ಹೌದು ಸದ್ದಕ್ಕೆ ನಾವೀಗ ಸೀನಿಯರ್ಸ್. ಕಾಲೇಜಿಗೆ ಬಂದು ಮೂರು ವರುಷ ಮುಗಿಯುವ ಹೊತ್ತಲ್ಲಿ ನಾವಿದ್ದೇವೆ. ಇದೇ ಎರಡು ವರ್ಷದ ಹಿಂದೆ ಕ್ಯಾಂಪಸ್ನೊಳಗೆ ಕಾಲಿಡಲು ಹೆದರುತ್ತಿದವರು ಈಗ ಅಷ್ಟೇ ಧೈರ್ಯದಿಂದ ಸೀನಿಯರ್ಸ ಆಗಿ ತಿರುಗಾಡುತ್ತಿದ್ದೆವೆ. ಕ್ಯಾಂಪಸನಲ್ಲಿ ಸೀನಿಯರ್ಸ ಆಗುವುದೆಂದರೆ ಅದೊಂತರಾ ಜವಬ್ದಾರಿಯುತ ಸಂಭ್ರಮ. ಹಿಂದೆ ಜೂನಿಯರ್ಸ್ ಆಗಿದ್ದವರು ಈಗ ಜವಬ್ದಾರಿಯುತ ಸೀನಿಯರ್ಸ ಆಗಿದ್ದೇವೆ. ಮನೆಯ ಪರಿಸರದಲ್ಲಿ ನಮಗಿಲ್ಲದ ಜವಬ್ದಾರಿ ಈಗ ಕ್ಯಾಂಪಸನೊಳಗೆ ಬಂದು ಬಿಟ್ಟಿದೆ. ಈ ಸೀನಿಯರ್ಸ್ ಪಟ್ಟ ಎಂಬುವುದು ಯಾವತ್ತು ಅನುಭವಿಸದ ರೋಚಕ ಅನುಭವ ಲೋಕ.
ಇನ್ನೇನು ಕಾಲೇಜು ಮುಗಿಯುತ್ತೆ, ಸೀನಿಯರ ಪಟ್ಟ ಕೆಳಗಿಡುತ್ತೇವೆ. ಅನ್ನುವಷ್ಟರಲ್ಲಿ ಪ್ರೇಮಿಗೆ ಪ್ರೇಮ ನಿವೇದನೆಯ ನೆನಪು ಮರುಕಳಿಸುವಂತೆ ಆರಂಭದ ದಿನಗಳ ನೆನಪಿನ ಅಲೆಗಳು ಮನದ ಮುಗ್ದತೆಗೆ ಬಂದೆರಗುತ್ತಿವೆ.
ಆವತ್ತು ನಾವು ಜೂನಿರ್ಸ ಆಗಿ ಕಾಲೇಜಿಗೆ ಕಾಲಿಟ್ಟಾಗ ಮೈ ಜುಮ್ ಎಂದಿತ್ತು. ಅಬ್ಬಾ ಎಂತ ದೊಡ್ಡ ಕಾಲೇಜು. ಕಾಲೇಜಿನ ತುಂಬಾ ತಿರುಗಾಡುತ್ತಿದ್ದ ಸೀನಿಯರ್ಸ್ ಬಾಯ್ಸ. ಅವರ ರೋಮಿಂಗ ಕಾಲ್ಗಳಿಗೆ ಎಕ್ಟ್ರಾಚಾರ್ಜ್ ಇಲ್ಲವೆಂದೆನೊ ಆ ರೋಮಿಂಗ್ ಟೈಮಲ್ಲಿ ನಮ್ಮನ ಆ ರೀತಿ ಗೋಳೊಕೊಂಡ್ರು ಅಸ್ನುತ್ತೆ. ಪರ್ಸಬಿತ್ತು ಎತ್ತಿಕೊಂಡು ಎನ್ನುತ್ತಿದ್ದ ಪೆಕ್ಲಾಗಳು, ಆಪೀಸಿನಲ್ಲಿ ತಮ್ಮ ಕೆಲಸ ಆಗ್ಬೇಕೆಂದು ಜೂನಿಯರ ಶರ್ಟ ಕಳಚುತ್ತಿದ್ದ ಸೀನಿಯರ ಎಡಬಿಡಂಗಿಗಳು, ಅಬ್ಬಬ್ಬಾ ಅವರ ಸೊಕ್ಕೆ. ಅವರ ತಂಟೆ ತಕರಾರಿಗೆ ಮೊದಲೆ ಹೆದರಿ ಬೇಸತ್ತಿದ್ದ ನಾವು ಅವರು ಮಾಡುವ ಕೀಟಲೆಗೆ ನಕರಾ ಎನ್ನದೆ ನಡುಗಿ ಹೋಗುತ್ತಿದೆವು. ಇದನ್ನು ನೋಡಿ ಸೀನಿಯರ್ಸ್ ಅನ್ನೊ ಆ ಮಹಾನುಭವರು ಸೀಗರೇಟಿನ ಮತ್ತಿನಂತೆ ಸಕತ್ತ ಮಜಾ ತೆಗೆದುಕೊಳ್ಳುವುದರಲ್ಲಿ ಪುಲ್ ಬ್ಯುಸಿ.
ಇದನ್ನೆಲ್ಲ ಅರಗಿಸಿಕೊಳ್ಳುತ್ತಿರುವಾಗ ನಮ್ಮ ಪಾಲಿಗೆ ಬಂದ ಪಂಚಾಮೃತವೆಂದರೆ ನಮ್ಮ ಸೂಪರ ಸೀನಿಯರ್ಸ ಆರಂಭದ ದಿನಗಳಲ್ಲಿ ಪ್ರತಿಯೊಂದಕ್ಕೂ ಅವರನ್ನೇ ಅವಲಂಬಿಸಿದ್ದ ನಾವು ಅವರಿಂದ ಸುಂದರ ಸ್ವಾಗತ ಪಡೆದ ಭಾಗ್ಯವಂತರು.
ಇಂತಹ ಸಿಹಿಸಿಹಿಯಾದ ಘಟನೆಗಳ ನೆನಪುಗಳು ಮತ್ತೊಮ್ಮೆ ಮಗದೊಮ್ಮೆ ಮನದಲ್ಲಿ ಗರಿಗೆದರುವುದು ನಮ್ಮ ಪಪ್ಪಿ ಜೂನಿಯರ್ಸ ಕಂಡಾಗ. ಅವರಿಗಿರುವ ಭಯ, ಸಂಕೋಚ, ಹೊಸತನ ನಮಗೆದುರಾದಾಗ. ನಾವು ಸೀನಿಯರ್ಸ ಆಗಿರುವುದಕ್ಕಿಂತ ಮುಂಚೆ ಇದನೆಲ್ಲ ದಾಟಿ ಬಂದವರೆ ಈಗ ಅವೆಲ್ಲ ಮೀಟುವ ಹೃದಯದ ಗಿಟಾರ ಆಗಿದೆ.

ಈ ಮನಸ್ಸೆಂಬ ಹಸುಗೂಸಿನ ಆ ಹಠಕ್ಕೆ ಯಾವ ಟಾನಿಕ್ ನೀಡಬೇಕೆಂದು ತೋಚದೆ ಸುಮ್ಮನೆ ಕುಳಿತಿದೆ ಈ ಜೀವ,