ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ನೇತೃತ್ವದಲ್ಲಿ. ನಾಡಿನ ಪ್ರಸಿದ್ಧ ವ್ಯಂಗ್ಯಚಿತ್ರಕಾರರ ಸಮ್ಮುಖದಲ್ಲಿ...
ದೇಶಕ್ಕೆ ಅತಿಹೆಚ್ಚು ವೃತ್ತಿಪರ ಹಾಗೂ ಹವ್ಯಾಸಿ ವ್ಯಂಗ್ಯಚಿತ್ರಕಾರರನ್ನು ನೀಡಿದ ಕುಂದಾಪುರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಆ ಎಲ್ಲಾ ವ್ಯಂಗ್ಯಚಿತ್ರಕಾರರ ಸಮ್ಮುಖದಲ್ಲಿ 'ಕುಂದಾಪ್ರ ಕಾರ್ಟೂನು ಹಬ್ಬ-14' ನಡೆಯಲಿದೆ. ನವೆಂಬರ್ 21ರಿಂದ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಟೂನ್ ಹಬ್ಬದಲ್ಲಿ ಕುಂದಾಪುರದ ಎಲ್ಲಾ ವ್ಯಂಗ್ಯಚಿತ್ರಕಾರರ ವ್ಯಂಗ್ಯಚಿತ್ರ ಪ್ರದರ್ಶನ, ಕಾರ್ಯಾಗಾರ, ಸ್ಥಳದಲ್ಲಿಯೇ ಕ್ಯಾರಿಕೇಚರ್ ರಚನೆ, ವಿಶಿಷ್ಠ ಸೆಲ್ಫಿ ಕಾರ್ನರ್, ಕಾರ್ಟೂನ್ ಪುಸ್ತಕ ಬಿಡುಗಡೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ವರ್ಧೆಗಳು ನಡೆಯಲಿದೆ.
ಹೊಸ ತಲೆಮಾರಿನ ಕಾರ್ಟೂನಿಷ್ಟ್ ಗಳನ್ನು ಪ್ರೋತ್ಸಾಹಿಸುವ, ವಿದ್ಯಾರ್ಥಿಗಳಿಗೆ ಕಾರ್ಟೂನ್ ಕುರಿತು ಆಸಕ್ತಿಯನ್ನು ಬೆಳೆಸುವ ಸಲುವಾಗಿ ಹಮ್ಮಿಕೊಂಡ ಕಾರ್ಟೂನ್ ಹಬ್ಬ ಕುಂದಾಪುರದ ಮಟ್ಟಗೆ ಒಂದು ಹೊಸ ಪ್ರಯತ್ನವೆನಿಸಿಕೊಂಡಿದೆ.
* ಯಾವಾಗ:
ನವೆಂಬರ್ 21-22ರಂದು. 22ರ ಮಧ್ಯಾಹ್ನ 2:30ರಿಂದ 4:30ರ ತನಕ ವಿದ್ಯಾರ್ಥಿಗಳಿಕಾಗಿ ಕಾರ್ಟೂನ್ ಕಾರ್ಯಾಗಾರ
* ಎಲ್ಲಿ ನಡೆಯುತ್ತೆ ಹಬ್ಬ:
ಕುಂದಾಪುರದ ಜ್ಯೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ.
* ಭಾಗವಹಿಸುತ್ತಿರುವ ಕಾರ್ಟೂನಿಷ್ಟ್ ಗಳು:
ಪಂಜು ಗಂಗೊಳ್ಳಿ, ಸತೀಶ್ ಆಚಾರ್ಯ, ಚಂದ್ರ ಗಂಗೊಳ್ಳಿ, ಸಂತೋಷ್ ಸಸಿಹಿತ್ಲು, ಜಯರಾಮ ಉಡುಪ, ದಿನೇಶ್ ಹೊಳ್ಳ, ಕೇಶವ ಸಸಿಹಿತ್ಲು, ಕಲೈಕಾರ್, ಸುರೇಶ್ ಕೋಟ, ರಾಮಕೃಷ್ಣ ಹರ್ಳೆ, ರವಿಕುಮಾರ್ ಗಂಗೊಳ್ಳಿ, ಗಣೇಶ್ ಹೆಬ್ಬಾರ್, ಚಂದ್ರಶೇಖರ ಶೆಟ್ಟಿ, ಚಂದ್ರ ಕೋಡಿ, ಸುಧೀಂದ್ರ ತೆಕ್ಕಟ್ಟೆ, ರವಿರಾಜ ಹಾಲಂಬಿ, ಸಂಜಯ ಮೊವಾಡಿ, ರವೀಂದ್ರ
* ಏನೇನಿರುತ್ತೆ:

ಕಾರ್ಟೂನ್ ಕಾರ್ಯಾಗಾರ, ಪ್ರಾತ್ಯಕ್ಷಿಕೆ - ಖ್ಯಾತ ವ್ಯಂಗ್ಯಚಿತ್ರಕಾರರಿಂದ ಸ್ಥಳದಲ್ಲೇ ಕಾರ್ಟೂನ್ ರಚನೆ ಹಾಗೂ ಆಸಕ್ತ ಸಾರ್ವಜನಿಕರಿಗೆ ಕಾರ್ಟೂನ್ ರಚಿಸಲು ಕ್ಯಾನ್ವಾಸ್
ಸ್ಥಳದಲ್ಲೇ ಕ್ಯಾರಿಕೇಚರ್ - ಕ್ಯಾರಿಕೇಚರ್ ಕೂಪನ್ ಪಡೆದವರಿಗೆ ಖ್ಯಾತ ಕಾರ್ಟೂನಿಷ್ಠಗಳಿಂದ ಕ್ಯಾರಿಕೇಚರ್ ರಚಿಸಿಕೊಡಲಾಗುವುದು.
