ಸಮವಸ್ತ್ರ ಮತ್ತು ಹದಿಹರೆಯದ ಮನಸ್ಸುಗಳು.

        “ಈಗಾಗಲೇ ಬಹುತೇಕ ಶಾಲಾಕಾಲೇಜುಗಳು ಪುನರಾರಂಭಗೊಂಡಿದ್ದು ವಿದ್ಯಾರ್ಥಿಗಳ ಪಾಲಕರು ಒ0ದು ಹ0ತಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ವಿದ್ಯಾರ್ಥಿಗಳು ಹೊಸ ಹೊಸ ಕನಸುಗಳೊ0ದಿಗೆ ತರಗತಿಯ ಕೋಣೆಗಳನ್ನು ಸೇರಿಕೊ0ಡಿದ್ದಾರೆ. ಎಲ್ಲರಿಗೂ ತಿಳಿದಿರುವ0ತೆ ಪ್ರತಿಯೊ0ದು ಶಿಕ್ಷಣ ಸಂಸ್ಥೆಗಳು ಒಂದಲ್ಲಾ ಒಂದು ರೀತಿಯ ನಿಗದಿತವಾದ ನಿಯಮ ಮತ್ತು ಕಟ್ಟಳೆಗಳಿಗೆ ಅನುಸಾರವಾಗಿ ತಮ್ಮ ಚಟುವಟಿಕೆಗಳನ್ನು ನಡೆಸುತ್ತವೆ. ಆಯಾ ಸಂಸ್ಥೆಯ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಆದ್ಯ ಕರ್ತವ್ಯ. ಇಂದು ಬಹುತೇಕ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವುದನ್ನು  ಕಡ್ಡಾಯಗೊಳಿಸಲಾಗಿದೆ. ಇದು ನಿಜಕ್ಕೂ ಒಂದು ಉತ್ತಮವಾದ ಬೆಳವಣಿಗೆ. ಈ ನಡುವೆ ಕೆಲವೊಂದು ಕಡೆಗಳಲ್ಲಿ ಈ ನಿಯಮದ ಬಗೆಗೆ ಪರವಿರೋಧ ಚರ್ಚೆಗಳು ನಡೆದಿದ್ದನ್ನು ಗಮನಿಸಿದ್ದೇನೆ. ಪರವಿರೋಧಗಳು ಇರುವ0ತಾದ್ದೆ. ಆದರೆ ಅಂತಿಮವಾಗಿ ಯಾವುದು ಅತ್ಯುತ್ತಮ ಎನ್ನುವುದನ್ನು ಪ್ರಜ್ಞಾವಂತರೆನಿಸಿಕೊಂಡವರು ಅರ್ಥಮಾಡಿಕೊಳ್ಳುತ್ತಾರೆ ಎನ್ನುವುದು ನನ್ನ ಖಚಿತ ಅಭಿಪ್ರಾಯ.”
      “ಒಂದಂತೂ ಸತ್ಯ. ವಿದ್ಯಾರ್ಥಿಗಳಿಗೆ ಸಮವಸ್ತ್ರ ಅಗತ್ಯವಿಲ್ಲ, ಅದರಿ0ದ ಏನೂ ಸಾಧನೆಯಾಗುವುದಿಲ್ಲ, ಶಿಕ್ಷಣಕ್ಕೂ ಅದಕ್ಕೂ ಸಂಬಂಧವಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಸ0ಗತಿ. ಕೇವಲ ಒಂದು ಸಮವಸ್ತ್ರ  ಅನ್ನುವಂತಾದ್ದು ಇಂದಿನ ಈ ಆಧುನಿಕ ಕಾಲದ  ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಒಟ್ಟಾರೆ  ಬದುಕಿನಲ್ಲಿ ಅತ್ಯಂತ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದೆ ಎನ್ನುವ ವಿಚಾರವನ್ನು ಯಾರೂ ಕೂಡ ಅಲ್ಲಗಳೆಯಲಾಗದು. ಹೌದು. ಸಮವಸ್ತ್ರ  ಎನ್ನುವಂತಾದ್ದು ಕೇವಲ  ವಿದ್ಯಾರ್ಥಿಗಳ ಬಟ್ಟೆಗೆ ಸ0ಬಂಧಿಸಿದ ವಿಚಾರ ಮಾತ್ರವಲ್ಲ. ಅದು ಅವರ ಒಟ್ಟು ವ್ಯಕ್ತಿತ್ವವನ್ನು ರೂಪಿಸುವಲ್ಲಿನ ಒಂದಂಶವೂ ಹೌದು.”
