
ಫೆಬ್ರವರಿ 25ರ ಮಧ್ಯಾಹ್ನ 3ಗಂಟೆಗೆ ಜರುಗಲಿರುವ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ, ವಾಗ್ಮಿ ಓಂ ಗಣೇಶ್ ಉಪ್ಪುಂದ ವಿದ್ಯಾರ್ಥಿಗಳನ್ನುದ್ದೇಶಿಸಿ ಬದುಕು-ವ್ಯವಹಾರ-ಪಯಣ ಎಂಬ ವಿಷಯವಾಗಿ ಮಾತನಾಡಲಿದ್ದಾರೆ.
ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾದ ಸೀಮಾ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಕಾಲೇಜಿನ ಎನ್.ಎಸ್.ಎಸ್ ಯೋಜನಾಧಿಕಾರಿ ಸುಧಾಕರ ಪಾರಂಪಳ್ಳಿ ಉಪಸ್ಥಿತರಿರುವರು. ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕುಂದಾಪ್ರ ಡಾಟ್ ಕಾಂ ನ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಕೋರಿದ್ದಾರೆ.
ಕಾರ್ಯಕ್ರಮದ ಬಗ್ಗೆ
ಆಧುನಿಕತೆಯ ಮಾಯೆಯೊಳಗೆ ಕಳೆದುಹೋಗುತ್ತಿರುವ ವಿದ್ಯಾರ್ಥಿ ಸಮೂಹವು ಪದವಿ ಸರ್ಟಿಫಿಕೇಟ್ ಪಡೆಯುವುದೊಂದೇ ಜೀವನದ ಪರಮೋಚ್ಚ ಗುರಿ ಎಂದು ಭಾವಿಸಿದಂತಿದೆ. ನಿಜವಾದ ಶಿಕ್ಷಣವೆಂದರೆ ಸಾಮಾಜಿಕ ಪ್ರಜ್ಞೆಯನ್ನೂ, ಮಾನವೀಯ ಮೌಲ್ಯವನ್ನು ರೂಪಿಸಿಕೊಳ್ಳುವುದು; ವಾಸ್ತವಗಳೊಂದಿಗೆ ಸಮರ್ಥವಾಗಿ ವ್ಯವಹರಿಸುವುದು; ತನ್ನನ್ನು ತಾನು ಅರಿಯುವುದು ಇವೇ ಮುಂತಾದವುಗಳಾಗಿವೆ ಎಂಬುದನ್ನು ತಿಳಿಸುವ, ಆ ಮೂಲಕ ಸ್ವಸ್ಥ ಸಮಾಜವನ್ನು ಕಟ್ಟುವ ಕುಂದಾಪ್ರ ಡಾಟ್ ಕಾಂ ನ ಸಂಕಲ್ಪಕ್ಕೊಂದು ಮುನ್ನುಡಿ ಬರೆಯುವ ಉದ್ದೇಶದಿಂದ ಹಮ್ಮಿಕೊಂಡ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ - ಪರಿವರ್ತನೆ.
ಕುಂದಾಪ್ರ ತಾಲೂಕಿನ ಪ್ರತಿ ಕಾಲೇಜಿನಲ್ಲಿಯೂ ಈ ಕಾರ್ಯಕ್ರಮವನ್ನು ಆಯೋಜಿಸುವ ಗುರಿಯನ್ನು ಹೊಂದಲಾಗಿದೆ. ಡಾ| ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ನಿರೂಪಿಸಲಿದ್ದಾರೆ.
● To watch live on Youtube ► http://youtu.be/Zapmtk9hNTY
● To watch live on Kundapra.com ► http://j.mp/parivartane
● To watch on Facebook page (Desktop)►http://bit.ly/FB-Parivarthane
ಕುಂದಾಪ್ರ ಡಾಟ್ ಕಾಂ- editor@kundapra.com