ಜುಲೈ 1: ಕರ್ನಾಟಕ ಪತ್ರಿಕಾ ದಿನಾಚರಣೆ

ಕರ್ನಾಟಕದಲ್ಲಿ ಜುಲೈ 1ನ್ನು ಪತ್ರಿಕಾ ದಿನಾಚರಣೆಯಾನ್ನಾಗಿ ಆಚರಿಸಲಾಗಿತ್ತಿದೆ. ಕನ್ನಡದ ಮೊದಲ ಪತ್ರಿಕೆ ''ಮಂಗಳೂರು ಸಮಾಚಾರ'' ಜುಲೈ 1, ಕ್ರಿ.ಶ.1843ರಲ್ಲಿ ರೆವರೆಂಡ್ ಫಾದರ್ ಹರ್ಮನ್ ಮೊಗ್ಲಿಂಗ್ ಇವರ ಸಂಪಾದಕತ್ವದಲ್ಲಿ ಆರಂಭಗೊಂಡಿತು. ಈ ದಿನದ ನೆನಪಾಗಿ ಕರ್ನಾಟಕದಲ್ಲಿ ಜುಲೈ 1ನ್ನು ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ. 1982 ರಲ್ಲಿ ಅಸ್ತಿತ್ವಕ್ಕೆ ಬಂದ ಮಾದ್ಯಮ ಅಕಾಡೆಮಿ ಪತ್ರಿಕಾ ದಿನಾಚರಣೆಯ ಮುಂದಾಳತ್ವವನ್ನು ವಹಿಸುತ್ತಿದೆ. 1996 ರಿಂದ ಪ್ರತಿ ವರ್ಷ ಈ ಆಚರಣೆ ನಡೆಯುತ್ತಿರುವುದು ಗಮನಾರ್ಹ.

ಹರ್ಮನ್ ಮೊಗ್ಲಿಂಗ್:
   ಕನ್ನಡದ ಮೊದಲ ಪತ್ರಿಕೆಯನ್ನು ಆರಂಭಿಸಿದ  ಹರ್ಮನ್ ಮೊಗ್ಲಿಂಗ್ ಅವರನ್ನು ಕನ್ನಡ ಪತ್ರಿಕೆಯ ಪಿತಾಮಹ ಎಂದು ಕರೆಯಲಾಗಿದೆ. 1811ರಲ್ಲಿ ಜರ್ಮನಿಯ ಬ್ರಾಕನ್ ಹೀಮ್  ಎಂಬಲ್ಲಿ ಜನಿಸಿದ ರೆವರೆಂಡ್  ಹರ್ಮನ್ ಮೊಗ್ಲಿಂಗ್ ವಿದೇಶಿಗನಾದರೂ ಕನ್ನಡದಲ್ಲಿ ಅಪಾರ ಪ್ರೇಮವನ್ನಿಟ್ಟು ಕನ್ನಡಕ್ಕೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ಮೊದಲಿಗನಾದವನು. 4 ಪುಟಗಳ ಪಾಕ್ಷಿಕ ಪತ್ರಿಕೆಯಾಗಿ ಹೊರಬಂದ ''ಮಂಗಳೂರು ಸಮಾಚಾರ'' ಕನ್ನಡದ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಗೆ  ಪಾತ್ರವಾಯಿತು. ಕಲ್ಲಚ್ಚಿನಲ್ಲಿ ಮುದ್ರಿತಗೊಳ್ಳುತ್ತಿದ್ದ ಪತ್ರಿಕೆಯ ಬೆಲೆ ಆ  2 ಪೈಸೆಯಾಗಿತ್ತು. ‘ಜಾತಿ ವಿಚಾರಣೆ’, ‘ದೇವ ವಿಚಾರಣೆ’ ಹಾಗು ‘ಬೈಬಲ್ಲಿನ ಕೆಲ ಕತೆಗಳು’ ಮೊಗ್ಲಿಂಗ್ ನ ಕೆಲವು ಕೃತಿಗಳಾಗಿವೆ.
***

       ಕನ್ನಡ ಪತ್ರಿಕೋದ್ಯಮದ ಏಳಿಗೆಗೆ ಕಾರಣರಾದ ಎಲ್ಲರನ್ನೂ ನೆನೆಯುತ್ತಾ, ಪ್ರಯೋಗಶೀಲತೆಯ ಮೂಲಕ ಪತ್ರಿಕೋದ್ಯಮ ತನ್ನ ನಿರಂತರತೆಯನ್ನು ಕಾಯ್ದುಕೊಳ್ಳಲಿ ಎಂದು ಆಶಿಸುತ್ತಾ, ಎಲ್ಲಾ ಮಾಧ್ಯಮಗಳು ತಮ್ಮ ಜವಾಜ್ದಾರಿಯನ್ನು ನಿಭಾಯಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಎತ್ತಿ ಹಿಡಿಯಲಿ ಎಂದು ಬಯಸುತ್ತಾ,  ಪತ್ರಿಕಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಿದ್ದೆವೆ.
-ಸಂ

 ಕುಂದಾಪ್ರ ಡಾಟ್ ಕಾಂ- editor@kundapra.com