ಕೋಡಿ: ಕಡಲಾಮೆ ಮೊಟ್ಟೆ ಪತ್ತೆ, ಹ್ಯಾಚರ್ ಮೂಲಕ ರಕ್ಷಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಡಿ ಸೀತಾರಾಮ ಭಜನಾ ಮಂದಿರ ಬಳಿ ಶನಿವಾರ ಕಡಲಾಮೆ ಮೊಟ್ಟೆ ಪತ್ತೆಯಾಗಿದ್ದು, ಹ್ಯಾಚರ್ ಮೂಲಕ ರಕ್ಷಣೆ ಮಾಡಲಾಗಿದೆ.

ಸೀತಾರಾಮ ಭಜನಾ ಮಂದಿರದ ಬಳಿ ಕಡಲಾಮೆ ಮೊಟ್ಟೆ ಸಿಕಿರುವುದು ಮೂರನೇ ಬಾರಿಯಾಗಿದೆ. ಮೊದಲೆರಡು ಕಡೆ ಮೊಟ್ಟೆ ಪತ್ತೆಮಾಡಿದ ಬಾಬು  ಮೊಗವೀರ ಕಡಲಾಮೆ ಮೊಟ್ಟೆ ಪತ್ತೆ ಮಾಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಆಮೆ ಮೊಟ್ಟೆ ಸಂರಕ್ಷಣೆ ಮಾಡುವ ಎಸ್‌ಎಫ್‌ಎಲ್ ಸದಸ್ಯರಿಗೆ ಹಾಗೂ ಕ್ಷೀನ್ ಕುಂದಾಪುರ ಪ್ರೊಜೆಕ್ಟ್ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು.

ಕೋಡಿ ಅರಣ್ಯ ಇಲಾಖೆ ಫಾರೆಸ್ಟ್ ರಂಜಿತ, ಎಸ್‌ಎಫ್‌ಎಲ್ ವೆಂಕಟೇಶ್, ದಿನೇಶ್ ಸಾರಂಗ, ರಾಘು ಮೊಗವೀರ, ಭರತ್ ಬಂಗೇರ, ಸಂತೋಷ ಕೋಡಿ, ಮೊಟ್ಟೆ ದೊರತ ಸ್ಥಳದ ಸುತ್ತಾ ಬಲೆ ಕಟ್ಟಿ ಹ್ಯಾಚರ್ ನಿರ್ಮಿಸಿ ರಕ್ಷಣೆ ಮಾಡಲಾಗಿದೆ.