ಎಸ್ಸೆಸ್ಸೆಲ್ಸಿಯ ಫಲಿತಾಂಶ: ತಾಲೂಕಿನ 22 ಶಾಲೆಗಳಲ್ಲಿ ಶೇ.100 ಫಲಿತಾಂಶ ದಾಖಲು

ಕುಂದಾಪುರ,ಮೇ-13: ವಿದ್ಯಾರ್ಥಿಗಳ ಭವಿಷ್ಯದ ಪ್ರಮುಖ ಫಟ್ಟವಾಗಿರುವ ಎಸ್ಸೆಸ್ಸೆಲ್ಸಿಯ ಫಲಿತಾಂಶವನ್ನು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ನಿನ್ನೆ ಅಂತರ್ಜಾಲದಲ್ಲಿ ಬಿಡುಗಡೆಗೊಳಿಸಿದ್ದು, ಇಂದು ಎಲ್ಲಾ ಶಾಲೆಗಳಲ್ಲಿ ಅಧಿಕೃತವಾಗಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಕಳೆದ ಭಾರಿ ಶೇ.87.68 ಫಲಿತಾಂಶ ಪಡೆದು ತೃತೀಯ ಸ್ಥಾನಕ್ಕೆ ಕುಸಿದಿದ್ದ ಉಡುಪಿ ಜಿಲ್ಲೆ (ಶೇ.93.37), ಈ ಭಾರಿ ಮತ್ತೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಕುಂದಾಪುರ ತಾಲೂಕಿನ ಸರಕಾರಿ ಶಾಲೆಗಳೂ ಸೇರಿದಂತೆ ಎಲ್ಲಾ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದು, ತಾಲೂಕಿನ 22ಶಾಲೆಗಳು ಈ ಭಾರಿ ಶೇ.100ರಷ್ಟು ಫಲಿತಾಂಶವನ್ನು ದಾಖಲಿಸಿದೆ.

ಕಂಬದಕೋಣೆ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಶ್ರೇಯಸ್ ಎಸ್. ಶೆಟ್ಟಿ 620 ಅಂಕ ಗಳಿಸಿ ತಾಲೂಕಿಗೆ ಮೊದಲಿಗನಾಗಿದ್ದರೇ, ಕೋಟೇಶ್ವರ ಜ್ಯೂನಿಯರ್ ಕಾಲೇಜಿನ ಪ್ರಥ್ವಿ ಎನ್. 619 ಅಂಕಗಳಿಸಿ ದ್ವಿತೀಯ ಸ್ಥಾನಿಯಾಗಿದ್ದಾನೆ. ಗಂಗೊಳ್ಳಿಯ ಎಸ್.ವಿ. ಇಂಗ್ಲಿಷ್ ಪ್ರೌಢಶಾಲೆಯ ರಾಧಿಕಾ ಪೈ, ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಗ್ರೀಷ್ಮಾ ಎಚ್., ಕುಂದಾಪುರ ಹೋಲಿರೋಜರಿ ಪ್ರೌಢಶಾಲೆಯ ಕ್ಷಮಾ 616ಅಂಕ ಗಳಿಸುವ ಮೂಲಕ ತೃತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. 

ಕುಂದಾಪುರ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ 5383 ವಿದ್ಯಾರ್ಥಿಗಳು ಪೈಕಿ 4994 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆ ಪೈಕಿ ಕುಂದಾಪುರ ವಲಯದ ಶೇ.93.48, ಹಾಗೂ ಬೈಂದೂರು ವಲಯದ ಶೇ. 92.11 ಪ್ರತಿಶತ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಕುಂದಾಪುರ ವಲಯದಲ್ಲಿ ಒಟ್ಟು 14 ಶಾಲೆಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿದ್ದರೇ, ಬೈಂದೂರು ವಲಯದಲ್ಲಿ ಒಟ್ಟು 8 ಶಾಲೆಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿದ್ದು, ಒಟ್ಟು ಶಾಲೆಗಳ ಪೈಕಿ 12 ವಿದ್ಯಾರ್ಥಿಗಳು ಕುಂದಾಪುರ ಹಾಗೂ 17 ವಿದ್ಯಾರ್ಥಿಗಳು ಬೈಂದೂರು ವಲಯದಲ್ಲಿ 600ಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದಾರೆ.


ಶೇ.100 ಫಲಿತಾಂಶ ದಾಖಲಿಸಿರುವ ಕುಂದಾಪುರ ತಾಲೂಕಿನ ಶಾಲೆಗಳು
ಕುಂದಾಪುರ ವಲಯ
* ಸೇವಾ ಸಂಗಮ ಪ್ರೌ.ಶಾಲೆ ತೆಕ್ಕಟ್ಟೆ
* ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ
* ಬ್ಯಾರೀಸ್ ಸಿಸೈಟ್ ಆಂಗ್ಲ ಮಾಧ್ಯಮ ಪ್ರೌಡಶಾಲೆ ಕೋಡಿ
* ವಿ.ಕೆ.ಆರ್ ಆಚಾರ್ಯ ಕುಂದಾಪುರ
* ಸ.ಪ್ರೌ.ಶಾಲೆ ಅಮಾಸೆಬೈಲು
* ಸ. ಪ್ರೌ. ಶಾಲೆ ಬಿಜಾಡಿ
* ಮದರ್ ಥೆರೆಸಾ ಆಂಗ್ಲ ಪ್ರೌ. ಶಂಕರನಾರಾಯಣ
* ಸ.ಪ್ರೌ. ಶಾಲೆ ಹೆಸ್ಕೂತ್ತೂರು
* ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಡಶಾಲೆ ಸಿದ್ಧಾಪುರ
* ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೋಟೇಶ್ವರ
* ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆ ಯಡಾಡಿ ಮತ್ಯಾಡಿ
* ಝಿಯಾ ಪಬ್ಲಿಕ್ ಸ್ಕೂಲ್ ಕಂಡ್ಲೂರು
* ಶ್ರೀರಾಮ ವಿದ್ಯಾ ಕೇಂದ್ರ ಪ್ರೌಢಶಾಲೆ ಕೋಡಿ

