ಉಡುಪಿಯ ಪ್ರತಿಭೆ ಗಗನ್ ಗೆ ಓಟ್ ಮಾಡಿ ಗೆಲ್ಲಿಸಿ

VOTE ಮಾಡುವ ಮೂಲಕ ಫೈನಲ್ ನಲ್ಲಿರುವ ನಮ್ಮೂರಿನ ಹುಡುಗನನ್ನು ಗೆಲ್ಲಿಸಿ

ಉಡುಪಿ: ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಗಂಟೆಗೆ ಹಿಂದಿಯ ZEE TV ಯಲ್ಲಿ ಪ್ರಸಾರವಾಗುತ್ತಿರುವ ಸರೆಗಮಪ ಲಿಟ್ಟಲ್ ಚಾಂಪ್-5 ರಲ್ಲಿ ಕರ್ನಾಟಕದ ಬಹುಮುಖ ಪ್ರತಿಭೆ ಮಾಸ್ಟರ್ ಗಗನ್ ಜಿ. ಗಾಂವ್ಕರ್ (3G) ಟಾಪ್-5ರ (ಫೈನಲ್) ಹಂತ ತಲುಪಿದ್ದಾನೆ.  
   ಸ್ಪರ್ಧೆ ಬಹಳಷ್ಟು ತೀವ್ರವಾಗಿ ನಡೆಯುತ್ತಿದ್ದು ಸದ್ಯ ಇಡೀ ದಕ್ಷಿಣ ಭಾರತದಿಂದ ಏಕೈಕ ಸ್ಪರ್ಧಿಯಾಗಿ ಗಗನ್ ಮಾತ್ರವಿದ್ದು ಉತ್ತಮವಾಗಿ ಹಾಡುತ್ತಾ ಮುಂದುವರಿಯುತ್ತಿದ್ದಾನೆ.  
   ಈ ಬಹುಮುಖ ಪ್ರತಿಭೆ ಕರ್ನಾಟಕದವನು ಅದರಲ್ಲೂ ನಮ್ಮ ಜಿಲ್ಲೆಯವನು ಎನ್ನುವುದು ನಮ್ಮೆಲ್ಲರ ಹೆಮ್ಮೆಯ ವಿಷಯ.  ಸ್ಪರ್ಧೆಯಲ್ಲಿ ಈಗಾಗಲೇ Voting ಪ್ರಾರಂಭವಾಗಿದ್ದು, ಸ್ಪರ್ಧೆಯಲ್ಲಿ ಫೈನಲ್ ಹಂತದಲ್ಲಿ ಗೆಲ್ಲಲು ನಾಡಿನ ಸಮಸ್ತ ಜನರ ಆಶೀರ್ವಾದ ಮತ್ತು VOTE ಬೇಕಾಗುತ್ತದೆ.  

ಮಾಸ್ಟರ್ ಗಗನ್‌ಗೆ ಮೊಬೈಲ್‌ನಲ್ಲಿ VOTE ಮಾಡಲು SRGMP ಸ್ಪೇಸ್ GAG ಎಂದು ಬರೆದು 57575ಗೆ ಕಳುಹಿಸಿ.
ಅಂತರ್ಜಾಲದ ಮೂಲಕ :  www.zeetv.com/lilchamps ಅಥವಾ ಟ್ವಿಟ್ಟರ್ ಮೂಲಕ #Gagan#Lilchamps@zeetv ಎಂದು VOTE  ಮಾಡಬಹುದು. 
    ಒಬ್ಬರು ಎಷ್ಟು VOTE ಬೇಕಾದರೂ ಮಾಡಬಹುದಾಗಿದ್ದು ಕರ್ನಾಟಕದ ಪ್ರತಿಭೆ ಈ ಸ್ಪರ್ಧೆಯಲ್ಲಿ ಮುಂದುವರಿಯಲು ನಿಮ್ಮ ಮತ ಅತ್ಯಂತ ಅಗತ್ಯವಾಗಿದೆ. 

VOTE  ಮಾಡಲು ಶನಿವಾರ ರಾತ್ರಿ 9 ರಿಂದ ಮಂಗಳವಾರ ಬೆಳಿಗ್ಗೆ 8 ಗಂಟೆಯ  ವರೆಗೆ ಮಾತ್ರ ಮಾಡಲು ಅವಕಾಶ.

ಗಗನ್ ಗಾಂವ್ಕರ್ ನ ಪ್ರತಿಭೆ ಕೆಳಗೆ ಅನಾವರಣಗೊಂಡಿದೆ ನೋಡಿ. 2012ರಲ್ಲಿ ಕನ್ನಡ ಸಾರೆಗಾಮಾಪ ದಲ್ಲಿZEE TV ಹಿಂದಿಯಲ್ಲಿ ಗಗನ್ ನ ಕಮಾಲ್