಮತ್ತೊಂದು ಪುರಾಣಗಳ ರೀತ್ಯ ನರಕಾಸುರನೆಂಬ ರಕ್ಕಸನು ಲೋಕಕಂಟಕನಾದಾಗ, ಭೂಮಾತೆ ಕೃಷ್ಣನನ್ನು ಪ್ರಾರ್ಥಿಸಿ ನರಕಾಸುರನ ಸಂಹಾರಕ್ಕೆ ಕಾರಣಳಾಗುತ್ತಾಳೆ. ಕೃಷ್ಣ ಕೂಡ ನರಕಾಸುರನ ಸಂಹಾರಕ್ಕೆ ಮುನ್ನ ಅಶ್ವೀಜ ಕೃಷ್ಣ ಚತುರ್ದಶಿಯ ದಿನ ತೈಲಾಭ್ಯಂಜನ ಮಾಡಿ, ನರಕಾಸುರನ ವಧಿಸಿ, ಆ ರಕ್ಕಸ ಬಂಧಿಸಿಟ್ಟಿದ್ದ ೧೬ ಸಾವಿರ ಕನ್ಯೆಯರನ್ನು ಬಿಡುಗಡೆಗೊಳಿಸುತ್ತಾನೆ. ಆ ನೆನಪಿಗಾಗಿ ದೀಪಾವಳಿಯ ಆಚರಿಸಲಾಗುತ್ತದೆ.
ದೀಪಾವಳಿ ಅರ್ಥ
ದೀಪಾವಳಿ ಎನ್ನುವ ಶಬ್ದವು ದೀಪ ಮತ್ತು ಆವಳಿ ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ) ಈ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿ ಯನ್ನು ದೀಪಾವಳಿಯಲ್ಲಿ ಸೇರಿಸದೇ ಉಳಿದ ೩ ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆಯು ದೀಪಾವಳಿಯ ಸಮಯದಲ್ಲಿಯೇ ಬರುತ್ತದೆ. ಆದುದರಿಂದ ಇದನ್ನು ದೀಪಾವಳಿಯೆಂದೇ ಪರಿಗಣಿಸಲಾಗುತ್ತದೆ.
ಭಗವಾನ ಶ್ರೀಕೃಷ್ಣನು ಅಸುರಿವೃತ್ತಿಯ ನರಕಾಸುರನನ್ನು ವಧಿಸಿ ಜನರನ್ನು ಭೋಗವಾದ, ಲೋಭ, ಅನಾಚಾರ ಹಾಗೂ ದುಷ್ಟ ಪ್ರವೃತ್ತಿಯಿಂದ ಮುಕ್ತಗೊಳಿಸಿ ದನು ಮತ್ತು ಪ್ರಭು ವಿಚಾರ (ದೈವೀ ವಿಚಾರ)ವನ್ನು ನೀಡಿ ಸುಖವನ್ನು ನೀಡಿ ದನು. ಇದುವೇ ದೀಪಾವಳಿ.
ಗೋಪೂಜೆ
ಭಾರತೀಯ ಸಂಸ್ಕೃತಿಯಲ್ಲಿ ಆಕಳಿಗೆ ತುಂಬಾ ಮಹತ್ವವಿದೆ. ಅವಳನ್ನು ಮಾತೆಯೆಂದು ಸಹ ಸಂಬೋಧಿಸಲಾಗುತ್ತದೆ. ಅವಳು ಸಾತ್ತ್ವಿಕಳಾಗಿರುವುದರಿಂದ ಅವಳ ಪೂಜೆಯನ್ನು ಮಾಡಿ ಎಲ್ಲರೂ ಅವಳ ಸಾತ್ತ್ವಿಕ ಗುಣಗಳನ್ನು ಸ್ವೀಕರಿಸುವುದಿ ರುತ್ತದೆ. ತನ್ನ ಸಹವಾಸದಿಂದ ಇತರರನ್ನು ಪಾವನಗೊಳಿಸುವ, ತನ್ನ ಹಾಲಿನಿಂದ ಸಮಾಜವನ್ನು ಬಲಿಷ್ಠಗೊಳಿಸುವ, ಕೃಷಿಗಾಗಿ ತನ್ನ ಸೆಗಣಿಯಿಂದ ಗೊಬ್ಬರವನ್ನು ನೀಡುವ, ಕೃಷಿಗೆ ಉಪಯುಕ್ತವಾದ ಎತ್ತುಗಳಿಗೆ ಜನ್ಮ ನೀಡುವ, ಶ್ರೀಕೃಷ್ಣನಿಗೆ ಪ್ರಿಯವಾಗಿರುವ ಹಾಗೂ ಎಲ್ಲ ದೇವತೆಗಳು ತನ್ನಲ್ಲಿ ವಾಸಿಸುವಂತಹ ಯೋಗ್ಯತೆ ಯಿರುವ ಗೋಮಾತೆಯನ್ನು ಈ ದಿನದಂದು ಪೂಜೆ ಮಾಡಬೇಕು. ಎಲ್ಲಿ ಗೋಮಾತೆಯ ಸಂರಕ್ಷಣೆ ಮತ್ತು ಸಂವ ರ್ಧನೆಯಾಗುತ್ತದೆಯೋ ಹಾಗೂ ಪೂಜ್ಯಭಾವದಿಂದ ಅವಳನ್ನು ಪೂಜಿಸಲಾ ಗುತ್ತದೆಯೋ, ಅಲ್ಲಿನ ವ್ಯಕ್ತಿಗಳು, ಆ ಸಮಾಜ ಮತ್ತು ಆ ರಾಷ್ಟ್ರದ ಸಮೃದ್ಧಿಯು ನಿಶ್ಚಿತವಾಗಿ ಆಗುತ್ತದೆ.
ಧನತ್ರಯೋದಶಿಯಂದು ಬಂಗಾರ ಖರೀದಿ
ಧನತ್ರಯೋದಶಿಯಂದು ಹೊಸ ಬಂಗಾರವನ್ನು ಖರೀದಿ ಮಾಡುವುದರಿಂದ ಮನೆಯಲ್ಲಿ ವರ್ಷವಿಡೀ ಧನಲಕ್ಷ್ಮೀಯು ವಾಸಿಸುತ್ತಾಳೆ ಎಂಬ ನಂಬಿಕೆ ಇದೆ. ಲಕ್ಷ್ಮೀ ಪೂಜೆಯ ಸಮಯದಲ್ಲಿ ನಮಗೆ ಸಂಪೂರ್ಣ ವರ್ಷದ ಜಮಾ-ಖರ್ಚಿನ ಲೆಕ್ಕವನ್ನು ನೋಡುವುದಿರುತ್ತದೆ. ಧನತ್ರಯೋದಶಿಯ ವರೆಗೆ ಲೆಕ್ಕಾಚಾರ ವನ್ನು ನೋಡಿ ಉಳಿದಿರುವ ಸಂಪತ್ತನ್ನು ಭಗವಂತನ ಕಾರ್ಯಕ್ಕಾಗಿ ಉಪಯೋಗಿ ಸಿದರೆ, ’ಸತ್‌ಕಾರ್ಯಕ್ಕಾಗಿ ಹಣವು ಖರ್ಚಾಗುವುದರಿಂದಾಗಿ ಧನ ಲಕ್ಷ್ಮೀಯು ಕೊನೆಯತನಕ ಲಕ್ಷ್ಮೀಯ ರೂಪದಲ್ಲಿ ಮನೆಯಲ್ಲಿ ವಾಸಿಸುತ್ತಾಳೆ.
