ಕುಂದಾಪುರದಲ್ಲಿ ಹೋಳಿ ಸಂಭ್ರಮ

ಕುಂದಾಪುರ: ಇಲ್ಲಿನ ಕೊಂಕಣ ಖಾರ್ವಿ ಸಮಾಜ ಭಾಂದವರ ವಾರ್ಷಿಕ ಹೋಳಿ ಆಚರಣೆ ಸಂಭ್ರಮದಿಂದ ಜರುಗಿತು. ಹೋಳಿ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆಗಳನ್ನು ಪೂರೈಸಿದ ಬಳಿಕ ಖಾರ್ವಿ ಸಮಾಜ ಭಾಂದವರೆಲ್ಲರೂ ಸೇರಿ ಹೋಳಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಗಂಡಸರು, ಹೆಂಗಸರು, ಮಕ್ಕಳೆನ್ನದೇ ಎಲ್ಲರೂ ಬಣ್ಣದ ಹಬ್ಬದಲ್ಲಿ ಮಿಂದು ಸಂಭ್ರಮಿಸಿದರು. ಕೆಲವು ವಿದೇಶಿಗರೂ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕುಂದಾಪುರದ ರಕ್ತೇಶ್ವರಿ ದೇವಸ್ಥಾನದಿಂದ ಶಾಸ್ರ್ತೀ ವೃತ್ತದ ವರೆಗೂ ಬೃಹತ್ ಮೆರವಣಿಗೆ ನಡೆಯಿತು.