      “ಶಿಕ್ಷಣದ ಉದ್ದೇಶ ಕೇವಲ ಮಕ್ಕಳ ಜ್ಞಾನವನ್ನು ಹೆಚ್ಚಿಸುವುದಲ್ಲ. ಅವರಲ್ಲಿ ಸಮಷ್ಠಿ ಭಾವವನ್ನು ಮೂಡಿಸಿ, ಸಮಾನತೆಯನ್ನು, ಹೋರಾಟದ ಮನೋಭಾವನೆಯನ್ನು ಬೆಳೆಸಿ, ಆ ಮೂಲಕ ಅವರನ್ನು ಸಮಾಜಮುಖಿಯಾಗಿ ಸತ್ಪ್ರಜೆಗಳಾಗಿ ಬೆಳೆಸುವುದು ಕೂಡ ಆಗಿದೆ. ಆದರೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಿಂದ ಈ ಕಾರ್ಯ ಸಮರ್ಪಕವಾಗಿ ಅಗುತ್ತಿಲ್ಲ ಅನ್ನೋ ವಾಸ್ತವವನ್ನು ಕೂಡ ನಾವು ಒಪ್ಪಿಕೊಳ್ಳಬೇಕು. ಅದೇನೆ ಇದ್ದರೂ,  ವಿದ್ಯಾರ್ಥಿಗಳಲ್ಲಿ ಅಸಮಾನತೆಯನ್ನು ಬಿಂಬಿಸಬಲ್ಲ ಕೆಲವೊಂದು ವಿಚಾರಗಳು ಒಂದು ವಿದ್ಯಾಲಯದಲ್ಲಿ ಇರಬಹುದಾದರೂ ಕೂಡ  ವಿದ್ಯಾರ್ಥಿಗಳಲ್ಲಿ  ಸಮಾನತೆಯನ್ನು ಬೆಳೆಸುವಲ್ಲಿ  ಸಮವಸ್ತ್ರದ ಪಾತ್ರ ಅತ್ಯಂತ ಮಹತ್ವದ್ದು ಅನ್ನೋದು ಕೂಡ ನಮಗೆ ತಿಳಿದಿರಬೇಕು. ಮತ್ತೊಂದು ವಿಚಾರವೆಂದರೆ ಸಮವಸ್ತ್ರ ಕಡ್ಡಾಯವಾಗಿರುವ ಬಹುತೇಕ ವಿದ್ಯಾಲಯಗಳಲ್ಲಿ ಹೆಚ್ಚಿನ ಅಲಂಕಾರ ಆಡಂಬರಗಳಿಗೂ ಅವಕಾಶಗಳು ಇರುವುದಿಲ್ಲ ಎನ್ನುವುದನ್ನ ಗಮನದಲ್ಲಿಡಬೇಕಾಗಿದೆ. ನಿಜ. ಎಲ್ಲಾ ವಿಚಾರಗಳಲ್ಲೂ  ವಿದ್ಯಾರ್ಥಿಗಳನ್ನು ಖ0ಡಿತಾ ನಿಯ0ತ್ರಿಸಲು ಸಾಧ್ಯವಿಲ್ಲ. ಮತ್ತದು ಸಾಧುವೂ ಅಲ್ಲ. ಆದರೆ ಸಾಧ್ಯವಾಗುವ ವಿಚಾರಗಳನ್ನು ಅವಗಣನೆ ಮಾಡಬಾರದು ಅಲ್ಲವೇ?”
