1 ರೂಪಾಯಿಗೆ 5ಕಿ.ಮೀ ಆಟೋ ಓಡಿಸಿದ ಮೋದಿ ಅಭಿಮಾನಿ!

ಕುಂದಾಪುರ, ಕುಂದಾಪ್ರ ಡಾಟ್ ಕಾಂ: ಮೋದಿ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿರುವ ಸಂದರ್ಭದಲ್ಲಿ ಕೇಂದ್ರ ಸರಕಾರ ವಿವಿಧ ಹಂತದಲ್ಲಿ ಸಂಭ್ರಮವನ್ನು ಆಚರಿಸುತ್ತಿದ್ದರೇ, ಕುಂದಾಪುರದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಅಭಿಮಾನಿಯೊಬ್ಬರು ತನ್ನ ಆಟೋ ರಿಕ್ಷಾದಲ್ಲಿ ಒಂದು ದಿನದಲ್ಲಿ 5 ಕಿಲೋಮೀಟರ್ ವರೆಗೆ 1 ರೂಪಾಯಿ ಪ್ರಯಾಣ ದರ ನಿಗದಿ ಮಾಡುವ ಮೂಲಕ ತನ್ನ ಅಭಿಮಾನ ಮೇರೆದಿದ್ದಾನೆ. 
ಕುಂದಾಪುರ ವಿನಾಯಕ ಟಾಕೀಸ್ ಬಳಿಯ ಆಟೋ ನಿಲ್ದಾಣದಲ್ಲಿರುವ ರಿಕ್ಷಾದ ಮೇಲೆ ಬ್ಯಾನರ್ ಕಂಡು ಎಲ್ಲರೂ ಚಿಕಿತರಾಗಿದ್ದರು.  ಮೋದಿ ಸರಕಾರದ ಸಾಧನೆಯಿಂದ ಪ್ರೇರಿತಗೊಂಡಿರುವ ಅಂಕದಕಟ್ಟೆಯ ಸುರೇಶ್ ಪ್ರಭು ಎಂಬುವವರು ಸರಕಾರಕ್ಕೆ ಒಂದು ವರ್ಷವಾದ ದಿನದಂದು ತಮ್ಮ ಆಟೋ ಹಿಂದೆ 1ರೂಪಾಯಿ ಪ್ರಯಾಣ ದರದ ಮಾಹಿತಿ ನೀಡಿ ಓಡುಸುತ್ತಿದ್ದರು ಎಂಬುದು ತಿಳಿದು ಬಂತು . ದಿನದ ಕೊನೆಯಲ್ಲಿ 80 ಪ್ರಯಾಣಿಕರು 1 ರೂಪಾಯಿಯಲ್ಲಿ ಪ್ರಯಾಣಿಸಿ ಖುಷಿಪಟ್ಟರೇ, ಇಂತಹ ಅವಕಾಶ ಮಾಡಿಕೊಟ್ಟ ಸುರೇಶ್ ಪ್ರಭು ತಮ್ಮ ಕೆಲಸದಿಂದ ತೃಪ್ತರಾದರು. ಮೋದಿ ಸರಕಾರ ಅಧಿಕಾರಕ್ಕೆ ಬಂದಾಗಲೂ 1ರೂಗೆ ರಿಕ್ಷಾ ಓಡಿಸಿದ್ದರು. 
ಕುಂದಾಪ್ರ ಡಾಟ್ ಕಾಂ- editor@kundapra.com