ಭಂಡಾರ್‌ಕಾರ್ಸ್ ಕಾಲೇಜು: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ ಉದ್ಘಾಟನೆ

 ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯ ಹಾಗೂ ಕುಂದಾಪುರದ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಶ್ರಯದಲ್ಲಿ ಕೊಡ್ಲಾಡಿ ಮಾರ್ಡಿ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ಅಂಗವಾಗಿ ಏರ್ಪಡಿಸಿದ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರ ಎಮ್. ಆನಂದ ಶೆಟ್ಟಿ ಉದ್ಘಾಟಿಸಿದರು. 

ಕುಂದಾಪುರದ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಪ್ರಾಂಶುಪಾಲ ಡಾ. ಎನ್. ಪಿ. ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಭಂಡಾರ್‌ಕಾರ್ಸ್ ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ  ಡಾ. ಶುಭಕರ ಆಚಾರಿ,  ಆಜ್ರಿ ಗ್ರಾಪಂ ಅಧ್ಯಕ್ಷ ಅಶೋಕ್ ಕುಲಾಲ್, ಗುರಿಕಾರ ಅಣ್ಣಯ್ಯ ನಾಯ್ಕ್ ಮರ್ಜಿ, ಮುಖ್ಯೋಪಾಧ್ಯಾಯನಿ ಗೌರಿ ಬಾಯ್, ಗ್ರಾಪಂ ಸದಸ್ಯ ಪ್ರವೀಣ ಕುಮಾರ್ ಶೆಟ್ಟಿ, ರತ್ನಾಕರ ನಾಯ್ಕ್, ಗಾಯತ್ರಿ, ಗ್ರಾಪಂ ಮಾಜಿ ಅಧ್ಯಕ್ಷ ಕೊಡ್ಲಾಡಿ ಶುಭಾಶ್ಚಂದ್ರ ಶೆಟ್ಟಿ, ರಾಮ ಮೊಗವೀರ ಹೊಲದಮನೆ, ಚಂದ್ರಶೇಖರ ಶೆಟ್ಟಿ, ಶಶಿಕಾಂತ್ ಹತ್ವಾರ್, ಎಸ್ಡಿಎಂಸಿ ಅಧ್ಯಕ್ಷ ಗಜೇಂದ್ರ ನಾಯ್ಕ್ ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಶಂಕರ ಬಿ.ಕೆ, ಅಜೇಯ ಯುವಕ ಮಂಡಲ ಅಧ್ಯಕ್ಷ ಪ್ರವೀಣ್ ನಾಯ್ಕ್, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಅರುಣ್ ಎ. ಎಸ್, ರಾಮಚಂದ್ರ ಆಚಾರ್, ಶಿಬಿರಾಧಿಕಾರಿಗಳಾದ ಶಶಿಕಾಂತ್ ಹತ್ವಾರ್, ಅಣ್ಣಪ್ಪ ಪೂಜಾರಿ, ಅಶ್ವಿನಿ ಇದ್ದರು. 

ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿ ವೈಷ್ಣವಿ ಭಟ್ ಕಾರ್ಯಕ್ರಮ ನಿರ್ವಹಿಸಿದರು. ರಾಮಚಂದ್ರ ಆಚಾರ್ ಸ್ವಾಗತಿಸಿ, ಪ್ರಿಯಾ ವಂದಿಸಿದರು.