ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಮುನ್ನಡೆಸಿದ ಕುಂದಾಪುರದ ಹೆಚ್. ಟಿ. ಮಂಜುನಾಥ್

ಕುಂದಾಪ್ರ ಡಾಟ್ ಕಾಂ ಸುದ್ದಿ:
ಕುಂದಾಪುರ: ದೆಹಲಿಯ ರಾಜ್‌ಪಥ್‌ನಲ್ಲಿ ಗಣರಾಜ್ಯೋತ್ಸವದಂದು ನಡೆದ ಪಥಸಂಚಲನದಲ್ಲಿ ಭಾರತೀಯ ಕರಾವಳಿ ಕಾವಲು ಪಡೆಯ ಡೆಪ್ಯೂಟಿ ಕಮಾಂಡೆಂಟ್ ಹೆಚ್. ಟಿ. ಮಂಜುನಾಥ್ ಅವರು ತಮ್ಮ ತಂಡವನ್ನು ಮುನ್ನಡೆಸಿದ್ದಾರೆ.


ಕುಂದಾಪರ ತಾಲೂಕಿನ ಕುಂಭಾಶಿಯವರಾದ ಹೆಚ್. ಟಿ ಮಂಜುನಾಥ್ ಅವರು ಕಳೆದ ಕೆಲವು ವರ್ಷಗಳಿಂದ ಭಾರತಿಯ ಕರಾವಳಿ ಕಾವಲು ಪಡೆಯ ಡೆಪ್ಯೂಟಿ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದು, ಗಣರಾಜ್ಯೋತ್ಸವದಂದು ನಡೆದ ಪಥ ಸಂಚಲನದ್ದಲ್ಲಿ ಭಾರತಿಯ ಕರಾವಳಿ ಕಾವಲು ಪಡೆಯ ನೇತೃತ್ವ ವಹಿಸಿ ಮುನ್ನೆಡೆಸಿದ್ದರು.

ಅವರು ನಿವೃತ್ತ ಪಿ.ಎಸ್.ಐ ಟಿ. ಎನ್ ತಿಮ್ಮಪ್ಪ ಹಾಗೂ ವಿಜಯಲಕ್ಮ್ಷೀ ಅವರ ಪುತ್ರರಾಗಿದ್ದಾರೆ. ಹೆಚ್. ಟಿ. ಮಂಜುನಾಥ್ ಹಾಗೂ ವಿದ್ಯಾರಾಣಿ ಎ. ದಂಪತಿಗಳಿಗೆ ಒರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ.