
"ಪರಮ ದಯಾಪರನೂ, ಕರುಣಾನಿಧಿಯೂ
ಆದ ಅಲ್ಲಾಹುವಿನ ನಾಮದಿಂದ ಸರ್ವಸ್ಥುತಿ. ಅವನು ಸಕಲ ವಿಶ್ವದ ಪ್ರಭು, ಪರಮ ದಯಾಳು,
ಕರುಣಾನಿಧಿ, ನಿರ್ಣಾಯಕ ದಿನದ ಅಧಿಪತಿ, ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ
ಮತ್ತು ನನ್ನಿಂದ ಸಹಾಯ ಬೇಡುತ್ತೇನೆ. ನಮಗೆ ಸನ್ಮಾರ್ಗವನ್ನು ತೋರಿಸು, ನೀನು
ಅನುಗ್ರಹಿಸಿದವರ ಮಾರ್ಗ, ನಿನ್ನ ಕ್ರೋಧಕ್ಕೆ ಪಾತ್ರರಾದವರ ಮಾರ್ಗ(ನೀನು ತೋರಿದ)ದಲ್ಲಿ
ದಾರಿಯನ್ನು ತಪ್ಪಿ ನಡೆದವರ ಮಾರ್ಗವೂ ಅಲ್ಲ" ಎಂದು ಪ್ರಾರ್ಥನೆ ಮಾಡುತ್ತಾರೆ.

ಝಕಾತ್(ದಾನ): ಇಸ್ಲಾಮ್ ಧರ್ಮದಲ್ಲಿ ದಾನಕ್ಕೆ ಝಕಾತ್ ಎನ್ನಲಾಗುತ್ತದೆ. ನಮಾಜ್ ನಂತರದ ಸ್ಥಾನ ಈ ಝಕಾತ್‌ಗೆ ಕೊಡಲಾಗಿದೆ. ಇದು ಇಸ್ಲಾಮಿನ ಅತಿ ಪ್ರಮುಖ ಆಧಾರ ಸ್ತಂಭವಾಗಿದೆ. ಪ್ರತಿಯೊಬ್ಬ ಮುಸ್ಲಿಮನು ತನ್ನ ಸ್ವತ್ತು, ಸಂಪತ್ತುಗಳ ಎರಡೂವರೆ ಶೇಕಡಾವನ್ನು ಪ್ರತಿ ವರ್ಷ ಬಡಬಗ್ಗರಿಗೆ, ದೀನ-ದಲಿತರಿಗೆ, ಸಾಲದಲ್ಲಿ ಮುಳುಗಿದವರಿಗೆ ಅಥವಾ ಧರ್ಮ ಕಾರ್ಯಗಳಿಗೆ ಕಡ್ಡಾಯಗಳಿಗೆ ನೀಡಲೇಬೇಕು. ಉತ್ತಮ ಸ್ಥಿತಿಯಿರುವ ಮುಸ್ಲಿಮರು ನಗದು, ವ್ಯಾಪಾರ, ಸರಕು ಬೆಳ್ಳಿ ಬಂಗಾರ ಇತ್ಯಾದಿಗಳ 40ನೇ ಒಂದಂಶವನ್ನು ಕೃತಕ ನೀರಾವರಿಯ ಕೃಷಿಕರಾದರೆ ಉತ್ಪನ್ನಗಳ ಇಪ್ಪತ್ತನೇ ಒಂದಂಶವನ್ನು ದಾನ ನೀಡಬೇಕು ಎಂಬ ನಿಯಮವಿದೆ. ಇವುಗಳೆಲ್ಲಾ ರಂಜಾನ್ ಸಮಯದಲ್ಲಿ ಆಗಬೇಕು.
ಇ೦ದು ಮು೦ಜಾನೆ ವಿಶೇಷ ಸಮೂಹಿಕ
ಪ್ರಾರ್ಥನೆಯನ್ನು ಸಲ್ಲಿಸಿ ಈದುಲ್ ಪಿತರ್ ಹಬ್ಬದ ಸ೦ದೇಶವನ್ನು ಪರಸ್ಪರ ವಿನಿಮಯ
ಮಾಡಿಕೊ೦ಡರು.
ಎಲ್ಲಾ ಮುಸ್ಲಿ ಬಾಂಧವರಿಗೂ ಈದುಲ್ ಪಿತರ್ ಹಬ್ಬದ ಶುಭಾಶಯಗಳು.
ಕುಂದಾಪ್ರ ಡಾಟ್ ಕಾಂ editor@kundapra.com