ನರಕಚತುರ್ದಶಿ
ಶ್ರೀಕೃಷ್ಣನು ಈ ದಿನದಂದು ನರಕಾಸುರನನ್ನು ವಧಿಸಿದನು; ಆದುದರಿಂದ ಈ ದಿನವನ್ನು ನರಕಚತುರ್ದಶಿ ಎಂದು ಕರೆಯುತ್ತಾರೆ. ಇದರ ಅರ್ಥವು ’ದುರ್ಜನ ಶಕ್ತಿಯ ಮೇಲೆ ಸಜ್ಜನ ಶಕ್ತಿಯ ವಿಜಯ’ ಎಂದಾಗುತ್ತದೆ. ಯಾವಾಗ ಸಜ್ಜನಶಕ್ತಿಯು ಜಾಗೃತಗೊಂಡು ಸಂಘಟಿತವಾಗಿ ಕಾರ್ಯ ಮಾಡುತ್ತದೆಯೋ ಆಗ ದುರ್ಜನ ಶಕ್ತಿಯ ಪ್ರಭಾವವು ಕಡಿಮೆಯಾಗುತ್ತದೆ. ’ಪ್ರತಿಯೊಬ್ಬ ವ್ಯಕ್ತಿಯು ತನ್ನಲ್ಲಿಯ ಅಸುರೀ ಪ್ರವೃತ್ತಿ ಹಾಗೂ ವಿಧ್ವಂಸಕ ಪ್ರವೃತ್ತಿಯನ್ನು ಕಡಿಮೆ ಮಾಡಿ ದೈವೀಪ್ರವೃತ್ತಿಯನ್ನು ಸ್ಥಾಪಿಸಬೇಕು. ಇದರಿಂದ ಮುಂದೆ ಸಮಾಜ ಹಾಗೂ ರಾಷ್ಟ್ರದ ಮೇಲೆ ಪರಿಣಾಮವಾಗುತ್ತದೆ.’ ಸಜ್ಜನವ್ಯಕ್ತಿಗಳು ಸಂಘಟಿತರಾಗಿ ತಮ್ಮ ಜ್ಞಾನದ ಲಾಭವನ್ನು ಸಮಾಜಕ್ಕೆ ನೀಡಬೇಕು. ಈ ವಿಷಯವೇ ನರಕ ಚರ್ತು ದಶಿಯಿಂದ ಕಂಡುಬರುತ್ತದೆ.
ನರಕಚತುರ್ದಶಿ ಎಂದರೆ ನರಕರೂಪೀ ವಾಸನೆಗಳನ್ನು ಹಾಗೂ ಅಹಂಕಾರದ ಉಚ್ಚಾಟನೆಯನ್ನು ಮಾಡಿ ಆತ್ಮಜ್ಯೋತಿಯನ್ನು ಪ್ರಕಾಶಿಸುವ ದಿನವೂ ಆಗಿದೆ.
ಲಕ್ಷ್ಮೀಪೂಜೆ
ಕಾರಹುಣ್ಣಿಮೆ ಮತ್ತು ಆಶ್ವಯುಜ ಅಮಾವಾಸ್ಯೆಯಂದು ಲಕ್ಷ್ಮೀಯ ಪೂಜೆ ಯನ್ನು ಮಾಡುತ್ತಾರೆ. ಹುಣ್ಣಿಮೆ ಹಾಗೂ ಅಮಾವಾಸ್ಯೆ ಇವೆರಡೂ ಶುಭವೇ ಆಗಿವೆ ಎಂಬುದು ಇದರ ಹಿಂದಿನ ರಹಸ್ಯವಾಗಿದೆ. ’ಹಿರಣ್ಯಮಯಿ, ತೇಜಸ್ವಿ, ಜೀವನಪೋಷಕ ಹಾಗೂ ಚೈತನ್ಯಮಯಿಯಾದಂತಹ ಲಕ್ಷ್ಮೀ ಯನ್ನು ವಾದ್ಯ ಘೋಷಗಳ ಸಹಿತ ಪ್ರವೇಶದ್ವಾರದಿಂದ ಮನೆಯೊಳಗೆ ಕರೆತಂದು ಅವಳ ವಾಸ್ತವ್ಯಕ್ಕೆ ಸ್ಥಾನ ನೀಡಿ ಪೂಜೆ ಮಾಡು ವುದೆಂದರೆ ಲಕ್ಷ್ಮೀಪೂಜೆ.’
ಈ ಅಮಾವಾಸ್ಯೆಯು ಯಾಕೆ ಶ್ರೇಷ್ಠವಾಗಿದೆ?