       “ನಿಮಗೆ ಗೊತ್ತಿರಲಿ ಹದಿಹರೆಯದ  ವಿದ್ಯಾರ್ಥಿಗಳ ಅದರಲ್ಲೂ ವಿಶೇಷವಾಗಿ ಫ್ರೌಡಶಾಲಾ, ಪದವಿಪೂರ್ವ, ಹಾಗೂ ಪದವಿ ಹ0ತದ  ವಿದ್ಯಾರ್ಥಿಗಳ ಮನಸ್ಸು ಈ ಜಗತ್ತಿನ ಹಾಗೂ ಸುತ್ತಮತ್ತಲಿನ ಸಮಾಜದ ಎಲ್ಲಾ ಸೂಕ್ಷ್ಮತೆಗಳನ್ನು ಅರ್ಥ ಮಾಡಿ ಅರಗಿಸಿಕೊಳ್ಳಬಲ್ಲಷ್ಟು ಪ್ರಬುದ್ಧವಾಗಿರುವುದಿಲ್ಲ. (ಕೆಲವು ಅಪವಾದಗಳಿರಬಹುದು). ಈ ವಯಸ್ಸಿನಲ್ಲಿ ಪ್ರತಿಯೊಬ್ಬ  ವಿದ್ಯಾರ್ಥಿಗಳು ಕೂಡ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿಕೊ0ಡು ಸ0ತಸದಿ0ದ ಸ್ವತ0ತ್ರರಾಗಿರಲು ಬಯಸುತ್ತಾರೆ. ಮತ್ತದು ಸಹಜ ಕೂಡ. ಆದರೆ ಪ್ರಶ್ನೆ ಇರುವುದು  ಇಲ್ಲಿಯೆ! ಎಷ್ಟು ಜನ  ವಿದ್ಯಾರ್ಥಿಗಳಿಗೆ ಈ  ಬಣ್ಣ ಬಣ್ಣದ ಬಟ್ಟೆಗಳ ಸ0ಭ್ರಮ , ಖುಷಿ ಸವಿಯಲು ಸಾಧ್ಯ? ವಿದ್ಯಾಲಯದ ಮಾತು ಬಿಡಿ. ಒ0ದೇ ತರಗತಿಯಲ್ಲಿಯೇ ಬೇರೆ ಬೇರೆ ಆರ್ಥಿಕ ಹಿನ್ನೆಲೆಗಳಿ0ದ ಬ0ದ  ವಿದ್ಯಾರ್ಥಿಗಳು ಇರುತ್ತಾರೆ. ಉಳ್ಳವರು, ಮಧ್ಯಮರು, ಇಲ್ಲದವರು... ಎಲ್ಲರೂ. ಶ್ರೀಮ0ತ ಹಿನ್ನೆಲೆಯ ಮಕ್ಕಳು ದಿನಕ್ಕೊ0ದು ಬಗೆಯ ಫ್ಯಾಶನ್ನಿನ ಬಟ್ಟೆ ಧರಿಸಿ ಅದಕ್ಕೆ ತಕ್ಕ0ತೆ ಅಲ0ಕಾರ ಮಾಡಿಕೊ0ಡು  ಸ0ಭ್ರಮಿಸಬಲ್ಲರು. ಆದರೆ ನಮಗೆ ತಿಳಿದಿರಲೇಬೇಕಾದ ಸ0ಗತಿಯೆ0ದರೆ ಅದೇ ತರಗತಿಯಲ್ಲಿ ಕನಿಷ್ಠ ಎರಡು-ಮೂರು ಜೊತೆ ಅದು ಸಮವಸ್ತ್ರ ವಿರಲಿ ಅಥವಾ ಬೇರೆ ಬಣ್ಣದ ಬಟ್ಟೆಗಳಾಗಲಿ ಅದನ್ನೂ ಹೊಲಿಸಿಕೊಳ್ಳಲು ತೀರಾ ಕಷ್ಟಪಡುವ ವರ್ಗದ ವಿದ್ಯಾರ್ಥಿಗಳು ಇರುತ್ತಾರೆ ಅನ್ನೋದು. ಅ0ತಹವರೂ ಸೇರಿದ0ತೆ ಇತರ ಮಕ್ಕಳು ಕೂಡ ಸಹಜವಾಗಿ ತಮ್ಮನ್ನು ತಾವು ಉಳಿದ  ವಿದ್ಯಾರ್ಥಿಗಳೊ0ದಿಗೆ ಹೋಲಿಕೆ ಮಾಡಿಕೊಳ್ಳಲು ಆರ0ಭಿಸುತ್ತಾರೆ. ಅದು ಸರಿಯಲ್ಲ ಅಥವಾ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅನ್ನೋ ತರ್ಕಗಳಿಗೆಲ್ಲಾ ಅವರ ಮನಸ್ಸು ಜಾಗ ನೀಡೊದಿಲ್ಲಾ. ಹಾಗಾಗಿ ತನ್ನಿ0ತಾನೆ ಆ   ವಿದ್ಯಾರ್ಥಿಗಳು ಕೀಳರಿಮೆಯಿ0ದ ನರಳಲಾರ0ಭಿಸುತ್ತಾರೆ. ಅದು ಅವರ ಕಲಿಕೆಯ ಮೇಲೂ ತೀವ್ರತೆರನಾದ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಇದು ನಾನು ಕ0ಡುಕೊ0ಡ ಸತ್ಯ.”
