ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಯಡ್ತರೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಇದರ ಪುನಃಪ್ರತಿಷ್ಠಾ ಬ್ರಹ್ಮಲಕಶೋತ್ಸವ ದಿನಾಂಕ 20-01-2022 ಗುರುವಾರದಿಂದ ಪ್ರಾರಂಭವಾಗಿ 25-01-2022ರ ತನಕ ಜರುಗಿದೆ.
ದಿನಾಂಕ ಜ.20ರಂದು ಅಪರಾಹ್ನ 3ರಿಂದ ರಾಹುತನಕಟ್ಟೆ ವಠಾರದಿಂದ ಶ್ರೀ ಬ್ರಹ್ಮಬೈದರ್ಕಳ ಗರಡಿಗೆ ಶ್ರೀ ಕೋಟಿ ಚೆನ್ನಯ್ಯನ ಸಹಿತ ಪರಿವಾರ ದೈವಗಳ ವಿಗ್ರಹವನ್ನು ವೈಭವದ ಶೋಭಯಾತ್ರೆಯೊಂದಿಗೆ ಕೊಂಡೊಯ್ಯಲಾಗುವುದು. ಜ.21 ಹಾಗೂ ಜ.22 ರಂದು ವಿವಿಧ ಮುಹೂರ್ತ, ಯಾಗ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಜ.23 ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಬಿಂಬ ಪ್ರತಿಷ್ಠೆ-ಜೀವ ಕಲಶಾಭಿಷೇಕ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಹಾಗೂ ರಾತ್ರಿ 7-50ರಿಂದ ಜೀವಕಲಶಾಭಿಷೇಕ, ದುರ್ಗಾನಮಸ್ಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ 7 ರಿಂದ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಕೋಟಿ ಚೆನ್ನಯ್ಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಜ.24ರಂದು ಬೆಳಿಗ್ಗೆ 9-56 ರಿಂದ 10-45ರ ಅವಧಿಯಲ್ಲಿ ಬ್ರಹ್ಮಕುಂಭಾಭಿಷೇಕ ಬಳಿಕ ಬೈದರ್ಕಳ ಸಂದರ್ಶನ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರುಗಲಿದೆ. ಸಂಜೆ ಅಗೇಲು ಸೇವೆ, ರಾತ್ರಿ ಗೆಂಡಸೇವೆ, ಪಂಜುರ್ಲಿ ದೈವದ ನೇಮೋತ್ಸವ ಮೊದಲಾದ ಧಾರ್ಮಿಕ ಕಾರ್ಯ್ಕರಮಗಳು ನಡೆಯಲಿದೆ.
ಜ.25ರಂದು ಗರಡಿ ಅರ್ಚಕರಿಂದ ಶುದ್ದಿಕರಣ, ಪ್ರಸನ್ನ ಪೂಜೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗರಡಿಯ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.