ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಆಳ್ವಾಸ್ ಚಾಂಪಿಯನ್

 ಕುಂದಾಪ್ರ ಡಾಟ್ ಕಾಂ ಸುದ್ದಿ.

ಮೂಡಬಿದಿರೆ: ಆಳ್ವಾಸ್ ಪುರುಷರ ತಂಡ ಬಾಗಲಕೋಟೆಯ ಬೀಳಗಿಯಲ್ಲಿ ಮುಕ್ತಾಯಗೊಂಡ ರಾಜ್ಯಮಟ್ಟದ ಪುರು?ರ ಬಾಲ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.ರಾಜ್ಯದ 16 ಪುರು?ರ ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಫೈನಲ್ ನಲ್ಲಿ ಆಳ್ವಾಸ್ ತಂಡ ಬೆಂಗಳೂರಿನ ಸಹ್ಯಾದ್ರಿ ಯೂತ್ ಕ್ಲಬ್ ತಂಡವನ್ನು ೩೫-೧೯ ಅಂಕಗಳಿಂದ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸೆಮಿಫೈನಲ್ ಪಂದ್ಯಗಳಲ್ಲಿ ಆಳ್ವಾಸ್ ತಂಡ ಕಾಮಧೇನು ಯೂತ್ ಕ್ಲಬ್ ತಂಡವನ್ನು ಹಾಗೂ ಸಹ್ಯಾದ್ರಿ ತಂಡ ಹಾಸನಂಬ ಬಿಬಿಸಿ ತಂಡಗಳನ್ನು ನೇರ ಸೆಟ್ ಗಳಿಂದ ಮಣಿಸಿ ಫೈನಲ್ ಹಂತಕ್ಕೆ ತೇರ್ಗಡೆ ಗೊಂಡಿದ್ದವು.

ಸಹ್ಯಾದ್ರಿ ಬೆಂಗಳೂರು ರನ್ನರ್-ಅಪ್, ಹಾಸನಂಬ ಬಿಬಿಸಿ ತೃತೀಯ ಸ್ಥಾನವನ್ನು ಹಾಗೂ ಕಾಮಧೇನು ಬೆಂಗಳೂರು ತಂಡ ನಾಲ್ಕನೇ ಸ್ಥಾನವನ್ನು ಪಡೆದುಕೊಂಡವು.