ಅಮಾವಾಸ್ಯೆಯು ಏಕತ್ವವನ್ನು ತೋರಿ ಸುತ್ತದೆ. ಈ ಅಮಾವಾಸ್ಯೆಯ ದಿನದಂದು ದೀಪಗಳ ಹೊಳಪು ಎಲ್ಲೆಡೆಯೂ ಶೋಭಿ ಸುತ್ತಿರುತ್ತದೆ. ಆದುದರಿಂದಲೇ ಈ ಅಮಾವಾಸ್ಯೆಯು ಪವಿತ್ರವಾಗಿದೆ. ಶರದ ಋತು ವಿನಲ್ಲಿ ಆಶ್ವಯುಜ ಮಾಸದ ಹುಣ್ಣಿಮೆ ಮತ್ತು ಈ ಅಮಾ ವಾಸ್ಯೆಯು ಕಲ್ಯಾಣP ರಿಯಾಗಿವೆ. ಅಲ್ಲದೆ ಅವು ಎಲ್ಲ ಸಮೃದ್ಧಿ ಗಳನ್ನು ತರುವಂತ ಹವುಗಳಾಗಿವೆ. ಈ ಸಮಯದಲ್ಲಿ ರೈತರು ಬೆಳೆದ ದವಸ ಧಾನ್ಯಗಳು ಮನೆಗೆ ಬಂದಿರುತ್ತವೆ. ಮನೆಯಲ್ಲಿ ಆನಂದವಿರುತ್ತದೆ. ತಾವು ಪರಿಶ್ರಮ ಪಟ್ಟ ಫಲವು ಭಗವಂತನ ಕೃಪೆಯಿಂದ ಅವರಿಗೆ ದೊರಕಿರುತ್ತದೆ; ಕೃಷಿಯಿಂದ ಉತ್ಪನ್ನ ವಾದ ಬೆಳೆಯೇ ನಿಜವಾದ ಲಕ್ಷ್ಮೀಯಾಗಿದೆ.
ಬಲಿಪಾಡ್ಯಮಿ
ಕಾರ್ತಿಕದ ಮೊದಲ ದಿನವೇ ಪಾಡ್ಯ. ಅಂದು ಬಲಿ ಪಾಡ್ಯಮಿ. ಬಲಿ ಚಕ್ರವರ್ತಿಯು ತನ್ನ ತಪೋಬಲ ಹಾಗೂ ಭುಜಬಲದಿಂದ ದೇವೇಂದ್ರನನ್ನು ಸೋಲಿಸಿ ಸುರಲೋಕವನ್ನು ವಶಪಡಿಸಿಕೊಂಡು, ಗರ್ವಿಷ್ಠನಾಗಿ ಮೆರೆಯುತ್ತಿದ್ದಾಗ, ಶ್ರೀಮನ್ನಾರಾಯಣನು ವಾಮನನಾಗಿ ಅವತರಿಸಿ, ಮೂರಡಿ ಜಾಗವನ್ನು ಬಲಿಯಿಂದ ದಾನವಾಗಿ ಪಡೆದು, ತ್ರಿವಿಕ್ರಮನಾಗಿ ಬೆಳೆದು ಆಕಾಶ - ಭೂಮಿಗಳನ್ನು ಎರಡಡಿಯಲ್ಲಿ ಅಳೆದು ಮತ್ತೊಂಡಿಯನ್ನು ಬಲಿಯ ತಲೆಯ ಮೇಲೆ ಇಟ್ಟು ಪಾತಾಳಕ್ಕೆ ತುಳಿಯುತ್ತಾನೆ. ಆದರೆ, ಕೇಳಿದೊಡನೆಯೇ ಸುರಗುರು ಶುಕ್ರಾಚಾರ್ಯರ ಮಾತನ್ನೂ ಮೀರಿ ದಾನ ಮಾಡುವ ದಾನಶೂರನಾದ ಬಲಿ, ಶ್ರೀಮನ್ನಾರಾಯಣನ ಕೃಪೆಗೂ ಪಾತ್ರನಾಗುತ್ತಾನೆ. ಪ್ರತಿವರ್ಷ ಕಾರ್ತಿಕ ಮಾಸದ ಮೊದಲ ದಿನ ಸಂಜೆ ಬಲೀಂದ್ರ ಭೂಲೋಕಕ್ಕೆ ಬಂದು ಮೂರೂ ಮುಕ್ಕಾಲು ಗಳಿಗೆ ಇರುತ್ತಾನೆ ಎಂಬುದು ಪ್ರತೀತಿ.
