ಬಿಗಿಭದ್ರತೆ ಭದ್ರತೆಯಲ್ಲಿ ಸಿದ್ಧಾಪುರಕ್ಕೆ ಬಂದ್ರು ಸಿಎಂ


ಕುಂದಾಪುರ: ವಾರಾಹಿ ನೀರಾವರಿ ಯೋಜನೆಯ ಪ್ರಥಮ ಹಂತದ ಕಾಮಗಾರಿಯನ್ನು ಉದ್ಘಾಟಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಗಮನದ ಹಿನ್ನೆಲೆಯಲ್ಲಿ ನಕ್ಸಲ್ ಸಕ್ರೀಯ ಪ್ರದೇಶವಾದ ಹೊಸಂಗಡಿ ಹಾಗೂ ಸಿದ್ಧಾಪುರದಲ್ಲಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು. ಮುಖ್ಯಮಂತ್ರಿಗಳು ಸಾಗುವ ಹಾದಿಯುದ್ದಕ್ಕೂ 300ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡಂತೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಮಂಗಳೂರು ಪ್ರಭಾರ ಐಜಿ ಮುರುಗನ್, ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೆ ನೇತತ್ವದಲ್ಲಿ 2 ಕೆಎಸ್‌ಆರ್‌ಪಿ ತುಕಡಿ, 4 ಸಶಸ್ತ್ರ ಮೀಸಲು ಪಡೆ ತುಕಡಿ, ಇಬ್ಬರು ಡಿವೆಎಸ್ಪಿ, 7 ಮಂದಿ ಸರ್ಕಲ್ ಇನ್ಸ್‌ಪೆಕ್ಟರ್, 16 ಮಂದಿ ಸಬ್‌ಇನ್ಸ್‌ಪೆಕ್ಟರ್, 22 ಎ.ಎಸ್‌.ಐ, 63 ಹೆಡ್‌ಕಾನ್‌ಸ್ಟೇಬಲ್, 143 ಪೇದೆ, 19 ಮಂದಿ ಮಹಿಳಾ ಪೇದೆ, 17 ಮಂದಿ ಗಹ ರಕ್ಷಕದಳ, 2 ವಿಧ್ವಂಸಕ ಕತ್ಯ ತಡೆ ತಂಡದ ಭದ್ರತೆಗೆ ನಿಯೋಜಿತರಾಗಿದ್ದರು.

ಬೆಳಗ್ಗೆ 11.30ಕ್ಕೆ ಹೊಸಂಗಡಿ ಹೆಲಿಪ್ಯಾಡ್‌ನಲ್ಲಿ ಲ್ಯಾಂಡ್ ಆಗಬೇಕಾಗಿದ್ದ ಮುಖ್ಯಮಂತ್ರಿ 12.35ಕ್ಕೆ ಬಂದಿಳಿದಿರು. ಅಲ್ಲಿಂದ ಅವರನ್ನು ಝಡ್ ಪ್ಲಸ್ ಸೆಕ್ಯುರಿಟಿಯೊಂದಿಗೆ ಹೊಸಂಗಡಿ ಸಮೀಪದ ಹೊಳೆ ಶಂಕರನಾರಾಯಣ ವಾರಾಹಿ ಯೋಜನಾ ಪ್ರದೇಶಕ್ಕೆ ಕರೆತರಲಾಯಿತು. ಅಲ್ಲಿ ವಿಧ್ಯುಕ್ತ ಉದ್ಘಾಟನೆ ನೆರವೇರಿಸಿದ ಬಳಿಕ ಸಿದ್ಧಾಪುರ ಸರಕಾರಿ ಪ್ರೌಢಶಾಲೆ ಮೆದಾನದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಭಾಗವಹಿಸಿದರು. ಅಲ್ಲಿ ಡಿ ಜೋನ್ ಸೆಕ್ಯುರಿಟಿ ಒದಗಿಸಲಾಗಿತ್ತು. 3:50ಕ್ಕೆ ಮುಖ್ಯಮಂತ್ರಿಗಳು ಕುಂದಾಪುರದಿಂದ ನಿರ್ಗಮಿಸಿದರು.