ಕೆರ್ಗಾಲು: ಗ್ರಾಮೀಣ ಕ್ರೀಡಾಕೂಟ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನೆಹರು ಯುವ ಕೇಂದ್ರ ಉಡುಪಿ ಹಾಗೂ ಶ್ರೀ ಮಹಾಗಣಪತಿ ಸೆಲೆಕ್ಟ್ ತಂಡ (ರಿ.) ಮಟ್ನಕಟ್ಟೆ-ಕೆರ್ಗಾಲ್ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಶ್ರೀ ಮಹಾಗಣಪತಿ ದೇವಸ್ಥಾನ ಮಟ್ನಕಟ್ಟೆಯ ಆಡಳಿತ ಮೊಕ್ತೇಸರರಾದ ಅಶೋಕ್ ಭಟ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಕ್ರೀಡಾಕೂಟವನ್ನು ಸ್ಪರ್ಧಾಳುಗಳು ಸರಿಯಾಗಿ ಬಳಸಿಕೊಂಡರೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಪ್ರತಿಭಾನ್ವಿತರಾಗಿ ಹೊರಹೊಮ್ಮಬಹುದು ಎಂದರು. 

ಸಂಘದ ಅಧ್ಯಕ್ಷ ಪಾಂಡುರಂಗ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆರ್ಗಾಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಧವ ದೇವಾಡಿಗ.ಸದಸ್ಯರಾದ ಗಣಪತಿ ದೇವಾಡಿಗ, ನೆಹರೂ ಯುವ ಕೇಂದ್ರ ಉಡುಪಿ ಇದರ ಸಂಯೋಜಕಿಯರಾದ ಅಶ್ವಿನಿ, ನಿಧಿ ಮುಂತಾದವರು ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಗಣೇಶ್ ಆರ್. ಎಮ್. ನಿರೂಪಿಸಿದರು. ದೇವರಾಯ ದೇವಾಡಿಗ ಸ್ವಾಗತಿಸಿದರು ಕಾರ್ಯದರ್ಶಿ ವೆಂಕಟೇಶ್ ಬಡಾಮನೆ ವಂದಿಸಿದರು.