ಬೈಂದೂರು ಸಿಟಿ ಜೆಸಿಐ ಪದಪ್ರಧಾನ ಸಮಾರಂಭ

 ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರು: ಜೆಸಿಐ ಬೈಂದೂರು ಸಿಟಿ ಘಟಕದ 2022ನೇ ಸಾಲಿನ ಪದಪ್ರಧಾನ ಸಮಾರಂಭ ಇಲ್ಲಿನ ಅಂಬಿಕಾ ಇಂಟರ್‌ನ್ಯಾಶನಲ್‌ನಲ್ಲಿ ಜರುಗಿತು.

ಉದ್ಯಮಿ ಲಕ್ಷ್ಮಿಕಾಂತ್ ಬೆಸ್ಕೂರ್ ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಜೇಸಿಐ ಸಂಸ್ಥೆ 18-40 ವರ್ಷ ವಯಸ್ಸಿನ ಯುವಕ, ಯುವತಿಯರಿಗೆ ನಾಯಕತ್ವದ ಗುಣಗಳನ್ನು ಕಲಿಸುವುದರೊಂದಿಗೆ ಸಂಸದೀಯ ವ್ಯವಹಾರ ಮತ್ತು ಜೀವನ ನಿರ್ವಹಣೆ ಕುರಿತಾದ ಕಾರ್ಯಚಟುವಟಿಕೆಗಳ ಮೂಲಕ ಮುಖ್ಯವಾಹಿನಿಗೆ ತರುತ್ತಿದೆ ಎಂದು ಹೇಳಿದರು.
ನಿರ್ಗಮಿತ ಅಧ್ಯಕ್ಷ ಶ್ರೀಧರ ಆಚಾರ್ಯ ಇವರು ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಸವಿತಾ ದಿನೇಶ್ ಗಾಣಿಗ ಇವರಿಗೆ ಅಧಿಕಾರ ಹಸ್ತಾಂತರಿಸಿದರು. ಪೂವಾಧ್ಯಕ್ಷೆ ಪ್ರಿಯದರ್ಶಿನಿ ಕಮಲೇಶ್ ಇವರಿಗೆ 'ಕಮಲ ಪಶಸ್ತಿ' ಪ್ರದಾನಿಸಲಾಯಿತು. ಕಳೆದ ಸಾಲಿನ 10 ಸಕ್ರೀಯ ಸದಸ್ಯರನ್ನು ಗೌರವಿಸಲಾಯಿತು. ನೂತನ 7 ಸದಸ್ಯರು ಸೆರ್ಪಡೆಗೊಂಡರು. 

ಉದ್ಯಮಿ ಕೆ. ಎಂ. ಲಕ್ಷ್ಮಣ, ಜೆಸಿಐ 15ರ ವಲಯ ಉಪಾಧ್ಯಕ್ಷ ವಿಜಯ್ ನರಸಿಂಹ ಐತಾಳ್, ಶಿರೂರು ಜೆಸಿಐ ಪೂರ್ವಾಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ, ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಮೀನಾಕ್ಷಿ ಅಶೋಕ್, ಯೋಜನಾಧಿಕಾರಿ ನರೇಂದ್ರ ಶೇಟ್, ಕಾರ್ಯಕ್ರಮ ಸಂಯೋಜಕಿ ಅನಿತಾ ಕೆ.ಆರ್., ಜೇಸಿರೇಟ್ ಅಧ್ಯಕ್ಷೆ ಸೌಮ್ಯಾ ಬಿ., ಜೆಜೆಸಿ ಅಧ್ಯಕ್ಷ ಅನೂಪ್ ಡಿ. ಗಾಣಿಗ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಸತೀಶ್ ಎಂ. ವಂದಿಸಿದರು. ನಂತರ ನೃತ್ಯ ನಿರ್ದೇಶಕಿ ಭಾವನಾ ರಾಮ ದೇವಾಡಿಗ ಪೂನಾ ಇವರಿಂದ ನೃತ್ಯ ಹಾಗೂ ಗೀತಾ ಬೈಂದೂರು ಇವರಿಂದ ಗಾನಸುಧಾ ನಡೆಯಿತು.