ಉಪ್ಪಾ ಅಧ್ಯಕ್ಷರಾಗಿ ಜನಾರ್ದನ್ ಕೊಡವೂರು ಆಯ್ಕೆ

ಉಡುಪಿ: ಇಲ್ಲಿನ ಉಡುಪಿ ಪ್ರೆಸ್ ಫೋಟೋಗ್ರಾಫರ್ಸ್ ಅಸೋಸಿಯೇಶನ್ಸ್ (ಉಪ್ಪಾ) ಇದರ ನೂತನ ಅಧ್ಯಕ್ಷರಾಗಿ ವಿಜಯವಾಣಿ ಪತ್ರಿಕೆಯ ಹಿರಿಯ ಛಾಯಾಪತ್ರಕರ್ತ ಜನಾರ್ದನ್ ಕೊಡವೂರು ಆಯ್ಕೆಯಾಗಿದ್ದಾರೆ.

ಜನಾರ್ಧನ್ ಮಲ್ಪೆ-ಕೊಡವೂರು ರೋಟರಿ ಕ್ಲಬ್ ಸೇರಿದಂತೆ ಹತ್ತಾರು ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದಾರೆ. ಪ್ರತಿಭಾವಂತ ಛಾಯಾಪತ್ರಕರ್ತರಲ್ಲೊರ್ವರಾದ ಇವರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿ, ಗೌರವಗಳಿಗೂ ಅವರು ಭಾಜನರಾಗಿದ್ದಾರೆ.

ಉಪ್ಪಾದ ಕಾರ್ಯದರ್ಶಿಯಾಗಿ ಗಣೇಶ್ ಕಲ್ಯಾಣಪುರ, ಕೋಶಾಧ್ಯಕ್ಷ ಆಸ್ಟ್ರೋಮೋಹನ್, ಪದಾಧಿಕಾರಿಗಳಾಗಿ ಹೇಮನಾಥ್ ಪಡುಬಿದ್ರೆ, ಶರತ್ ಕಾನಂಗಿ, ಉಮೇಶ್ ಕುಕ್ಕುಪಲ್ಕೆ, ಪ್ರಸನ್ನ ಕೊಡವೂರು ಆಯ್ಕೆಯಾಗಿರುತ್ತಾರೆ.

ಕುಂದಾಪ್ರ ಡಾಟ್ ಕಾಂ- editor@kundapra.com