ಕಂಠಪೂರ್ತಿ ಕುಡಿದು ಮೊಬೈಲ್ ಟವರ್ ಏರಿ ಕುಳಿತ ಭೂಪ

ಕುಂದಾಪುರ: ತನಗೆ ಬರಬೇಕಾದ ಹಣ ಬರಲಿಲ್ಲ ಎಂದು ತಲೆಬಿಸಿ ಮಾಡಿಕೊಂಡು ಕಂಠಪೂರ್ತಿ ಕುಡಿದ ವ್ಯಕ್ತಿಯೋರ್ವ ಮೊಬೈಲ್ ಟವರಿನ ತುದಿ ಏರಿ ಕುಳಿತು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ವಂಡ್ಸೆ ಪೇಟೆಯ ಬಳಿ ನಡೆದಿದೆ.

ಘಟನೆಯ ವಿವರ(ಕುಂದಾಪ್ರ ಡಾಟ್ ಕಾಂ ವರದಿ)
ಕೇರಳದ ಕೊಲ್ಲಂ ಮೂಲದ ಬೀಜು(28) ಎಂಬ ವ್ಯಕ್ತಿಯೋರ್ವ ಕಳೆದ ಎಂಟು ವರ್ಷಗಳಿಂದ ವಂಡ್ಸೆಯಲ್ಲಿ ಬಾವಿ ರಿಂಗ್ ತಯಾರಿಸುವ ಕೆಲಸ ಮಾಡಿಕೊಂಡಿದ್ದರು. ಕೇರಳ ಮೂಲದ ಶಶಿಧರ್ ಎಂಬುವವರೊಂದಿಗೆ ಕೆಲಸಕ್ಕಿದ್ದ ಬೀಜು ಒಂದು ವರ್ಷದ ಹಿಂದಷ್ಟೇ ಸ್ವತಃ ರಿಂಗ್ ತಯಾರಿಸುವ ಉದ್ಯಮದಲ್ಲಿ ತೊಡಗಿಕೊಂಡಿದ್ದರು(ಕುಂದಾಪ್ರ ಡಾಟ್ ಕಾಂ ವರದಿ) ಆದರೆ ಹಿಂದೆ ಅವರು ಕೆಲಸ ಮಾಡುತ್ತಿದ್ದ ಶಶೀಧರ್ ಕೊನೆಯ ಒಂದು ವರ್ಷದ ಸುಮಾರು 60,000ರೂ ಹಣವನ್ನು ನೀಡುವುದು ಬಾಕಿ ಇತ್ತೆನ್ನಲಾಗಿದೆ. ಬಗ್ಗೆ ಅವರ ಬಳಿ ಕೆಲವು ದಿನಗಳ ಹಿಂದೆ ವಿಚಾರಿಸಿದಾಗ ಅವರು ಹಣ ನೀಡರಲಿಲ್ಲ. ಇದರಿಂದ ತೀರಾ ತಲೆಕಡೆಸಿಕೊಂಡಿದ್ದ ಬೀಜು ಕಂಠಪೂರ್ತಿ ಕುಡಿದು ವಂಡ್ಸೆ ಬಸ್ ನಿಲ್ದಾಣದ ಬಳಿ ಇರುವ 300 ಅಡಿ ಎತ್ತರದ ಖಾಸಗಿ ಕಂಪೆನಿಯೊಂದರ ಮೊಬೈಲ್ ಟವರ್ ಏರಿ ಕುಳಿತು ಬಿಟ್ಟಿದ್ದ. (ಕುಂದಾಪ್ರ ಡಾಟ್ ಕಾಂ ವರದಿ)

ಟವರ್ ಏರಿ ಪೋನ್ ಕರೆ(ಕುಂದಾಪ್ರ ಡಾಟ್ ಕಾಂ ವರದಿ)
ಟವರ್ ಏರಿದ ಬೀಜು ತನ್ನ ಮಾಲಿಕನ ಸ್ನೇಹಿತನಿಗೆ ಕರೆ ಮಾಡಿ ಬಾಕಿ ಇರುವ ಹಣ ಕೂಡಲೇ ನೀಡದಿದ್ದರೇ ತಾನು ಟವರ್ ನಿಂದ ಬಿದ್ದು ಸಾಯುವುದಾಗಿ ಹೇಳಿದ್ದಾನೆ. ವಿಷಯ ತಿಳಿದು ಅಲ್ಲಿಗೆ ಓಡಿ ಬಂದ ಮಾಲಿಕರು ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದಾನೆ. ಅಷ್ಟರಲ್ಲಿಯೇ ಸ್ಥಳಕ್ಕಾಗಮಿಸಿದ (ಕುಂದಾಪ್ರ ಡಾಟ್ ಕಾಂ ವರದಿ) ಅಗ್ನಿಶಾಮಕ ಸಿಬ್ಭಂಧಿಗಳು 300ಅಡಿ ಎತ್ತರದ ಟವರ್ ತುದಿಯಲ್ಲಿ ಕುಳಿತಿದ್ದ ಬೀಜುವಿನ ಮನವೊಲಿಸಿ ಕೆಳಕ್ಕಿಳಿಸಿ ಅಲ್ಲಿಂದ ವಂಡ್ಸೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದ್ದಾರೆ.

ಸುಮಾರು ಒಂದು ಗಂಟೆಗಳ ಕಾಲ ನಡೆದ ಆತ್ಮಹತ್ಯಾ ಪ್ರಹಸನವನ್ನು ನೋಡಲು ನೂರಾರು ಮಂದಿ ಅಲ್ಲಿ ಜಮಾಯಿಸಿದ್ದರು. ತಮ್ಮ ಮೊಬೈಲುಗಳಲ್ಲಿ ಈ ಸನ್ನಿವೇಶವನ್ನು ಚಿತ್ರಿಸುತ್ತಾ ಎಂಜಾಯ್ ಮಾಡುತ್ತಿದ್ದುದು ಕಂಡುಬಂತು! ಕೊಲ್ಲೂರು ಎಎಸ್ ಸ್ಥಳದಲ್ಲಿದ್ದರು(ಕುಂದಾಪ್ರ ಡಾಟ್ ಕಾಂ ವರದಿ)


* ಬೀಜು ವಿಪರೀತ ಕುಡಿಯುವ ಚಟ ಹೊಂದಿದ್ದ. ಹಣ ನೀಡಿದರೆ ಕುಡಿದು ದುಂದುವೆಚ್ಚ ಮಾಡುತ್ತಾನೆ ಎಂಬ ಕಾರಣಕ್ಕಾಗಿ ನೀಡಿರಲಿಲ್ಲ. ಊರಿಗೆ ಹೋಗುವಾಗ ಪೂರ್ತಿ ಹಣವನ್ನು ನೀಡುವುದಾಗಿಯೂ ಹೇಳಿದ್ದೆ. ಅಷ್ಟರಲ್ಲಿಯೇ ಆತ ಕೆಲಸ ಮಾಡಿಕೊಂಡಿದ್ದಾನೆ - ಬೀಜುವಿನ ಮೊದಲಿನ ಮಾಲಿಕ (ಕುಂದಾಪ್ರ ಡಾಟ್ ಕಾಂ ವರದಿ)

ವರದಿ-ಸುನಿಲ್ ಹೆಚ್. ಜಿ. ಬೈಂದೂರು

ಕುಂದಾಪ್ರ ಡಾಟ್ ಕಾಂ- editor@kundapra.com