ವಂಡ್ಸೆ ಮಾದರಿ ಶಾಲೆಗೆ ಕಂಪ್ಯೂಟರ್ ಕೊಡುಗೆ

 ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿಗೆ  ಶಾಲಾ ಪೂರ್ವ ವಿದ್ಯಾರ್ಥಿ, ಬೆಂಗಳೂರಿನ ಟೆಟ್ರಾಪ್ಯಾಕ್ ಪ್ರೈವೇಟ್‌ನ ಲಿ, ಸಂಸ್ಥೆಯ ಉದ್ಯೋಗಿ ಚಿತ್ತೂರು ಉದಯ್ ಮಡಿವಾಳ ಅವರು ಕಂಪ್ಯೂಟರನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆ ಇವತ್ತು ಸಾಕಷ್ಟು ಬದಲಾವಣೆಯಾಗಿದೆ. ಶೈಕ್ಷಣಿಕವಾಗಿ ಬಹಳ ಸೌಲಭ್ಯ ಒದಗಿಸಿಕೊಂಡಿದೆ. ತರಗತಿಗಳಲ್ಲಿ ಕಲಿಕಾ ಉಪಕರಣ ಬಹಳಷ್ಟು ಇದ್ದು ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಹೆಚ್ಚಿಸಲು ಇದು ತುಂಬಾ ಸಹಕಾರಿಯಾಗುತ್ತದೆ.  ಮುಂದಿನ ದಿನಗಳಲ್ಲಿ  ನನ್ನಿಂದಾದ ಸಹಕಾರ ನೀಡಲು ಪ್ರಯತ್ನಿಸುತ್ತೇನೆ. ಎಲ್ಲಾ ಪೂರ್ವ ವಿದ್ಯಾರ್ಥಿಗಳ ಸಹಕಾರ ಶಾಲೆಗೆ ಸಿಗಲಿ ಎಂದರು.

ಕೊಡುಗೆ ನೀಡಿದ  ಉದಯ್  ಮಡಿವಾಳ ಅವರನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಎ.ಜಿ, ಸದಸ್ಯರಾದ ದಿನೇಶ್ ಭಂಡಾರಿ ಗೌರವಿಸಿದರು. ಶಾಲೆಯ ಮುಖ್ಯಶಿಕ್ಷಕ ಚಂದ್ರ ನಾಯ್ಕ್ ಎಚ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿ ಆಶಾ ವಂದಿಸಿದರು. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.