ಕೊಮೆ-ಕೊರವಡಿ ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂದಿರದ ಶಿಲಾನ್ಯಾಸ

  ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ: ಭಜನಾ ಮಂದಿರ ಮತ್ತು ದೇವಸ್ಥಾನಗಳು ಸಮಾಜದ ಬಹುದೊಡ್ಡ ಆಸ್ತಿಯಾಗಿವೆ. ಊರಿಗೊಂದು ಭಜನಾ ಮಂದಿರವಿದ್ದರೇ ಅಲ್ಲಿನ ಮಕ್ಕಳು ದಾರಿ ತಪ್ಪಲಾರರು. ಇಲ್ಲವಾದಲ್ಲಿ ಬೀಡಾಡಿ ಮಕ್ಕಳಾಗಿ ವ್ಯಸನ ಮುಕ್ತರಾಗಿ ಸಮಾಜದಲ್ಲಿ ಘಾತಕಶಕ್ತಿಗಳಾಗಿ ಬೆಳೆಯುತ್ತಾರೆ ಎಂದು ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಆನಂದ ಸಿ ಕುಂದರ್ ಹೇಳಿದರು.

ತೆಕ್ಕಟ್ಟೆ ಸಮೀಪದ ಕೊಮೆ-ಕೊರವಡಿಯಲ್ಲಿ ಸೋಮವಾರ 75 ವರ್ಷಗಳ ಸುದೀರ್ಘ ಇತಿಹಾಸವಿರುವ ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂದಿರದ ನೂತನ ಶಿಲಾಮಯ ದೇವಳದ ಶಿಲಾನ್ಯಾಸ ಕಾರ‍್ಯಕ್ರಮವನ್ನು ನೆರವೇರಿಸಿ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಭೋಜರಾಜ್ ಆರ್ ಕಿದಿಯೂರ್ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ಶ್ರೀಪತಿ ಭಟ್ ಕಕ್ಕುಂಜೆ ಧಾರ್ಮಿಕ ವಿಧಿ ವಿಧಾನ ನೆರವೇರಿಸಿ ಶುಭಶಂಸನೆಗೈದರು.  ಬಸ್ರೂರು ಎಂ.ವಿ.ಬಂಗೇರ, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ನಿರ್ದೇಶಕ ಗಣೇಶ್ ಬಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ತಾಲೂಕು ಭಜನಾ ಒಕ್ಕೂಟದ ಅಧ್ಯಕ್ಷ ಜಯಕರ ಪೂಜಾರಿ, ತಾಲೂಕು ಶ್ರೀ.ಧ.ಮಂ. ಭಜನಾ ಪರಿಷತ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿಗಾರ್, ಶ್ರೀ ಬೊಬ್ಬರ್ಯ ಹಾಗೂ ಹಳೆಯಮ್ಮ ಮತ್ತು ಪರಿವಾರ ದೈವಸ್ಥಾನದ ಆಡಳಿತ ಮೊಕ್ತೇಸರ ಅಶೋಕ ಹತ್ವಾರ್, ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ವಿಠ್ಠಲ್ ಪೈ, ಮಂದಿರದ ಅಧ್ಯಕ್ಷ ಕೆ.ಚಂದ್ರ ಕಾಂಚನ್, ತೆಕ್ಕಟ್ಟೆ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ ಕಾಂಚನ್ ಕೊಮೆ ಮತ್ತಿತರರು ಉಪಸ್ಥಿತರಿದ್ದರು. 


ಟಿ.ಆರ್.ಮಂಜುನಾಥ್ ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ವಿಠ್ಠಲ್ ಪೈ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಗೋಪಾಲ ಪೂಜಾರಿ ಕಾರ‍್ಯಕ್ರಮ