ಬೈಂದೂರು ವಲಯ
* ಜನತಾ ಪ್ರೌಢಶಾಲೆ ಹೆಮ್ಮಾಡಿ
* ಭಾರತ್ ಮಾತ್ ಪ್ರೌಢಶಾಲೆ ಮೂದೂರು
* ಸರಕಾರಿ ಪ್ರೌಡಶಾಲೆ ಉಪ್ಪಿನಕುದ್ರು
* ಶ್ರೀ ಬ್ರಾಹ್ಮಿ ದುರ್ಗಾ ಪ್ರೌಢಶಾಲೆ ಕಮಲಶಿಲೆ
* ಶ್ರೀ ಮೂಕಾಂಬಿಕಾ ಪ್ರೌಢಾಲೆ ಹೊಸೂರು
* ಸಂದೀಪನ್ ಪ್ರೌಢಶಾಲೆ ಕಂಬದಕೋಣೆ
* ತೌಹಿದ್ ಪಬ್ಲಿಕ್ ಸ್ಕೂಲ್ ಶಿರೂರು
* ಸರಕಾರಿ ಪ್ರೌಢಶಾಲೆ ಚಿತ್ತೂರು

ಅತಿ ಹೆಚ್ಚು ಅಂಕ ಗಳಿಸಿದ ತಾಲೂಕಿನ ವಿದ್ಯಾರ್ಥಿಗಳು
ಕುಂದಾಪುರ ವಲಯದಲ್ಲಿ ಅತೀ ಹೆಚ್ಚು ಅಂಕ ಪಡೆದ 7 ವಿದ್ಯಾರ್ಥಿಗಳು
* ಪ್ರಥ್ವಿ ಎನ್. (ಸ.ಪ.ಪೂ ಕಾಲೇಜು ಕೋಟೇಶ್ವರ) 619
* ರಾಧಿಕಾ ಪೈ (ಎಸ್.ವಿ. ಇಂಗ್ಲಿಷ್ ಪ್ರೌಢಶಾಲೆ ಗಂಗೊಳ್ಳಿ) 616
*  ಗ್ರೀಷ್ಮಾ ಎಚ್. (ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ) 616
* ಕ್ಷಮಾ (ಹೋಲಿರೋಜರಿ ಪ್ರೌಢಶಾಲೆ ಕುಂದಾಪುರ) 616
* ನಿತೀಶ್ ಪ್ರಭು (ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ) 614
* ಅಮೃತ ಜೆ. ಶೆಟ್ಟಿ (ವಿ.ಕೆ.ಆರ್. ಆಚಾರ್ಯ ಕುಂದಾಪುರ) 611
* ಹರ್ಷ. ಬಿ. (ವಿ.ಕೆ.ಆರ್. ಆಚಾರ್ಯ ಕುಂದಾಪುರ) 610
* ಅನುಷಾ ಶೆಣೈ (ಎಸ್.ವಿ. ಇಂಗ್ಲಿಷ್ ಪ್ರೌಢಶಾಲೆ ಗಂಗೊಳ್ಳಿ) 608

ಬೈಂದೂರು ವಲಯದಲ್ಲಿ ಅತಿ ಹೆಚ್ಚು ಅಂಕ ಪಡೆದ 7 ವಿದ್ಯಾರ್ಥಿಗಳು
* ಶ್ರೇಯಸ್ ಎಂ ಶೆಟ್ಟಿ (ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಕಂಬದಕೋಣೆ)-620
* ಅಂಬಿಕಾ (ಮೂಕಾಂಬಿಕಾ ಪ್ರೌಢಶಾಲೆ ಕೊಲ್ಲೂರು) 613
*  ರಮ್ಯ (ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಕಂಬದಕೋಣೆ) - 611
* ವಿಶ್ವೇಶ್ (ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಕಂಬದಕೋಣೆ) 610
* ರಾಘವೇಂದ್ರ (ಸ.ಪ.ಪೂ ಕಾಲೇಜು ಉಪ್ಪುಂದ) 610
* ಪೂಜಾ ಜಿ. ಎಸ್. (ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಕಂಬದಕೋಣೆ)-609
* ಬಿ. ಕಾರ್ತಿಕ್ ನಾಯಕ್ (ಸ.ಪ.ಪೂ ಕಾಲೇಜು ಉಪ್ಪುಂದ) 609

ಕುಂದಾಪ್ರ ಡಾಟ್ ಕಾಂ- editor@kundapra.com