ಕಾರ್ಟೂನ್ ಪುಸ್ತಕ ಬಿಡುಗಡೆ - ಕುಂದಾಪುರದ ವ್ಯಂಗ್ಯಚಿತ್ರಕಾರರ ಕಾರ್ಟೂನ್ ಸಂಕಲನದ ಪುಸ್ತಕ ಬಿಡುಗಡೆ
ಸಾರ್ವಜನಿಕರಿಗೆ ವಿವಿಧ ಸ್ವರ್ಧೆಗಳು - ಕಾರ್ಟೂನ್ ಡೈಲಾಗ್ ಬರೆಯುವುದು, ಕ್ಯಾರಿಕೇಚರ್ ರಚಿಸುವುದು ಮುಂತಾದ ಸ್ವರ್ಧೆಗಳು ಹಾಗೂ ಆಕರ್ಷಕ ಬಹುಮಾನ
ಸೆಲ್ಫಿ ಕಾರ್ನರ್ - ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಲು ಇಲ್ಲವೇ ವೈಯಕ್ತಿಕ ಸಂಗ್ರಹಕ್ಕಾಗಿ ವಿಶಿಷ್ಟ ಸೆಲ್ಫಿ ಕಾರ್ನರ್
ವಿದ್ಯಾರ್ಥಿಗಳಿಗೆ ಕಾರ್ಯಾಗಾರ - ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಟೂನ್ ಕಾರ್ಯಾಗಾರ
* ಯಾರು ಸಂಘಟಿಸುತ್ತಿದ್ದಾರೆ:

ಶಾಲಾಕಾಲೇಜು ದಿನಗಳಲ್ಲಿಯೇ ಚಿತ್ರ ಬಿಡಿಸುವ ಹವ್ಯಾಸ ಬೆಳೆಸಿಕೊಂಡಿದ್ದ ಸತೀಶ್, ಮುಂದೆ ವ್ಯಂಗ್ಯಚಿತ್ರದತ್ತ ಒಲವು ಮೂಡಿಸಿಕೊಂಡವರು. ಎಂಬಿಎ ಪದವೀಧರರಾದ ಅವರು ಮುಂಬೈನ ಮಿಡ್-ಡೇ ಪತ್ರಿಕೆಯ ಮೂಲಕ ಕಾರ್ಟೂನ್ ವೃತ್ತಿ ಆರಂಭಿಸಿ, ಇಂದು ದೇಶದ ಹತ್ತಾರು ಪತ್ರಿಕೆ ಹಾಗೂ ವೆಬ್ ಪೋರ್ಟಲ್ ಗಳಿಗೆ ಕಾರ್ಟೂನ್ ಬರೆದು ಲಕ್ಷಾಂತರ ಓದುಗರನ್ನು ತಲುಪುತ್ತಿದ್ದಾರೆ. ತನ್ನ ಬಿಡುವಿರದ ಕಾರ್ಯಚಟುವಟಿಕೆಯ ನಡುವೆಯೂ ಅವರ ವಿನೂತನ ಪರಿಕಲ್ಪನೆಯ ಕಾರ್ಟೂನು ಹಬ್ಬ ಒಂದಿಷ್ಟು ವ್ಯಂಗ್ಯಚಿತ್ರಕಾರರನ್ನು, ಒಂದಿಷ್ಟು ಕಾರ್ಟೂನ್ ಪ್ರೀಯರನ್ನು ಹುಟ್ಟುಹಾಕಲಿ ಎಂಬುದೇ ನಮ್ಮ ಆಶಯ.
***
ನಿಮ್ಮ ಅಭಿಪ್ರಾಯ ಬರೆಯಿರಿ
Famous cartoonist Satish Acharya organised Kundapra Cartoon
Habba-14 on Nov 21 and 22 at Junior college Kalamandira Kundapura.
This is first time in Kundapura. Famous cartoonists will be
there in this occasion
Cartoon Habba will make new record in Nation's cartoon
history.