ಹೀಗಾಗೆ ಅಂದು ಸಂಧ್ಯಾಕಾಲದಲ್ಲಿ ಬಲೀಂದ್ರನ ಪೂಜೆ ಮಾಡಲಾಗುತ್ತದೆ. ವಾಮನರೂಪಿಯಾಗಿ ಬಲಿಯನ್ನು ತುಳಿದ ಬಳಿಕ ಪಾತಾಳದ ಪ್ರವೇಶ ದ್ವಾರವನ್ನು ಸ್ವತಃ ತಾನೇ ಕಾಯುವುದಾಗಿ ನಾರಾಯಣ ವರನೀಡುತ್ತಾನೆ. ಹೀಗಾಗಿ ಅಂದು ಸಗಣಿಯಲ್ಲಿ ಕೋಟೆ ಕಟ್ಟಿ, ಅದಕ್ಕೆ ಸಮೃದ್ಧಿಯ ಸಂಕೇತವಾಗಿ ರಾಗಿಯ ತೆನೆ, ಹುಚ್ಚಳ್ಳುಹೂವು ಸಿಕ್ಕಿಸಿ, ಹೊಸಿಲಿನ ಬಳಿ ಹಾಗೂ ದೇವರ ಮನೆಯ ಮುಂದೆ ಬೆನಕ ರೂಪಿ ಎಂದು ಸಗಣಿಯ ಕೋನಗಳನ್ನೂ ಇಡುತ್ತಾರೆ. (ಈ ಪದ್ಧತಿ ಪಾಂಡವರಿಂದ ನಡೆದು ಬಂದದ್ದೆಂದು ಹೇಳಲಾಗುತ್ತದೆ) ಕಾರ್ತೀಕ ಪಾಡ್ಯದಿಂದ ಹಿಂದೂಗಳು ಮನೆಯ ಬಾಗಿಲಲ್ಲಿ ಹಾಗೂ ತುಳಸಿಯ ಮುಂದೆ ಒಂದು ತಿಂಗಳು ಪೂರ್ತಿ ದೀಪವನ್ನು ಹಚ್ಚಲಾಗುತ್ತದೆ.
ತಾನೇ ಉರಿದರೂ ಊರಿಗೆ ಬೆಳಕು ನೀಡುವ ಪರಂಜ್ಯೋತಿಯನ್ನು ನೋಡುತ್ತಾ, ಮನುಷ್ಯ ಸ್ವಾರ್ಥವನ್ನು ಮರೆತು ತಾನೂ ಜ್ಯೋತಿಯಂತೆ ಇತರರಿಗೆ ನೆರವಾಗಲಿ ಎಂಬುದು ಕಾರ್ತೀಕದ ಮಹತ್ವದ ಉದ್ದೇಶ. ಇದುವೆ ಈ ಹಬ್ಬದ ಅಂತರಾರ್ಥ. ಕಾರ್ತೀಕ ಮಾಸದಲ್ಲಿ ಹಲವು ದೇವಾಲಯಗಳಲ್ಲಿ, ಕ್ಷೇತ್ರಗಳಲ್ಲಿ ಲಕ್ಷ ದೀಪೋತ್ಸವ ನಡೆಯುತ್ತದೆ.
ಪಟಾಕಿಗಳ ದುಷ್ಪರಿಣಾಮಗಳು
ಅ. ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳು : ಪಟಾಕಿಗಳ ಕರ್ಕಶ ಶಬ್ದದಿಂದ ಕಿವುಡುತನ ಬರುವ ಸಾಧ್ಯತೆ ಇದೆ. ಪಟಾಕಿಗಳ ಹೊಗೆಯಿಂದ ವೃದ್ಧರಿಗೆ ಉಸಿರಾಟದಲ್ಲಿ ತೊಂದರೆಗಳಾಗುತ್ತವೆ. ದೊಡ್ಡ ಶಬ್ದದಿಂದ ಚಿಕ್ಕ ಮಕ್ಕಳಿಗೆ ಮಾನಸಿಕ ಆಘಾತವಾಗುತ್ತದೆ.
ಆ. ಬೆಂಕಿ ತಗುಲುವ ಭೀತಿ : ಕ್ಷಿಪಣಿಯಂತಹ ಪಟಾಕಿಗಳಿಂದ ಒಣ ಹುಲ್ಲಿನ ಛಾವಣಿಯಿರುವ ಮನೆಗಳಿಗೆ, ಹುಲ್ಲಿನ ರಾಶಿ ಇತ್ಯಾದಿಗಳಿಗೆ ಬೆಂಕಿ ತಾಗಿ ಅಪಾರ ನಷ್ಟವಾಗುತ್ತದೆ.
