ಉಪ್ಪುಂದ ರಥಬೀದಿ ಶಾಲಾ ವಿದ್ಯಾರ್ಥಿಗಳಿಗೆ ಗುರುತಿನ ಕಾರ್ಡ್ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರು: ತಾಲೂಕಿನ ಉಪ್ಪುಂಧ ರಥಬೀದಿ ಸ.ಹಿ.ಪ್ರಾ. ಶಾಲೆಯಲ್ಲಿ ಶಾಲಾ ಹಳೆ ವಿದ್ಯಾರ್ಥಿ ಜಗದೀಶ್ ದೇವಾಡಿಗ ಮೇಲ್ಮನೆ ಇವರು ಕೊಡುಗೆಯಾಗಿ ನೀಡಿದ ಗುರುತಿನ ಕಾರ್ಡ್ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಶಾಲಾ  ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕೇಶವ ದೇವಾಡಿಗ, ಉಪಾಧ್ಯಕ್ಷರಾದ ಪ್ರತಿಮಾ ದೇವಾಡಿಗ, ಗ್ರಾಂ.ಪಂ. ಸದಸ್ಯರಾದ ಮಂಜುನಾಥ ದೇವಾಡಿಗ, ಅಂಗನವಾಡಿ ಮೇಲ್ವಿಚಾರಕಿ ಭಾಗೀರಥಿ ಹಾಗೂ ಎಸ್.ಡಿ.ಎಂ.ಸಿ ಸದಸ್ಯರುಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಮಂಜುನಾಥ್ ಎಲ್, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹ ಶಿಕ್ಷಕಿ ರೇಷ್ಮಾ ಆರ್. ಸ್ವಾಗತಿಸಿದರು . ಗೌರವ ಶಿಕ್ಷಕಿ ಪಲ್ಲವಿ ಧನ್ಯವಾದವನ್ನಿತ್ತರು. ಸಹ ಶಿಕ್ಷಕಿ ಜ್ಯೊತಿ ಕೆ. ಕಾರ್ಯಕ್ರಮ ನಿರೂಪಿಸಿದರು.