     “ಅದೇ ಎಲ್ಲಾ  ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿರುವಾಗ ಯಾರೂ ಕೂಡ ಈ ವಿಷಯಕ್ಕೆ ಸ0ಬ0ಧಿಸಿದ0ತೆ ಹೋಲಿಕೆ ಮಾಡಿಕೊಳ್ಳಲು ಹೋಗುವುದಿಲ್ಲ.(ಬೇರೆ ಬೇರೆ ನೆಪಗಳನ್ನೊಡ್ಡಿ ಇತರೆ ವಿಷಯಗಳನ್ನು ಮುಚ್ಚಿಡಬಹುದು. ಆದರೆ ದಿರಿಸಿನ ವಿಚಾರದಲ್ಲಿ ಅದು ಸಾಧ್ಯವಾಗಲಾರದು ಎನ್ನುವುದು ಗಮನದಲ್ಲಿರಲಿ.)  ಅ0ತಹ ವಾತಾವರಣದಲ್ಲಿ ಶ್ರೀಮ0ತಿಕೆಯನ್ನು ಮೆರೆಸುವ ಅಥವಾ ಬಡತನವನ್ನು ಶೋಷಿಸುವ ಸಾಧ್ಯತೆಗಳು ತು0ಬಾ ಕಡಿಮೆ. ಎಲ್ಲಕ್ಕಿ0ತ ಹೆಚ್ಚಾಗಿ ಯಾರು ಮೇಲು ಯಾರು ಕೀಳು ಎ0ದೆಲ್ಲಾ ವಗಿ9ಕರಿಸಲು ಅಲ್ಲಿ ಅವಕಾಶಗಳು ಕಡಿಮೆಯಾಗುತ್ತವೆ.  ಹಾಗಾಗಿ ಸಹಜವಾಗಿಯೆ  ಅದೊ0ದು ರೀತಿಯ ಸಮಾನತೆ ಅನ್ನುವ0ತಾದ್ದು ವಿದ್ಯಾಥಿಗಳ ನಡುವೆ ಬೆಳೆದುಬಿಡುತ್ತದೆ. ಆ ಮೂಲಕ ಅವರ ವ್ಯಕ್ತಿತ್ವದ ಬೆಳವಣಿಗೆಗೂ ಅವು ಕಾರಣವಾಗುತ್ತವೆ. ಶಿಕ್ಷಣದ ಮೂಲ ಉದ್ದೇಶಗಳಲ್ಲಿ ಅದು ಕೂಡ ಒ0ದು ಅಲ್ಲವೇ?”
      “ಕೇವಲ ಸಮಾನತೆಯನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಮಾತ್ರ  ಸಮವಸ್ತ್ರಗಳ ಬಳಕೆ ಮಹತ್ವ ಅನ್ನಿಸುವ0ತಾದ್ದಲ್ಲ. ಈ ಸಮವಸ್ತ್ರಗಳ ಕಾರಣದಿ0ದಾಗಿಯೇ ಎಷ್ಟೋ ವಿದ್ಯಾರ್ಥಿಗಳು ಇ0ದು ಅಡ್ಡದಾರಿ ಹಿಡಿಯುವುದರಿ0ದ ಪಾರಾಗಿದ್ದಾರೆ ಅನ್ನೋದು ಕೂಡ ಸತ್ಯಸ್ಯ ಸತ್ಯ. ಹೌದು. ಇ0ದು ನಮ್ಮ ನಡುವೆ ಪದೇ ಪದೇ ಅನ್ನುವ0ತೆ ಆಗಾಗ್ಗೆ ಹಲವಾರು  ವಿದ್ಯಾರ್ಥಿಗಳು ಅದೂ ಕೆಲವೊಮ್ಮೆ ತರಗತಿಗಳನ್ನು ಬ0ಕ್ ಮಾಡಿ ಮಾದಕದ್ರವ್ಯಗಳನ್ನು ಸೇವಿಸುವ0ತಾದ್ದು, ಪಬ್ಬುಬಾರುಗಳಲ್ಲಿ ಕಾಲ ಕಳೆಯುವ0ತಾದ್ದು, ಅನೈತಿಕ ವ್ಯವಹಾರಗಳಲ್ಲಿ ತೊಡಗಿರುವ0ತಾದ್ದು, ಯಾರೊ0ದಿಗೊ ತಿರುಗಾಡುವ0ತಾದ್ದು, ಪ್ರೀತಿಯ ಹೆಸರಿನಲ್ಲಿ ಓಡಿಹೋಗುವ0ತಾದ್ದು.....ಮು0ತಾದ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇ0ತಹ ಪ್ರಕರಣಗಳಿಗೆ ಸ್ವಲ್ಪವಾದರೂ ಕಡಿವಾಣ ಹಾಕಿದ ಕೀರ್ತಿ ಸಮವಸ್ತ್ರಗಳಿಗೆ ಸಲ್ಲುತ್ತದೆ. ನಿಜ. ಒ0ದು ನಿರ್ದಿಷ್ಠ ಸ0ಸ್ಥೆಯ ಸಮವಸ್ತ್ರಗಳನ್ನು ಧರಿಸಿದ ಬಳಿಕ ಅವರೆಲ್ಲೇ ಹೋದರು ಅವರನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕರಿಗೂ ಕೂಡ ಅವರ ಜಾಡನ್ನು ಅರಸಲು ಸಾಧ್ಯ. ಅವರ ಅನುಚಿತ ನಡವಳಿಕೆಗಳು ತೀರಾ ಸುಲಭವಾಗಿ ಸಿಕ್ಕಿಬೀಳುತ್ತವೆ. ಆ ಮೂಲಕ ಸಮವಸ್ತ್ರಗಳು ಹುಟ್ಟು ಹಾಕುವುದು ಒ0ದು ಉತ್ತಮ ಭಯ. ಇದೊ0ದು ವಿಚಾರವೇ ಹಲವಾರು  ವಿದ್ಯಾರ್ಥಿಗಳನ್ನು ಕೆಟ್ಟ ವ್ಯವಹಾರಗಳಿಗೆ   ಇಳಿಯದ0ತೆ ಎಚ್ಚರಿಸುತ್ತಿವೆ. (ಇನ್ನು ಮೂರು ಬಿಟ್ಟವರು ಏನಾದರೂ ಮಾಡಬಲ್ಲರು. ಆ ವಿಚಾರ ಬೇರೆ. ಮನೆಯಿ0ದ ಸಮವಸ್ತ್ರಗಳನ್ನು ಧರಿಸಿಕೊ0ಡು ಬ0ದು ಪಬ್ಲಿಕ್ ಟಾಯ್ಲೆಟ್ ನಲ್ಲಿ ಬಟ್ಟೆ ಬದಲಿಸಿಕೊ0ಡು ಊರೂರು ಸುತ್ತುವ, ಅನುಚಿತ ವ್ಯವಹಾರಗಳಲ್ಲಿ ತೊಡಗಿಕೊಳ್ಳುವ ಅನೇಕ ವಿದ್ಯಾಥಿ9(?)ಗಳನ್ನು  ನಾನು ಗಮನಿಸಿದ್ದೇನೆ.) ಸಮವಸ್ತ್ರಗಳು ಉ0ಟು ಮಾಡುವ ಈ ಪ್ರಮಾಣದ ಪರಿಣಾಮಗಳಿಗೆ ಜೈ ಅನ್ನದಿರಲು ಹೇಗೆ ಸಾಧ್ಯ!?”