ಇ. ದುಂದುವೆಚ್ಚ : ಇಂದು ದೇಶದೆಲ್ಲೆಡೆ ಅನೇಕ ಜನರು ಹಸಿವಿನಿಂದ ಹವಣಿಸುತ್ತಿದ್ದಾರೆ. ತಿನ್ನಲು ಒಪ್ಪೊತ್ತಿನ ಊಟವೂ ಸಿಗದ ಅನೇಕರಿರುವಾಗ, ನೀವು ಪಟಾಕಿಗಳನ್ನು ಸುಡಲು ದುಂದುವೆಚ್ಚ ಮಾಡುತ್ತೀರಿ. ನೀವೂ ಕೂಡ ಈ ದೇಶದ ನಾಗರಿಕರು. ಇಂತಹ ವಿಷಯಗಳಲ್ಲಿ ಪೋಲಾಗುತ್ತಿರುವ ಹಣವನ್ನು ಉಳಿಸಿ ದೇಶಕ್ಕೆ ಆಗುವ ಹಾನಿಯನ್ನು ತಪ್ಪಿಸಿ.
ಈ. ದೇವತೆಗಳ ಮತ್ತು ರಾಷ್ಟ್ರಪುರುಷರ ಚಿತ್ರಗಳಿರುವ ಪಟಾಕಿಗಳನ್ನು ಸುಡಬೇಡಿ ! : ಅನೇಕ ಮಕ್ಕಳು ದೇವತೆಗಳ ಚಿತ್ರವಿರುವ ಪಟಾಕಿಗಳನ್ನು ಸುಡುತ್ತಾರೆ. ಇದರಿಂದ ಆ ದೇವತೆಯ ಚಿತ್ರವೂ ಛಿದ್ರಛಿದ್ರವಾಗುತ್ತದೆ. ಇದೊಂದು ದೊಡ್ಡ ಪಾಪವಾಗಿದೆ. ನಿಮ್ಮ ತಂದೆ ತಾಯಿಯ ಚಿತ್ರಗಳು ಹೀಗೆ ಛಿದ್ರವಾದರೆ ನಿಮಗೆ ಒಪ್ಪಿಯಿದೆಯೇ? ಈ ವಿಷಯದಲ್ಲಿ ನಿಮಗೆ ಕೋಪ ಬರಬೇಕಲ್ಲವೇ?
ದೇವತೆಗಳನ್ನು ಒಲಿಸಲು ಹಾಡುವ ಭಜನೆಗಳು, ಆರತಿ ಹಾಡುಗಳಿಂದ ದೇವತೆಗಳು ನಮ್ಮತ್ತ ಆಕರ್ಶಿತರಾಗುತ್ತಾರೆ. ಪಟಾಕಿಗಳ ಕರ್ಕಶ ಶಬ್ದದಿಂದ ಮನುಷ್ಯರಿಗೆ ಅಲ್ಲಿರಲು ಆಗುವುದಿಲ್ಲ, ಹೀಗಿರುವಾಗ ದೇವತೆಗಳು ಅಲ್ಲಿ ಬರುವರೆ? ನೀವೇ ಯೋಚಿಸಿ ನೋಡಿ! ಇಂತಹ ಶಬ್ದವನ್ನು ಮಾಡುವುದರಿಂದ ವಾತಾವರಣದಲ್ಲಿರುವ ದೇವತೆಗಳ ಶಕ್ತಿ ಮತ್ತು ಚೈತನ್ಯವನ್ನು ನಷ್ಟಪಡಿಸುತ್ತೇವೆ. ಈ ರೀತಿ ಮಾಡುವುದರಿಂದ ನಮ್ಮ ಮೇಲೆ ದೇವರ ಕೃಪೆ ಆಗುವುದೇ? ಮಿತ್ರರೇ, ಈ ದೀಪಾವಳಿಯಂದು ಪಟಾಕಿಗಳ ಈ ಕೆಟ್ಟ ಪದ್ಧತಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಪ್ರಯತ್ನಗಳನ್ನು ಮಾಡಿ !

****
ಪಟಾಕಿ ಬೇಡ. ದೀಪಗಳನ್ನು ಹಚ್ಚಿ ದೀಪಾವಳಿಯನ್ನು ಸಂಭ್ರಮಿಸಿ

ಓದುಗರೆಲ್ಲರಿಗೂ ದೀಪಾವಳಿಯ ಶುಭಾಶಯಗಳು
ಕುಂದಾಪ್ರ ಡಾಟ್ ಕಾಂ- editor@kundapra.com