ಕ್ರ್ಯಾಕಿಂಗ್ ಕ್ವಾಂಟಿಟೇಟಿವ್ ಮತ್ತು ಲೋಜಿಕಲ್ ರೀಸನಿಂಗ್ ಹರ್ಡಲ್ಸ್ - ಉಪನ್ಯಾಸ

 ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ: ಇಲ್ಲಿನ ಭಂಡಾರ್ಕಾರ‍್ಸ್ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕ್ರ್ಯಾಕಿಂಗ್ ಕ್ವಾಂಟಿಟೇಟಿವ್ ಮತ್ತು ಲೋಜಿಕಲ್ ರೀಸನಿಂಗ್ ಹರ್ಡಲ್ಸ್ ಎಂಬ ವಿಷಯದ ಕುರಿತು ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರ  ಪ್ರಾಧ್ಯಾಪಕರಾದ ಡಾ. ಶ್ರೀಮತಿ ಅಡಿಗ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ ವಹಿಸಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲಿ ಎಂದು ಹೇಳಿದರು. 

ವೇದಿಕೆಯಲ್ಲಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ  ಕಾರ್ಯಕ್ರಮ ಸಂಯೋಜಕಿ ನಿಶಾ ಎಂ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಂಜನ್ (ದ್ವಿತೀಯ ಬಿ.ಎಸ್.ಸಿ) ಕಾರ್ಯಕ್ರಮ ನಿರೂಪಿಸಿ ವಾಣಿ ಭಟ್ (ದ್ವಿತೀಯ ಬಿ.ಎಸ್.ಸಿ)  ವಂದಿಸಿದರು.