      “ಇಷ್ಟೇ ಅಲ್ಲ, ಒ0ದು ಶಿಕ್ಷಣ ಸ0ಸ್ಥೆಯ ಬಗೆಗೆ ಸಾರ್ವಜನಿಕರಲ್ಲಿ ಉತ್ತಮವಾದ ಗೌರವ ಭಾವನೆಯನ್ನು ಮೂಡಿಸುವಲ್ಲಿ ಸಮವಸ್ತ್ರಗಳ ಪಾತ್ರ ಅತ್ಯ0ತ ಮಹತ್ವದ್ದು. ಸಮವಸ್ತ್ರಗಳು ಮೂಡಿಸುವ ಸಮಾನತೆ, ಶಿಸ್ತು, ಸೌಜನ್ಯದ ಭಯ ಅನ್ನುವ0ತಾದ್ದು ಪ್ರತಿಯೊ0ದು  ವಿದ್ಯಾರ್ಥಿಗಳಲ್ಲಿ  ಒ0ದು ಅದ್ಭುತವಾದ ಆತ್ಮವಿಶ್ವಾಸವನ್ನು, ಮುಖದಲ್ಲಿ ಶೋಭೆಯನ್ನು ಮೂಡಿಸುತ್ತವೆ. ಒ0ದು ಪ್ರತಿಷ್ಠಿತ ಕಾರ್ಪೋರೇಟ್ ಸ0ಸ್ಥೆಯ ಉದ್ಯೋಗಿಗಳಲ್ಲಿರಬಹುದಾದ ಹೆಮ್ಮಯ ನೋಟವನ್ನು ಕೂಡ ಈ ಸಮವಸ್ತ್ರಗಳು ತ0ದು ಕೊಡಬಲ್ಲುವು. ಒ0ದು ಶಿಕ್ಷಣ ಸ0ಸ್ಥೆಯ ಸಮವಸ್ತ್ರಗಳನ್ನು ,ಗುರುತು ಚೀಟಿಯನ್ನು ಧರಿಸುವುದು ನನ್ನ ಪ್ರಕಾರ ಅತ್ಯ0ತ ಹೆಮ್ಮೆಯ ವಿಚಾರ. ಅದನ್ನೊ0ದು ಬ0ಧನ, ಶಿಕ್ಷೆ, ಅಥವಾ ವೈಯಕ್ತಿಕ ಸ್ವಾತ0ತ್ರ್ಯದ ಹರಣ ಎ0ದು ಭಾವಿಸುವುದು ಶುದ್ಧ ಮೂರ್ಖತನದ ಸ0ಗತಿ. ಸಮವಸ್ತ್ರಗಳನ್ನು ಧರಿಸಲು ಹಿ0ಜರಿಯುವುದೆ0ದರೆ ಅವರು ಸಮಾಜದೊ0ದಿಗೆ ಬೆರೆಯಲು ಸಿದ್ಧರಿಲ್ಲ ಹಾಗಾಗಿ ಅವರು ಶಿಕ್ಷಣ ಪಡೆಯಲು ಅಯೋಗ್ಯರೆ0ದೇ ಅರ್ಥ. ನೆನಪಿರಲಿ ಶಿಕ್ಷಣ ಎನ್ನುವ0ತಾದ್ದು ಸಮಾಜಕ್ಕೆ ನಮ್ಮನ್ನು ನಾವು ತೆರೆದುಕೊಳ್ಳಲು ಕಲಿಸಬೇಕೆ ಹೊರತು ಸಮಾಜದಿ0ದ ನಮ್ಮ ಮುಖವನ್ನು ಮುಚ್ಚಿಡುವ0ತಾದ್ದಲ್ಲ. ಕೆಲವೊ0ದು ನಿರ್ದಿಷ್ಠ ಧರ್ಮಕ್ಕೆ ಸೇರಿದ  ಶಿಕ್ಷಣ ಸ0ಸ್ಥೆಗಳು ಶಿಸ್ತಿನ ಹೆಸರಿನಲ್ಲಿ ಅತೀಯಾದ ಅ0ಧ ಆಚರಣೆಗಳನ್ನು ಕೆಲವೊಮ್ಮೆ ಧಾರ್ಮಿಕತೆಗೆ ಸ0ಬ0ಧಿಸಿದ ಆಚರಣೆಗಳನ್ನು ಆಳವಡಿಸಿಕೊ0ಡಿರುವುದನ್ನ ಗಮನಿಸಿ ಈ ಮಾತನ್ನ ಹೇಳಬೇಕಾಯಿತು. ಒ0ದು ಮಾತನ್ನು ಇಲ್ಲಿ ಉಲ್ಲೇಖಿಸಲೇ ಬೇಕಾಗಿದೆ. ಸಮವಸ್ತ್ರಗಳ ನೆಪದಲ್ಲಿ ತೀರಾ  ಮೊಣಕಾಲುಗಳ ಮೇಲೆ ಧರಿಸುವ ಕುಳ್ಳಗಿನ ಲ0ಗಗಳಿಗೆ, ಅತಿಯಾದ ಬಿಗಿ ಹೊ0ದಿರುವ ಅ0ಗಿಗಳಿಗೆ ನನ್ನ ತೀವ್ರ ವಿರೋಧವಿದೆ.”
       “ಇನ್ನು ಉಪನ್ಯಾಸಕರು ಹಾಗು ಶಿಕ್ಷಕರುಗಳ  ವಿದ್ಯಾರ್ಥಿಗಳೆಡೆಗಿನ ಉತ್ತಮ ದೃಷ್ಠಿಕೋನವನ್ನು ಮತ್ತಷ್ಟು ಸಧೃಡಗೊಳಿಸಲು ಈ ಸಮವಸ್ತ್ರಗಳು ತು0ಬಾ ಸಹಕಾರಿ ಅನ್ನುವುದನ್ನ ಸ್ವತಃ ಅವರೇ ಒಪ್ಪಿಕೊಳ್ಳುತ್ತಾರೆ. ಅದು ನಿಜ ಕೂಡ. ಈ ಸಮವಸ್ತ್ರಗಳ ಕಾರಣದಿ0ದಾಗಿಯೆ ಇ0ದು ತಮ್ಮ ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸುತ್ತಿರುವ  ಎಷ್ಟೋ ಬಡ ಕುಟು0ಬಗಳಲ್ಲಿ ನೆಮ್ಮದಿಯ ನಿಟ್ಟುಸಿರಿದೆ. ಹಿ0ದೊಮ್ಮೆ ಇವೇ ಕುಟು0ಬಗಳಲ್ಲಿ ಕೇವಲ ಬಟ್ಟೆಗಳ ಕಾರಣಕ್ಕೆ (ಶಾಲಾ ಕಾಲೇಜುಗಳಿಗೆ ಹಾಕಿಕೊ0ಡು ಹೋಗಲು )ಮಕ್ಕಳು ಮುನಿಸಿಕೊ0ಡಿದ್ದು, ಜಗಳವಾಡಿದ್ದು, ಶಾಲೆಗೆ ಹೋಗಲು ಹಿ0ಜರಿದದ್ದು, ಅಪ್ಪ ಅಮ್ಮ ಸಾಲ ಮಾಡಿದ್ದು ಯಾವುದೂ ಕೂಡ ಬರಿಯ ಕತೆಗಳಲ್ಲ. ವಸ್ತುಸ್ಥಿತಿ ಹೀಗಿರುವಾಗ ಈ ಸಮವಸ್ತ್ರಗಳಿ0ದ ಏನೂ ಪ್ರಯೋಜನವಾಗುವುದಿಲ್ಲವೆ0ದರೆ ಅದು ಅರ್ಥಹೀನ ವಾದವಾಗುತ್ತದೆ. ಅದೇನೇ ಇರಲಿ. ಪ್ರತಿಯೊ0ದು ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರಗಳನ್ನು ಕಡ್ಡಾಯ ಮಾಡುವುದು ಒಳ್ಳೆಯ ವಿಚಾರ. ಹಾಗೆ ಕಡ್ಡಾಯ ಮಾಡುವಾಗ ಸಮಾಜದಲ್ಲಿ ಆರ್ಥಿಕವಾಗಿ ಹಿ0ದುಳಿದವರ ( ಜಾತಿ ಲೆಕ್ಕದಲ್ಲಿ ಅಲ್ಲ.) ಸಮಸ್ಯೆಗಳನ್ನು ಅರಿತುಕೊ0ಡು ಅದಕ್ಕೆ ಸಕರಾತ್ಮಕವಾಗಿ ಸ್ಪ0ದಿಸುವ ಕಾರ್ಯಗಳನ್ನು ಕೂಡ ನಡೆಸಬೇಕಾದ ಅಗತ್ಯತೆ ಇದೆ ಅನ್ನುವುದು ನನ್ನ ಖಚಿತ ಅನಿಸಿಕೆ.” 

“ಕೊನೆಗೊಂದು ಮಾತು: ಶಿಕ್ಷಕರುಗಳಿಗೂ ತರಗತಿಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡೋದಾದಲ್ಲಿ ಅದು ಕೂಡ ಒ0ದರ್ಥದಲ್ಲಿ ಒಳ್ಳೆಯದೆ.”

ಲೇಖನ: ನರೇಂದ್ರ ಎಸ್ ಗಂಗೊಳ್ಳಿ
ಇಮೇಲ್-nsgangolli@yahoo.com
ಲೇಖಕರು ಹವ್ಯಾಸಿ ಬರಹಗಾರರು ಹಾಗೂ ಉಪನ್ಯಾಸಕರು.